ಇಂತಿಪ್ಪ ಹೊತ್ತಿಗೆ ಬಣ್ಣದ ಬದುಕು ಮಸುಕಾಗುತ್ತಿದೆ ಎಂದುಕೊಂಡ ಸ್ವಾತಿ ಐಟಂ ಹುಡುಗಿಯಾಗಿ ಖಾಯಂ ಆಗಲು ಒಂದು ಹಂತದಲ್ಲಿ ನಿರ್ಧರಿಸಿದ್ದರು. ಆದರ್ಶ್ ಫಿಲಂ ಇನ್ಸ್‌ಟಿಟ್ಯೂಟಿನಲ್ಲಿ ಅಭಿನಯ ತರಬೇತಿ ಪಡೆದರೂ ಈ ಗತಿ ಬಂತಲ್ಲ ಎಂದು ನೊಂದುಕೊಂಡ ಅವರು ನಂತರ ಮತ್ತೆ ತೀರ್ಮಾನ ಬದಲಿಸಿ, ನಾಯಕಿಯಾಗುವ ಅದೃಷ್ಟಕ್ಕೆ ಕಾಯುತ್ತಿದ್ದರು.
ಆದರೆ ತಾನಂದುಕೊಂಡದ್ದನ್ನು ಸಾಧಿಸಲು ಸ್ವಾತಿಗೆ ಸಾಧ್ಯವಾಗಲೇ ಇಲ್ಲ. ಆಗ ಮತ್ತೆ ಎಕ್ಸ್‌ಪೋಸಿಂಗ್ ಸುಳಿಗೆ ಬಿದ್ದರು ಎಂದು ಹೇಳಲಾಗಿದೆ.
ಈ ನಡುವೆ 'ರಾಜಿ' ಚಿತ್ರದಲ್ಲಿ ನಾಯಕ ಮನೋಜ್ ಕುಮಾರ್ ಜತೆ ತುಟಿಗೆ ತುಟಿ ಕೂಡ ಸೇರಿಸಿದ್ದಾರೆ. ಅಂತಹ ಚಿತ್ರಗಳನ್ನು ಪತ್ರಿಕಾ ಕಚೇರಿಗಳಿಗೆ ಕಳುಹಿಸಲಾಗಿದೆ. ಇದಕ್ಕೆ ಏನನ್ನುತ್ತಾರೋ ನಮ್ಮ ಸ್ವಾತಿ?