ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಡ್ರೈವರ್‌ಗೆ ಮಠಾಧೀಶನಾಗೋ ಆಸೆ, ಬ್ಲ್ಯಾಕ್‌ಮೇಲ್ ತಂತ್ರ! (Shandilyshrama | Hubballi | Balckmail | Car driver | Chandrashekar swamiji | Karnataka News | Bangalore News,)
ಶಾಂಡಿಲ್ಯಾಶ್ರಮದ ಸ್ವಾಮೀಜಿಯ ಕಾರು ಚಾಲಕನಾಗಿದ್ದ ಶಿವಾನಂದ ಎಂಬವರು ತನ್ನನ್ನೇ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಬೇಕು ಎಂಬ ಬೇಡಿಕೆಯನ್ನಿಟ್ಟಿದ್ದು, ತನ್ನ ಬೇಡಿಕೆ ಈಡೇರಿಸದಿದ್ದರೆ ತನಗೆ ತಿರುಗಾಡಲು ಕಾರು ಹಾಗೂ 10 ಲಕ್ಷ ರೂಪಾಯಿ ಜೀವನಾಂಶ ನೀಡಬೇಕೆಂದು ಪಟ್ಟು ಹಿಡಿದಿರುವುದು ಆಡಳಿತ ಮಂಡಳಿಗೆ ಅಚ್ಚರಿ ಮೂಡಿಸಿದೆ.

ಇಲ್ಲಿನ ನಾಗಶೆಟ್ಟಿ ಕೊಪ್ಪದಲ್ಲಿರುವ ಶಾಂಡಿಲ್ಯಾಶ್ರಮದ ಚಂದ್ರಶೇಖರ ಸ್ವಾಮೀಜಿ ಲಿಂಗಕ್ಯರಾಗಿದ್ದಾರೆ. ಹಾಗಾಗಿ ಮಠಕ್ಕೆ ಈವರೆಗೂ ಯಾರನ್ನೂ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಲ್ಲ. ಏತನ್ಮಧ್ಯೆ ಚಂದ್ರಶೇಖರ ಸ್ವಾಮೀಜಿ ಕಾರು ಚಾಲಕನಾಗಿದ್ದ ಶಿವಾನಂದ ಮಾತ್ರ ತನಗೆ ಮಠಾಧೀಶನಾಗೋ ಆಸೆ ಇದೆ ಎಂಬುದಾಗಿ ಹೇಳಿಕೊಂಡು ಆಡಳಿತ ಮಂಡಳಿಯನ್ನೇ ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ದೂರಿದೆ.

ಸದ್ಯಕ್ಕೆ ಆಶ್ರಮದ ವ್ಯವಹಾರವನ್ನು ಆಡಳಿತ ಮಂಡಳಿಯೇ ನೋಡಿಕೊಳ್ಳುತ್ತಿದೆ. ಶಿವಾನಂದ ವಾದ ಏನೆಂದರೆ, ತಾನು ಕಳೆದ 40 ವರ್ಷಗಳಿಂದ ಮಠದಲ್ಲಿ ಸೇವೆ ಸಲ್ಲಿಸಿದ್ದೇನೆ. ಹಾಗಾಗಿ ತನ್ನನ್ನೇ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾನೆ. ಒಂದು ವೇಳೆ ತನ್ನ ಬೇಡಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ತಿರುಗಾಡಲು ಕಾರು ಮತ್ತು 10 ಲಕ್ಷ ರೂಪಾಯಿ ಜೀವನಾಂಶ ನೀಡಬೇಕೆಂದು ಷರತ್ತು ಹಾಕಿದ್ದಾನಂತೆ!

ಚಂದ್ರಶೇಖರ ಸ್ವಾಮೀಜಿಯವರು ಲಿಂಗಕ್ಯರಾಗುವ ಮೊದಲೇ ವಿಲ್ ಬರೆದಿಟ್ಟಿದ್ದು, ಆ ಪ್ರಕಾರ ಮಠದ ಉತ್ತರಾಧಿಕಾರಿಯ ಆಯ್ಕೆ ಅಧಿಕಾರ ಆಡಳಿತ ಮಂಡಳಿಗೆ ಬಿಟ್ಟಿದ್ದು ಎಂಬುದಾಗಿ ಸ್ಪಷ್ಟವಾಗಿ ಉಲ್ಲೇಖಿಸಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ. ಮಠಾಧೀಶನಾಗೋ ಬಯಕೆ ಹೊಂದಿರುವ ಶಿವಾನಂದ ಸ್ವಯಂಘೋಷಿತ ಸ್ವಾಮೀಜಿಯ ಫೋಸು ನೀಡುತ್ತಾ ಮಠದ ವಿರುದ್ಧವೇ ಅಪಪ್ರಚಾರ ಮಾಡುತ್ತಿದ್ದಾನಂತೆ. ಇದು ಮಠಾಧೀಶನಾಗೋ ಬಯಕೆಯೋ ಅಥವಾ ಹಣ ಮಾಡುವ ಮಾರ್ಗವೋ ಗೊತ್ತಿಲ್ಲ...ಅಂತೂ ಆಡಳಿತ ಮಂಡಳಿ ಶಿವಾನಂದನ ಬೇಡಿಕೆಗೆ ಕ್ಯಾರೆ ಎನ್ನದೇ ಶಾಂಡಿಲ್ಯಾಶ್ರಮದ ಕಾರ್ಯಚಟುವಟಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಶಾಂಡಿಲ್ಯಾಶ್ರಮ, ಮಠಾಧೀಶ, ಹುಬ್ಬಳ್ಳಿ, ಬ್ಲ್ಯಾಕ್ಮೇಲ್, ಕಾರು ಚಾಲಕ, ಚಂದ್ರಶೇಖರ ಸ್ವಾಮೀಜಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಕರ್ನಾಟಕ ರಾಜಕೀಯ, ಕನ್ನಡ ಆನ್ಲೈನ