ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಸ್ಲಾಂಗೆ ಮತಾಂತರಗೊಂಡಿದ್ದ ದೇಶದ್ರೋಹಿ ಮಾಧುರಿ ಗುಪ್ತಾ? (Madhuri Gupta | Islam | ISI | Pakistan)
Bookmark and Share Feedback Print
 
ಪಾಕಿಸ್ತಾನ ಪರ ಗೂಢಚರ್ಯೆ ನಡೆಸುತ್ತಿದ್ದ ಭಾರತ ರಾಯಭಾರಿ ಮಾಧುರಿ ಗುಪ್ತಾ ಆರು ವರ್ಷಗಳ ಹಿಂದೆಯೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಳೇ? ಹಾಗೆಂದು ಪತ್ರಿಕೆಯೊಂದು ವರದಿ ಮಾಡಿದೆ. ಜತೆಗೆ ತನಗೆ ಐಎಸ್ಐ ಜತೆಗಿರುವ ಸಂಬಂಧಗಳನ್ನು ಕೂಡ ಗುಪ್ತಾ ಬಹಿರಂಗಪಡಿಸಿದ್ದು, ಇದೇ ಇಬ್ಬರು ವ್ಯಕ್ತಿಗಳನ್ನು ಹೆಸರಿಸಿದ್ದಾಳೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇಸ್ಲಾಮಾಬಾದ್‌ನಲ್ಲಿನ ಭಾರತ ರಾಯಭಾರ ಕಚೇರಿಗೆ ನೇಮಕಗೊಂಡಿದ್ದ ಮಾಧುರಿ ಗುಪ್ತಾ ಶಿಯಾ ಮುಸ್ಲಿಂ ಆಗಿ ಮತಾಂತರಗೊಂಡಿರುವ ಸಾಧ್ಯತೆಗಳಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆಕೆ ಇಸ್ಲಾಂನ ಬೋಧನೆಗಳಿಂದ ಪ್ರಭಾವಿತಳಾಗಿದ್ದಳು. ಆದರೆ ಇದನ್ನು ಬಹಿರಂಗಪಡಿಸಲು ಹೆದರಿದ್ದಳು. ಲಕ್ನೋದಲ್ಲಿನ ಆಶಿಕ್ ಹುಸೇನ್ ಜಾಫ್ರಿ ಎಂಬ ಮುಸ್ಲಿಂ ಕುಟುಂಬದ ಜತೆ ಮಾಧುರಿ ಕುಟುಂಬ ನಿಕಟ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.
PTI

ಲಕ್ನೋದ ಜಾಫ್ರಿ ಕುಟುಂಬದೊಂದಿಗೆ ಮಾಧುರಿ ಈ ಹಿಂದೆ ವಾಸಿಸಿದ್ದಳು. ಆ ಸಂದರ್ಭದಲ್ಲಿ ಇಸ್ಲಾಂನ ಮೌಲ್ಯಗಳು ಆಕೆಯನ್ನು ಪ್ರಭಾವಿತಗೊಳಿಸಿರಬಹುದು. ಅಲ್ಲದೆ ಶಿಯಾ ಮುಸ್ಲಿಮರ ಸಂಪ್ರದಾಯದಂತೆ ಆಕೆ ರಂಜಾನ್ ತಿಂಗಳಲ್ಲಿ ಬಳೆ ಮತ್ತು ಉಂಗುರಗಳನ್ನು ಧರಿಸಿದ್ದುದನ್ನು ತಾನು ನೋಡಿರುವುದಾಗಿಯೂ ಸ್ಥಳೀಯ ಪತ್ರಕರ್ತರೊಬ್ಬರು ಹೇಳಿದ್ದಾರೆ.

ರಂಜಾನ್ ನಿಮಿತ್ತ ನಾನು ಉಪವಾಸ ಮಾಡುತ್ತಿದ್ದೇನೆ. ಇಸ್ಲಾಂ ಬಗ್ಗೆ ನನಗೆ ಉನ್ನತ ಗೌರವವಿದೆ ಎಂದು ಮಾಧುರಿ ಆ ಪತ್ರಕರ್ತರಲ್ಲಿ ಹೇಳಿಕೊಂಡಿದ್ದಳು ಎಂದು ಪತ್ರಿಕೆ ವರದಿ ಮಾಡಿದೆ.

ಇಬ್ಬರನ್ನು ಹೆಸರಿಸಿದ ಮಾಧುರಿ...
ಈ ನಡುವೆ ತನಿಖಾ ದಳವು ಮಾಧುರಿಯ ವಿಚಾರಣೆಯನ್ನು ತೀವ್ರಗೊಳಿಸಿದ್ದು, ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದೆ ಎಂದು ವಾರ್ತಾವಾಹಿನಿಯೊಂದು ವರದಿ ಮಾಡಿದೆ.

ಅದರ ಪ್ರಕಾರ ಮಾಧುರಿ ಪಾಕಿಸ್ತಾನದ ಇಬ್ಬರು ಬೇಹುಗಾರಿಕಾ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿದ್ದಾಳೆ. ಒಬ್ಬ ಈ ಹಿಂದೆ ಹೇಳಿರುವ ಪತ್ರಕರ್ತನ ಸೋಗಿನಲ್ಲಿದ್ದ ಪ್ರಿಯಕರ ಎಂದು ಹೇಳಲಾಗಿರುವ ಸುಮಾರು 47ರ ಹರೆಯದ ಮುಬಾಸಾರ್ ರಾಣಾ, ಮತ್ತೊಬ್ಬ 30ರ ಹರೆಯದ ಜೆಮ್‌ಷೆಡ್.

ಆಕೆಯಲ್ಲಿ ಮಹತ್ವದ ಮಾಹಿತಿಗಳಿರಲಿಲ್ಲ...
ಬೇಹುಗಾರಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮಾಧುರಿ ಗುಪ್ತಾಳಿಗೆ ದೇಶದ ಗೌಪ್ಯ ವಿಚಾರಗಳು ತಿಳಿದಿರಲಿಲ್ಲ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವೆ ಪ್ರಣೀತ್ ಕೌರ್ ತಿಳಿಸಿದ್ದಾರೆ.

ಗುಪ್ತಾ ಬಳಿ ಮಹತ್ವದ ರಹಸ್ಯ ಮಾಹಿತಿಗಳು ಇರಲಿಲ್ಲ. ಆಕೆ ತನಿಖೆಗಳಿಗೂ ಸಂಪೂರ್ಣವಾಗಿ ಸಹಕರಿಸುತ್ತಿಲ್ಲ ಎಂದು ಲೋಕಸಭೆಯಲ್ಲಿ ಅವರು ತಿಳಿಸಿದ್ದಾರೆ.

ಆಕೆ ರಾಯಭಾರ ಕಚೇರಿಯಲ್ಲಿ ಹೊಂದಿದ್ದ ಹುದ್ದೆಗೆ ಮಹತ್ವದ ಜವಾಬ್ದಾರಿಗಳನ್ನು ನೀಡಲಾಗಿರಲಿಲ್ಲ. ಹಾಗಾಗಿ ಅಮೂಲ್ಯ ದಾಖಲೆಗಳನ್ನು ಪಡೆಯುವುದು ಅಷ್ಟು ಸುಲಭವಲ್ಲ. ಆದರೂ ಆಕೆ ಬೇಹುಗಾರಿಕೆ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ತನಿಖೆಯ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದು ಸಾಧ್ಯವಿಲ್ಲ ಎಂದು ಸಚಿವೆ ಸದನಕ್ಕೆ ಮಾಹಿತಿ ನೀಡಿದರು.

ಸಂಬಂಧಪಟ್ಟ ಸುದ್ದಿಗಳಿವು:
** ಪಾಕ್ ಪರ ಬೇಹುಗಾರಿಕೆ; ಭಾರತೀಯ ರಾಯಭಾರಿ ಸೆರೆ
** ಮಾಧುರಿ ದೇಶದ್ರೋಹದ ಹಿಂದೆ ಐಎಸ್ಐ ಹಣ ಮತ್ತು ಪ್ರೇಮಿ!
** ಗಂಡೆದೆಯ ಮಾಧುರಿಗೆ 'ರಾಣಾ' ದೈಹಿಕ ಸಂಬಂಧ ಇಲ್ವಂತೆ!
ಸಂಬಂಧಿತ ಮಾಹಿತಿ ಹುಡುಕಿ