ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಲ್ಲಾ ಕಳಕೊಂಡ ಫೆರ್ನಾಂಡಿಸ್ ಹುಟ್ಟುಹಬ್ಬದಲ್ಲೂ ಕೋಳಿಜಗಳ! (George Fernandes | Leila Kabir | Jaya Jaitly | Sean Fernandes)
Bookmark and Share Feedback Print
 
ಅಲ್ಜಿಮೀರ್ ಖಾಯಿಲೆಯಿಂದ ಸ್ಮರಣಶಕ್ತಿಯನ್ನೇ ಬಹುತೇಕ ಕಳೆದುಕೊಂಡಿರುವ ಭಾರತದ ಜನಪ್ರಿಯ ರಾಜಕಾರಣಿ ಹಾಗೂ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ 80ನೇ ಹುಟ್ಟುಹಬ್ಬದಲ್ಲೂ ಅವರ ಜೀವನದ ಇಬ್ಬರು ಪ್ರಮುಖ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ!

ಕಳೆದ 30 ವರ್ಷಗಳಿಂದ ದೂರವೇ ಉಳಿದಿದ್ದ ಅಧಿಕೃತ ಪತ್ನಿ ಲೈಲಾ ಕಬೀರ್ ಫೆರ್ನಾಂಡಿಸ್ ಮತ್ತು ಕಳೆದ 25 ವರ್ಷಗಳಿಂದ ಜತೆಯಾಗಿ ವಾಸಿಸುತ್ತಾ ಆಪ್ತೆಯಾಗಿದ್ದ ಜಯಾ ಜೇಟ್ಲಿಯೇ ಜಾರ್ಜ್ ಫೆರ್ನಾಂಡಿಸ್ ಅವರ ಪ್ರಮುಖ ಇಬ್ಬರು ಮಹಿಳೆಯರು.

ಮಧ್ಯವಯಸ್ಸಿನ ಹೊತ್ತಿನಲ್ಲಿ ಗಂಡನನ್ನು ತೊರೆದು ಅಮೆರಿಕಾಕ್ಕೆ ಹೋಗಿದ್ದ ಲೈಲಾ ಇತ್ತೀಚೆಗಷ್ಟೇ ದೇಶಕ್ಕೆ ಬಂದು ಮೂಲತಃ ಮಂಗಳೂರಿಗನಾಗಿರುವ ಫೆರ್ನಾಂಡಿಸ್ ಅವರ ಉಸ್ತುವಾರಿಯನ್ನು ಪಡೆದುಕೊಂಡಿದ್ದರು. ಅದುವರೆಗೆ ಜತೆಗಿದ್ದ ಜಯಾ ಜೇಟ್ಲಿಯವರಿಗೆ ಇದು ಸರಿ ಕಂಡು ಬಂದಿಲ್ಲ.

ಬಳಿಕ ಪೊಲೀಸು, ಕೋರ್ಟು ಎಂದೆಲ್ಲ ಲೈಲಾ ಮತ್ತು ಜೇಟ್ಲಿ ಸಾಕಷ್ಟು ಸುತ್ತಾಡಿದ್ದಾರೆ. ಎಲ್ಲೂ ಸೂಕ್ತವಾದ ಪರಿಹಾರ ಸಿಕ್ಕಿಲ್ಲ. ಇಬ್ಬರ ಮೇಲೂ ಪರಸ್ಪರ ಕೇಳಿ ಬರುತ್ತಿರುವ ಮತ್ತು ತಾವೇ ಹೊರಿಸುತ್ತಿರುವ ಆರೋಪಗಳು ಆಸ್ತಿ-ಪಾಸ್ತಿ.

ಇಂತಹ ಹೊತ್ತಿನಲ್ಲಿ ಜೂನ್ 3ರಂದು ಫೆರ್ನಾಂಡಿಸ್ ಅವರ 80ನೇ ಹುಟ್ಟುಹಬ್ಬವನ್ನು ನ್ಯಾಯಾಲಯದ ಅನುಮತಿಯಂತೆ ಆಚರಿಸಲಾಗಿತ್ತು. ಆಡಂಬರವಿಲ್ಲದ ಈ ಸರಳ ಸಮಾರಂಭದಲ್ಲಿ ಲೈಲಾ ಮತ್ತು ಜೇಟ್ಲಿ ಇಬ್ಬರೂ ಪಾಲ್ಗೊಂಡಿದ್ದರು.

ಆರಂಭದಲ್ಲಿ ಸುಮಾರು 30 ನಿಮಿಷಗಳ ಕಾಲ ಮನೆಯ ಹೊರಗಡೆಯೇ ನಿಂತಿದ್ದ ಜಯಾ ಜೇಟ್ಲಿ ನಂತರ ತನ್ನ ಸ್ನೇಹಿತರ ಜತೆ ಮನೆಯೊಳಗೆ ಬಂದು ಸುಮಾರು ಐದು ತಿಂಗಳ ನಂತರ ಫೆರ್ನಾಂಡಿಸ್ ಅವರನ್ನು ನೋಡಿದ್ದರು.

ನೋಡುತ್ತಿದ್ದಂತೆ ಸಂತೋಷ ತಡೆದುಕೊಳ್ಳಲಾಗದ ಜೇಟ್ಲಿ ಫೆರ್ನಾಂಡಿಸ್ ಬಳಿ ತೆರಳಿ ಭುಜದ ಮೇಲೆ ಕೈಗಳನ್ನಿಟ್ಟು ಹಣೆಗೆ ಮುತ್ತಿಕ್ಕಿ ಸಂಭಾಷಣೆ ನಡೆಸಿದ್ದಾರೆ. ಈ ಹೊತ್ತಿಗೆ ಅಲ್ಲಿಗೆ ಬಂದ ಲೈಲಾ ಅವರು ಫೆರ್ನಾಂಡಿಸ್ ಭುಜದ ಮೇಲೆ ತಾನು ಒರಗಲು ಯತ್ನಿಸಿದ್ದಾರೆ. ಆಗ ಇಬ್ಬರೂ ಪರಸ್ಪರ ದೃಷ್ಟಿಯುದ್ಧ ಮತ್ತು ವಾಗ್ಯುದ್ಧದಲ್ಲೂ ತೊಡಗಿದ್ದಾರೆ.

ಆದರೆ ಎರಡೂ ಕಡೆಯವರ ಸಾಂತ್ವನದ ಮಾತುಗಳು ಮತ್ತು ತಾವು ಎಲ್ಲಿದ್ದೇವೆ ಎಂಬುದನ್ನು ನೆನಪಿಸಿಕೊಟ್ಟ ನಂತರ ಉಭಯರು ತಿಳಿಯಾಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

ಜಯಾ ಜೇಟ್ಲಿ ಮತ್ತು ಫೆರ್ನಾಂಡಿಸ್ ಸಹೋದರರ ಪ್ರಕಾರ, ಫೆರ್ನಾಂಡಿಸ್ ಅವರನ್ನು ಲೈಲಾ ಕೈದಿಯಂತೆ ನೋಡಿಕೊಳ್ಳುತ್ತಿದ್ದಾರೆ. ಜೀವಿತಾವಧಿಯಲ್ಲಿ ಪರಿತ್ಯಕ್ತರಾಗಿ ನೋಡಿಕೊಂಡ ಲೈಲಾ ಇದೀಗ ಆಸ್ತಿಯ ಆಸೆಗಾಗಿ ಫೆರ್ನಾಂಡಿಸ್ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎನ್ನುತ್ತಾರೆ.

ತಾನು ಮನೆಗೆ ಬರಲು ಬಯಸುತ್ತಿರುವುದಾಗಿ ಫೆರ್ನಾಂಡಿಸ್ ತಮ್ಮಲ್ಲಿ ಕೊಂಕಣಿ ಭಾಷೆಯಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮದ ಸಂದರ್ಭದಲ್ಲಿ ಹೇಳಿದ್ದಾರೆ ಎಂದೂ ಸಹೋದರರು ಹೇಳಿಕೊಂಡಿದ್ದಾರೆ.

ಸಂಬಂಧಪಟ್ಟ ಸುದ್ದಿಗಳಿವು:
** ಫೆರ್ನಾಂಡಿಸ್‌ಗೆ ರಾಮದೇವ್ ಚಿಕಿತ್ಸೆ, ಜತೆಗೆ ಆಸ್ತಿಗಾಗಿ ಕಿತ್ತಾಟ!
** ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ನಾಪತ್ತೆಯಾಗಿದ್ದಾರೆ!
ಸಂಬಂಧಿತ ಮಾಹಿತಿ ಹುಡುಕಿ