ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಲ್ಯರಿಗೆ ಬೇಡವಾದ ಕನ್ನಡವನ್ನು ಅಪ್ಪಿಕೊಂಡ ನಾಯ್ಡು (Oscar Fernandis | Ayanoor Manjunath | Vijaya Mallya | Rajya sabha)
Bookmark and Share Feedback Print
 
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು, ವಿಜಯ ಮಲ್ಯ ಮತ್ತು ಆಯನೂರು ಮಂಜುನಾಥ್ ಅವರಿಗೆ ಇಂದು ಉಪ ರಾಷ್ಟ್ರಪತಿ ಹಾಗೂ ಸ್ಪೀಕರ್ ಹಮೀದ್ ಅನ್ಸಾರಿ ಪ್ರಮಾಣ ವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಕನ್ನಡಿಗ ವಿಜಯ ಮಲ್ಯ ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಆಂಧ್ರಪ್ರದೇಶದ ತೆಲುಗು ಭಾಷಿಗ ವೆಂಕಯ್ಯ ನಾಯ್ಡು ಮತ್ತು ಆಯನೂರು ಮಂಜುನಾಥ್ ಕನ್ನಡದಲ್ಲೇ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಇತ್ತೀಚೆಗಷ್ಟೇ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಆಯನೂರು ಮಂಜುನಾಥ್ ಮತ್ತು ವೆಂಕಯ್ಯ ನಾಯ್ಡು, ಕಾಂಗ್ರೆಸ್‌ನಿಂದ ಆಸ್ಕರ್ ಫೆರ್ನಾಂಡಿಸ್ ಹಾಗೂ ಜೆಡಿಎಸ್-ಬಿಜೆಪಿ ಬೆಂಬಲಿತ ಪಕ್ಷೇತರ ವಿಜಯ ಮಲ್ಯ ಗೆಲುವು ಸಾಧಿಸಿದ್ದರು.

ಇಂದು ಮಳೆಗಾಲದ ಸಂಸತ್ ಅಧಿವೇಶನ ಆರಂಭವಾಗಿದ್ದು, ಮೊದಲ ದಿನ ಕರ್ನಾಟಕದ ಮೂವರು ರಾಜ್ಯಸಭಾ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮತ್ತೋರ್ವ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಇಂದು ಕಲಾಪದಲ್ಲಿ ಭಾಗವಹಿಸಿಲ್ಲ ಎಂದು ವರದಿಗಳು ಹೇಳಿವೆ.

ಇತ್ತೀಚೆಗಷ್ಟೇ ರಾಜ್ಯಸಭೆಗೆ ನಾಮಕರಣಗೊಂಡಿದ್ದ ಖ್ಯಾತ ರಂಗಕರ್ಮಿ ಬಿ. ಜಯಶ್ರೀ ಕೂಡ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.

22 ಭಾಷೆ ಬಳಸಬಹುದು..
ರಾಜ್ಯಸಭೆ ಮತ್ತು ಲೋಕಸಭೆಗೆ ಆಯ್ಕೆಯಾದ ಸದಸ್ಯರು ಸಂವಿಧಾನದ ಎಂಟನೇ ಪರಿಚ್ಛೇದದಡಿ ಸ್ಥಾನ ಪಡೆದಿರುವ 22 ಭಾಷೆಗಳಲ್ಲಿ ಯಾವುದನ್ನು ಬೇಕಾದರೂ ಬಳಸಬಹುದಾಗಿದೆ. ಆದರೂ ಬಹುತೇಕ ಸದಸ್ಯರು ಮಾತೃಭಾಷೆಗೆ ಒತ್ತು ನೀಡುತ್ತಿರುವುದು ಸಾಮಾನ್ಯ.

ಹಿಂದಿ, ಕನ್ನಡ, ಗುಜರಾತಿ, ತಮಿಳು, ತೆಲುಗು, ಕೊಂಕಣಿ, ಮಲಯಾಳಂ, ಕಾಶ್ಮೀರಿ, ಮೈಥಿಲಿ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಾಂತಾಲಿ, ಸಿಂಧಿ, ಉರ್ದು, ಅಸ್ಸಾಮೀಸ್, ಬೆಂಗಾಲಿ, ಬೋಡೋ ಮತ್ತು ದೋಗ್ರಿ ಭಾಷೆಗಳಲ್ಲಿ ಜನಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸಲು ಸಂವಿಧಾನ ಅವಕಾಶ ನೀಡಿದೆ.

ಸಂಬಂಧಪಟ್ಟ ಸುದ್ದಿಯಿದು:
** ಬಿಜೆಪಿ ಬೆಂಬಲ- ಮಲ್ಯ ರಾಜ್ಯಸಭೆಗೆ; ಕಾಂಗ್ರೆಸ್‌ಗೆ ನಿರಾಸೆ
** ಕೆಲಸ ಮಾಡದ ವಿಜಯ ಮಲ್ಯರನ್ನು ವಜಾಗೊಳಿಸಿದ ಸ್ವಾಮಿ
ಸಂಬಂಧಿತ ಮಾಹಿತಿ ಹುಡುಕಿ