ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾರೂಖ್ ಮುಸ್ಲಿಂ ಎಂಬುದನ್ನು ಸಾಬೀತುಪಡಿಸಿದ್ದಾರೆ: ತೊಗಾಡಿಯಾ (Shiv Sena | Shah Rukh Khan | Pakistani cricketers | Praveen Togadia)
Bookmark and Share Feedback Print
 
ಪಾಕಿಸ್ತಾನದ ಆಟಗಾರರನ್ನು ಐಪಿಎಲ್‌ನಲ್ಲಿ ಸೇರಿಸಬೇಕೆಂದು ಆಗ್ರಹಿಸುವ ಮೂಲಕ ಶಾರೂಖ್ ತನಗೆ ಮುಸ್ಲಿಂ ಎಂಬುದು ತನ್ನ ಮೊದಲ ಆದ್ಯತೆ ಎಂಬುದನ್ನು ಸಾರಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಕಿಡಿ ಕಾರಿದ್ದಾರೆ.

ಅಲ್ಲದೆ ಅವರು ರಾಷ್ಟ್ರೀಯ ಹಿತಾಸಕ್ತಿಗಳನ್ನು ಬದಿಗೊತ್ತಿಯಾದರೂ ಪಾಕಿಸ್ತಾನೀಯರನ್ನು ಬೆಂಬಲಿಸುವುದನ್ನು ಮುಂದುವರಿಸಲಿದ್ದಾರೆ. ಈ ನಟನ ದೇಶದ್ರೋಹದ ನಿಲುವನ್ನು ಹಿಂದೂಗಳು ಸ್ವೀಕರಿಸಬಾರದು. ಅವರು ನಟಿಸುವ ಎಲ್ಲಾ ಚಿತ್ರಗಳನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ನಡೆಸಬೇಕೆಂದು ಅವರು ಕರೆ ನೀಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ಹರಾಜಿನಲ್ಲಿ ಪಾಕಿಸ್ತಾನದ ಆಟಗಾರರನ್ನು ಯಾವ ತಂಡಗಳೂ ಖರೀದಿಸದೇ ಇದ್ದುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಶಾರೂಖ್, ಅಲ್ಲಿನ ಆಟಗಾರರ ಅಭಿಮಾನಿಗಳು ನಮ್ಮ ದೇಶದಲ್ಲೂ ಇದ್ದಾರೆ; ಅವರು ವಿಶ್ವ ಚಾಂಪಿಯನ್ನರು, ಹಾಗಾಗಿ ನಿರ್ಲಕ್ಷ್ಯ ವಹಿಸಬಾರದಿತ್ತು ಎಂದಿದ್ದರು.

ಆತ ಪಾಕಿಸ್ತಾನಕ್ಕೆ ಹೋಗಲೇಬೇಕು: ಶಿವಸೇನೆ
ಪಾಕಿಸ್ತಾನಿ ಕ್ರಿಕೆಟ್ ಆಟಗಾರರಿಗೆ ಬೆಂಬಲ ಸೂಚಿಸಿರುವುದರ ವಿರುದ್ಧ ಭಾರೀ ಪ್ರತಿಭಟನೆ ನಡೆಸುತ್ತಿರುವ ಶಿವಸೇನೆ, ಬಾಲಿವುಡ್ ನಟ ಹಾಗೂ ಐಪಿಎಲ್ ಫ್ರಾಂಚೈಸಿ ಕೊಲ್ಕತ್ತಾ ನೈಟ್ ರೈಡರ್ಸ್ ಮಾಲಕ ಶಾರೂಖ್ ಖಾನ್ ಮನೆಗೆ ದಾಳಿ ನಡೆಸಿದೆ.

ಅಲ್ಲದೆ ಮುಂಬೈಯಿಂದ ಕರಾಚಿಗೆ ಹೋಗುವ ಟಿಕೆಟನ್ನು ಪ್ರದರ್ಶಿಸುತ್ತಾ, ಶಾರೂಖ್ ಪಾಕಿಸ್ತಾನಕ್ಕೆ ಹೋಗಲೇಬೇಕು ಎಂದು ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಶಿವಸೈನಿಕರು ಘೋಷಣೆಗಳನ್ನು ಕೂಗುತ್ತಿದ್ದರು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಖಾನ್ ಮನೆಗೆ ರಕ್ಷಣೆ ನೀಡಿದ್ದಾರೆ.

ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಅವರ ಬಾಂದ್ರಾದಲ್ಲಿನ 'ಮನ್ನತ್' ಹೊರಗಡೆ ಭಾನುವಾರ ಅಪರಾಹ್ನ ಶಿವಸೈನಿಕರು ನಟನನ್ನು 'ದೇಶದ್ರೋಹಿ' ಎಂದು ಜರೆದಿದ್ದಲ್ಲದೆ, 'ಪಾಕಿಸ್ತಾನಿ ಆಟಗಾರರ ಪರವಹಿಸಿ ಮಾತನಾಡುವುದಾದರೆ, ಅವರು ಪಾಕಿಸ್ತಾನಕ್ಕೆ ಹೋಗಲೇಬೇಕು' ಎಂದು ಘೋಷಣೆಗಳನ್ನು ಕೂಗಿದರು.

ಪಾಕಿಸ್ತಾನಿ ಆಟಗಾರರನ್ನು ಬೆಂಬಲಿಸಿದ್ದು ತಪ್ಪು ಎಂದು ಶಾರೂಖ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸುವವರೆಗೆ ಈ ಪ್ರತಿಭಟನೆಗಳು ಮುಂದುವರಿಯುತ್ತವೆ. ಅಲ್ಲದೆ ಫೆಬ್ರವರಿ 12ರಂದು ಬಿಡುಗಡೆಯಾಗಲಿರುವ ಅವರ ಚಿತ್ರಕ್ಕೆ ಮುಂಬೈಯಲ್ಲಿ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಈಗಾಗಲೇ ಸಿನಿಮಾ ಮಂದಿರಗಳ ಮಾಲಕರಿಗೆ ಪತ್ರಗಳನ್ನು ಬರೆದು, ಚಿತ್ರ ಬಿಡುಗಡೆ ಮಾಡದಂತೆ ವಿನಂತಿಸಿಕೊಂಡಿದ್ದೇವೆ. ಬಿಡುಗಡೆ ಮಾಡಿದಲ್ಲಿ ಅದರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ. ಹಾಗಾಗಿ ನಾವು ಮುನ್ನೆಚ್ಚೆರಿಕೆಯನ್ನು ನೀಡಿದ್ದೇವೆ ಎಂದು ಶಿವಸೇನೆಯ ವಕ್ತಾರ ಅನಿಲ್ ದೇಸಾಯಿ ತಿಳಿಸಿದ್ದಾರೆ.

ಶಿವಸೈನಿಕರ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿರುವ ಪಕ್ಷದ ಹಿರಿಯ ಮುಖಂಡ ಮನೋಹರ್ ಜೋಷಿ, ಇದು ದೇಶಭಕ್ತಿಯ ವಿಚಾರವಾಗಿದ್ದು, ಶಾರೂಖ್ ರಾಜಕೀಯದಿಂದ ದೂರ ಉಳಿಯಬೇಕು. ಕಳೆದ ಹಲವಾರು ವರ್ಷಗಳಿಂದ ಮುಂಬೈಯಲ್ಲಿ ಉಳಿದುಕೊಂಡಿದ್ದರೂ ಮರಾಠಿ ಬಗ್ಗೆ ಏನೊಂದೂ ಮಾತನಾಡದ ಅವರೀಗ ಪಾಕಿಸ್ತಾನೀಯರನ್ನು ಬೆಂಬಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಸುದ್ದಿಗಳಿವು...
ಅಮೀರ್ ಮತ್ತು ಶಾರೂಖ್ '2 ಈಡಿಯೆಟ್ಸ್': ಜರೆದ ಶಿವಸೇನೆ
ಪಾಕ್ ಪರ ಮಾತಾಡಿದ್ರೆ ಸುಮ್ಮನಿರಲ್ಲ: ಶಾರುಖ್‌ಗೆ ಶಿವಸೇನೆ
ಸಂಬಂಧಿತ ಮಾಹಿತಿ ಹುಡುಕಿ