ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಕೊನೆಗೂ ಚಂಪಾಗೆ ಸಿಕ್ತು ಪ್ರತಿಷ್ಠಿತ ಪಂಪ ಪ್ರಶಸ್ತಿ (Pampa Award | Champa | Sadananda Gowda | Yeddyurappa | Kannada Litarature | Bangalore News,)
Champa
PR
ಅಂತೂ ಕೊನೆಗೂ ರಾಜ್ಯ ಸರ್ಕಾರ ನಾಡಿನ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರಿಗೆ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ನೀಡಲು ಮುಂದಾಗಿದೆ.

ಈ ಬಗ್ಗೆ ಮಂಗಳವಾರ ಅಧಿಕೃತ ಆದೇಶ ಹೊರಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಂಪಾ ಅವರಿಗೂ ಸಂದೇಶ ರವಾನಿಸಿದೆ. ನಕ್ಸಲ್ ಬೆಂಬಲಿಗರೆಂಬ ನೆಪದಲ್ಲಿ ಕೆಲವರಿಗೆ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ವಿಚಾರ ಮಂಡನೆಗೆ ಅವಕಾಶ ನೀಡಬಾರದು ಎಂದು ಯಡಿಯೂರಪ್ಪ ಚಂಪಾ ಅವರಿಗೆ ಸೂಚಿಸಿದ್ದರು.

ಆದರೆ ಯಡಿಯೂರಪ್ಪನವರ ಈ ಸೂಚನೆಯನ್ನು ಚಂಪಾ ಧಿಕ್ಕರಿಸಿದ್ದರಿಂದ ಚಂಪಾ ಅವರಿಗೆ ಕಳೆದ ವರ್ಷವೇ ಸಿಗಬೇಕಾಗಿದ್ದ ಈ ಪ್ರಶಸ್ತಿ ವಿಳಂಬವಾಗುವಂತಾಗಿತ್ತು.

ಇದಾದ ನಂತರ ಟಿ.ವಿ.ವೆಂಕಟಾಚಲ ಶಾಸ್ತ್ರಿ ಅಧ್ಯಕ್ಷತೆಯ ಸಮಿತಿ ಪಂಪ ಪ್ರಶಸ್ತಿಗೆ ಚಂಪಾ ಅವರನ್ನು ಆಯ್ಕೆ ಮಾಡಿ ಸಂಪ್ರದಾಯದಂತೆ ಮುಖ್ಯಮಂತ್ರಿಗಳ ಒಪ್ಪಿಗೆಗೆ ಕಳುಹಿಸಿತ್ತು. ಆದರೆ, ಯಡಿಯೂರಪ್ಪ ಸಾಹಿತ್ಯ ಸಮ್ಮೇಳನದ ವಿಚಾರವನ್ನೇ ನೆಪವಾಗಿಟ್ಟುಕೊಂಡು ಪ್ರಶಸ್ತಿ ಪ್ರಕಟಣೆಯನ್ನು ತಡೆಹಿಡಿದಿದ್ದರು.

ಈ ಹಿನ್ನೆಲೆಯಲ್ಲಿ 2010ರಲ್ಲೇ ಪ್ರದಾನ ಮಾಡಬೇಕಿದ್ದ ಪ್ರಶಸ್ತಿಯನ್ನು 2011ರಲ್ಲಿ ಪ್ರದಾನ ಮಾಡಲಾಗುತ್ತಿದೆ. ಈ ಸಂಬಂಧ ಅಧಿಕೃತ ಆದೇಶವನ್ನೂ ಸದಾನಂದ ಗೌಡ ಸರ್ಕಾರ ಹೊರಡಿಸಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಪಂಪ ಪ್ರಶಸ್ತಿ, ಚಂಪಾ, ಸದಾನಂದ ಗೌಡ, ಯಡಿಯೂರಪ್ಪ, ಕನ್ನಡ ಸಾಹಿತ್ಯ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ