ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಸರ್ವಜ್ಞ » ಚೆನ್ನೈ ಅಯನಾವರಂನಲ್ಲಿ ಕನ್ನಡ ಬಾವುಟ ಪಟಪಟ (Chennai | Kannada | DMK | Flag)
 
WD
ಅಯನಾವರಂನ ಐಸಿಎಫ್ ಮೈದಾನದ ಬೃಹತ್ ವೇದಿಕೆಯಿಂದ ರಿಮೋಟ್ ಮೂಲಕ ಯಡಿಯೂರಪ್ಪ ಅವರು ಪ್ರತಿಮೆ ಅನಾವರಣಗೊಳಿಸುತ್ತಲೇ ಸಭಾಂಗಣಗಲ್ಲಿ ಕೆಂಪು ಹಳದಿ ಬಣ್ಣದ ಕನ್ನಡ ಬಾವುಟಗಳು ಪಟಪಟನೆ ಹಾರಿದವು. ಸಂತಸದ ಚಪ್ಪಾಳೆ ಎಲ್ಲೆಡೆ ಧ್ವನಿಸಿತು. ನಾದಸ್ವರ ಮೊಳಗಿತು.

ಪ್ರತಿಮೆ ಉದ್ಘಾಟನೆಯ ಬಳಿಕ ಮಾತನಾಡಿದ ಯಡಿಯೂರಪ್ಪ ಅವರು ತನ್ನ ಭಾಷಣದಲ್ಲಿ ಸರ್ವಜ್ಞನ ಕೆಲವು ವಚನಗಳನ್ನು ವಾಚಿಸಿ ಅವುಗಳ ಮಹತ್ವವನ್ನು ಓದಿ ಹೇಳಿದರು. ತಮ್ಮ ಭಾಷಣದಲ್ಲಿ ತಿರುಕ್ಕುರಳ್ ದ್ವಿಪದಿಯನ್ನು ಉಲ್ಲೇಖಿಸಿದಾಗ ಸಭೆಯಲ್ಲಿ ಚಪ್ಪಾಳೆಯೋ ಚಪ್ಪಾಳೆ.

ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಕನ್ನಡದಲ್ಲಿ ಮುದ್ರಿತ ಸರ್ವಜ್ಞನ ವಚನಗಳ ತಮಿಳು ಅನುವಾದವನ್ನು ಹಂಚಲಾಗಿದ್ದು ನೆರೆದ ತಮಿಳು ಭಾಷಿಕರು ಇದನ್ನು ಕುತೂಹಲದಿಂದ ಓದುತ್ತಿದ್ದುದು ಕಂಡು ಬರುತ್ತಿತ್ತು.

ಕಪ್ಪು ಕೆಂಪು ಸೈನಿಕರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಎಂಕೆ ಕಾರ್ಯಕರ್ತರು ತಮ್ಮ ಪಕ್ಷದ ಬಣ್ಣವಾದ ಕಪ್ಪುಬಣ್ಣದ ಪ್ಯಾಂಟು ಕೆಂಪು ಬಣ್ಣದ ಷರ್ಟ್ ತೊಟ್ಟು ಠಳಾಯಿಸುತ್ತಿದ್ದರು. ಬಿಜೆಪಿ ಮತ್ತು ಡಿಎಂಕೆ ಬಾವುಟಗಳು ಮೈದಾನದ ಸಮೀಪದ ರಸ್ತೆಯುದ್ದಕ್ಕೂ ಹಾರುತ್ತಿದ್ದವು. ಇದಲ್ಲದೆ ಯಡಿಯೂರಪ್ಪ ಹಾಗೂ ಕರುಣಾನಿಧಿಯವರ ಚಿತ್ರಗಳು ಸ್ವಾಗತಕೋರುತ್ತಿದ್ದವು.

ಸ್ವೈನ್ ಫ್ಲೂ ಭೀತಿ
ಕಾರ್ಯಕ್ರಮಕ್ಕೆ ಆಗಮಿಸಿದ ಕೆಲವರು ಸುರಕ್ಷತಾ ಮಾಸ್ಕ್ ಧರಿಸಿದ್ದು ಮುಖದಲ್ಲಿ ಹಂದಿಜ್ವರದ ಭೀತಿ 'ಎದ್ದು' ಕಾಣುತ್ತಿತ್ತು. ಇದೇ ಕಾರ್ಯಕ್ರಮವನ್ನು ಬಳಸಿಕೊಂಡ ಕೆಲವರು ಇಲ್ಲಿ ಮಾಸ್ಕ್ ಮಾರಾಟ ಮಾಡುತ್ತಿದ್ದರು. 10 ರೂಪಾಯಿಗೊಂದರಂತೆ ಮಾರಾಟ ಮಾಡುತ್ತಿದ್ದ ಮಾಸ್ಕ್ ಕೆಲವರಿಗೆ ವರದಾನವಾಗಿಯೇ ಕಂಡು ಬಂದಿದ್ದು ಮುಗಿಬಿದ್ದು ಖರೀದಿಸುತ್ತಿದ್ದರು.

ಸಂಬಂಧಿತ ಮಾಹಿತಿ ಹುಡುಕಿ