ಶ್ರೀಲಂಕಾ ಸರ್ಕಾರವು ತಮಿಳು ಉಗ್ರರ ವಿರುದ್ಧ ಅಂತಿಮ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ, ದ್ವೀಪರಾಷ್ಟ್ರದಲ್ಲಿ ಅಂತಿಮ ಹಾಗೂ ಶಾಶ್ವತ ಕದನವಿರಾಮ ಘೋಷಿಸಿರುವಂತೆ ಲಂಕಾ ಸರ್ಕಾರವನ್ನು ಒತ್ತಾಯಿಸಿ ಗಡುವು ವಿಧಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಮಂಗಳವಾರ ಒತ್ತಾಯಿಸಿದ್ದ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ಗುರುವಾರ ತಮಿಳ್ನಾಡು ಬಂದ್‌ಗೆ ಕರೆ ನೀಡಿದ್ದಾರೆ.ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಅವರು ಈ ಬಂದ್‌ಗೆ ಕರೆ ನೀಡಿದ್ದಾರೆ. ತಮ್ಮ ಆದ್ಯತೆಯು ಎಲ್ಟಿಟಿಯನ್ನು ಉಳಿಸುವುದಲ್ಲ, ಬದಲಿಗೆ ಶ್ರೀಲಂಕಾದಲ್ಲಿರುವ ಸಾವಿರಾರು ತಮಿಳರನ್ನು ರಕ್ಷಿಸುವುದಾಗಿದೆ ಎಂದು ಅವರು ಹೇಳಿದ್ದಾರೆ.ಗುರವಾರದ ಈ ಉದ್ದೇಶಿತ ಮುಷ್ಕರವು ದ್ವೀಪರಾಷ್ಟ್ರದಲ್ಲಿ ಶಾಶ್ವತ ಹಾಗೂ ಅಂತಿಮ ಕದನವಿರಾಮವನ್ನು ಘೋಷಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮಾತ್ರವಲ್ಲದೆ ಅಲ್ಲಿನ ತಮಿಳರ ಪರಿಸ್ಥಿತಿಯ ಕುರಿತು ಅನುಕಂಪ ವ್ಯಕ್ತಪಡಿಸುವ ಇರಾದೆಯನ್ನೂ ಹೊಂದಿದೆ ಎಂದೂ ಕರುಣಾನಿಧಿ ಹೇಳಿದ್ದಾರೆ. ಮಂಗಳವಾರ ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಟೆಲಿಗ್ರಾಂ ನೀಡಿ ಕದನವಿರಾಮ ಘೋಷಿಸುವಂತೆ ಒತ್ತಾಯಿಸಿರುವ ಕೆಲವೇ ಗಂಟೆಗಳಲ್ಲಿ ಅವರು ಬಂದ್‌ಗೆ ಕರೆ ನೀಡಿದ್ದಾರೆ.ಅಲ್ಲದೆ, ಮಂಗಳವಾರ ತಡರಾತ್ರಿ ರಾಜ್ಯದ ಎಲ್ಲಾ ತಮಿಳರಿಗೆ 'ಅಂತಿಮ ಮನವಿ' ಸಲ್ಲಿಸಿರುವ ಕರುಣಾನಿಧಿ, ಪಕ್ಷಬೇಧ ಮರೆತು ಎಲ್ಲಾ ತಮಿಳರು 12 ಗಂಟೆಗಳ ಹರತಾಳದಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದ್ದಾರೆ.ಎಲ್ಟಿಟಿಇ ಸಮಸ್ಯೆಗೆ ಸಂಬಂಧಿಸಿದಂತೆ ದೃಢ ನಿಲುವು ತಳೆಯುವಂತೆ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಹಾಗೂ ಪಿಎಂಕೆ ಮುಖ್ಯಸ್ಥ ರಾಮದಾಸ್ ಅವರು ಕರುಣಾನಿಧಿ ಅವರನ್ನು ಈ ಹಿಂದೆ ಒತ್ತಾಯಿಸಿದ್ದರು.ಶ್ರೀಲಂಕಾದಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಲಂಕಾ ತಮಿಳರ ಪರಿಸ್ಥಿತಿಯನ್ನು ಮುಂದಿರಿಸಿಕೊಂಡು ಏನೆಲ್ಲಾ ರಾಜಕೀಯ ಮಾಡಬಹುದೋ ಅದನ್ನೆಲ್ಲಾ ಮಾಡಲು ತಮಿಳುನಾಡು ರಾಜಕಾರಣಿಗಳು ಮುಂದಾಗಿದ್ದಾರೆ. ಈ ಮಧ್ಯೆ, ಲಂಕಾ ಸೇನೆಯು ಎಲ್ಟಟಿಇ ಮುಖ್ಯಸ್ಥ ಪ್ರಭಾಕರನ್ ಬೇಟೆಗೆ ಮುಂದಾಗಿದೆ. ಉಗ್ರಗಾಮಿ ಸಂಘಟನೆಯ ಬಾಹುಳ್ಯವಿರುವ ಪ್ರದೇಶದ ಸುಮಾರು 63,000 ನಾಗರಿಕರು ಈ ಪ್ರದೇಶಗಳಿಂದ ಗುಳೇ ಹೋಗಿದ್ದಾರೆ.ಯುದ್ಧನಿಲ್ಲಿಸುವಂತೆ ಲಂಕಾವನ್ನು ಒತ್ತಾಯಿಸಿ: ಕರುಣಾಕರುಣಾನಿಧಿ ಹೇಳಿಕೆಗೆ ಸೋನಿಯಾ ಮೌನವೇಕೆ?ಶರಣಾಗತಿಯ ಪ್ರಶ್ನೆಯೇ ಇಲ್ಲ: ಎಲ್‌ಟಿಟಿಇ ಘೋಷಣೆ |