ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಅಶೋಕ್‌ಗೆ ಟಾಂಗ್-ಇದು ಯಡಿಯೂರಪ್ಪ ಗೆಲುವು:ರೇಣುಕಾಚಾರ್ಯ (Karadi Sanganna | Koppal by poll Result 2011| Koppal by election | BJP Wins Koppal | Karnataka News |)
ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಗೆಲುವು ಸಾಧಿಸಿರುವುದು ಪಕ್ಷದ ಸಾಮೂಹಿಕ ನಾಯಕತ್ವಕ್ಕೆ ಸಂದ ಜಯ ಎಂದು ಗೃಹ ಸಚಿವ ಆರ್.ಅಶೋಕ್ ತಿಳಿಸಿದ್ದರೆ, ಮತ್ತೊಂದೆಡೆ ಇದು ಸಾಮೂಹಿಕ ನಾಯಕತ್ವಕ್ಕೆ ಸಿಕ್ಕ ಗೆಲುವು ಅಲ್ಲ, ಯಡಿಯೂರಪ್ಪನವರಿಗೆ ದೊರೆತ ಗೆಲುವು ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಾಲಿ ಮುಖ್ಯಮಂತ್ರಿ ಸದಾನಂದ ಗೌಡ, ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲ ಕಾರ್ಯಕರ್ತರು ಶ್ರಮವಹಿಸಿದ ಪರಿಣಾಮವೇ ಸಾಮೂಹಿಕ ನಾಯತ್ವದಲ್ಲಿ ಕೊಪ್ಪಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಾಗಿ ಅಶೋಕ್ ಸುದ್ದಿಗಾರರ ಜತೆ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೆ ಯಡಿಯೂರಪ್ಪನವರ ಬಲಗೈ ಬಂಟ ರೇಣುಕಾಚಾರ್ಯ ಮಾತ್ರ ಇದು ಸಾಮೂಹಿಕ ನಾಯಕತ್ವದ ಗೆಲುವು ಎಂಬುದನ್ನು ಸುತಾರಾಂ ಒಪ್ಪದೆ, ಈ ಗೆಲುವಿನ ರೂವಾರಿ ಯಡಿಯೂರಪ್ಪನವರೇ ಎಂದು ಬಲವಾಗಿ ಸಮರ್ಥಿಸಿಕೊಂಡರು. ಕೊಪ್ಪಳ ಜನತೆ ಯಡಿಯೂರಪ್ಪ ಪರ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ಹೂಡಿ ಅವರ ತೇಜೋವಧೆಗೆ ಸಂಚು ರೂಪಿಸಿದ್ದರು.

ಹಾಗಾಗಿ ಕೊಪ್ಪಳ ಉಪಚುನಾವಣೆಯಲ್ಲಿ ಅದಕ್ಕೆ ತಕ್ಕ ಉತ್ತರ ನೀಡಬೇಕೆಂಬ ನಿಟ್ಟಿನಲ್ಲಿಯೇ ಯಡಿಯೂರಪ್ಪನರು ಹೋರಾಟ ನಡೆಸಿ ಅದರಲ್ಲಿ ಯಶ ಕಂಡಿರುವುದಾಗಿ ವಿಶ್ಲೇಷಿಸಿದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕರಡಿ ಸಂಗಣ್ಣ ಗೆಲುವು ಸಾಧಿಸಿರುವುದಕ್ಕೆ ಇದರ ಸಂಪೂರ್ಣ ಕ್ರೆಡಿಟ್ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಸಲ್ಲಬೇಕು ಎಂದರು.

ಸಾಮೂಹಿಕ ನಾಯಕತ್ವದ ಗೆಲುವು-ಈಶ್ವರಪ್
ಗೃಹ ಸಚಿವ ಆರ್. ಅಶೋಕ್ ಅವರಂತೆಯೇ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಕೂಡ ಕೊಪ್ಪಳ ಉಪಚುನಾವಣೆ ಗೆಲುವು ಸಾಮೂಹಿಕ ನಾಯಕತ್ವಕ್ಕೆ ಸಂದ ಜಯ ಎಂದು ಬಣ್ಣಿಸಿದರು. ಅಲ್ಲದೇ ಕರಡಿ ಸಂಗಣ್ಣ ಗೆಲವಿಗೆ ಸಂತಸ ವ್ಯಕ್ತಪಡಿಸಿದರು.

ನವದೆಹಲಿಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿಪಕ್ಷಗಳ ಆರೋಪ, ಟೀಕೆಗಳಿಗೆ ಕೊಪ್ಪಳ ಉಪಚುನಾವಣೆ ಫಲಿತಾಂಶ ತಕ್ಕ ಉತ್ತರವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಆದರೆ ರೇಣುಕಾಚಾರ್ಯ ಅವರ ಯಡಿಯೂರಪ್ಪ ಪರ ಬ್ಯಾಟಿಂಗ್ ಪಕ್ಷದೊಳಗಿನ ನಾಯಕತ್ವ ವಿಚಾರದ ಕುರಿತ ಅಸಮಾಧಾನ ಮುಂದುವರಿದಿದೆ ಎಂಬ ಅಂಶವನ್ನು ಬಹಿರಂಗಪಡಿಸಿದಂತಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕೊಪ್ಪಳ ಉಪ ಚುನಾವಣೆ, ಕೊಪ್ಪಳ, ಬಿಜೆಪಿ, ಯಡಿಯೂರಪ್ಪ, ರೇಣುಕಾಚಾರ್ಯ, ಕರಡಿ ಸಂಗಣ್ಣ, ನ್ನಡ ಸುದ್ದಿ, ಕರ್ನಾಟಕ ಸುದ್ದಿ, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಕರ್ನಾಟಕ ರಾಜಕೀಯ, ಕನ್ನಡ ಆನ್ಲೈನ್ ನ್ಯೂಸ್