'ರಾಜಿ' ಚಿತ್ರದಲ್ಲಿ ನನ್ನದು ನೆಗೆಟಿವ್ ಕ್ಯಾರೆಕ್ಟರ್. ಒಂಥರಾ ವಿಲನ್ ಇದ್ದ ಹಾಗೆ. ಪಾತ್ರ ಪೋಷಣೆಯ ನಿಟ್ಟಿನಲ್ಲಿ ಕೊಂಚ ಗ್ಲಾಮರಸ್ ಬೇಕಾಗಿತ್ತು. ಅದೂ ಹಾಡುಗಳಲ್ಲಿ ಮಾತ್ರ. ಉಳಿದಂತೆ ನಾನು ಚಿತ್ರ ಪೂರ್ತಿ ಸೀರೆಯಲ್ಲೇ ಭಾರತೀಯ ನಾರಿಯಾಗಿ ಕಾಣಿಸಿಕೊಂಡಿದ್ದೇನೆ ಎಂದು ವಿವರಣೆ ನೀಡಿದ್ದಾರೆ.
ಈ ಸ್ವಾತಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದದ್ದು 'ವಾರಸ್ದಾರ' ಎಂಬ ಫ್ಲಾಪ್ ಚಿತ್ರದ ಮೂಲಕ. ನಂತರ ಶಿವರಾಜ್ ಕುಮಾರ್ ನಾಯಕನಾಗಿದ್ದ 'ಮಾದೇಶ' ಚಿತ್ರದಲ್ಲಿ ಐಟಂ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಉಡ ಮತ್ತು ಮುರಳಿ ಎಂಬ ಚಿತ್ರಗಳಲ್ಲೂ ಲೆಕ್ಕಕ್ಕಿಲ್ಲದ ಪಾತ್ರಗಳಲ್ಲಿ ನಟಿಸಿದ್ದರು.