ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಂಡರ್ಸನ್ ಹೋಗಿದ್ದು ಒಂದು ವಿಚಾರವೇ ಅಲ್ಲ: ದಿಗ್ವಿಜಯ್ (Congress | Digvijay Singh | Warren Anderson | Bhopal gas disaster)
Bookmark and Share Feedback Print
 
1984ರಲ್ಲಿ ಭೋಪಾಲ್ ಅನಿಲ ದುರಂತ ಸಂಭವಿಸಿದ ನಂತರ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಅಧ್ಯಕ್ಷ ವಾರೆನ್ ಆಂಡರ್ಸನ್ ಭೋಪಾಲ್‌‌ನಿಂದ ಹೇಗೆ ಹೋದರು ಎಂಬುದು ಚರ್ಚೆಗೆ ಅರ್ಹವಾದ ವಿಚಾರವೇ ಅಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಭೋಪಾಲ್‌ನಿಂದ ದೆಹಲಿಗೆ ಆಂಡರ್ಸನ್ ಅವರು ವಿಮಾನದಲ್ಲಿ ಹೋದರೋ, ರೈಲಿನಲ್ಲಿ ಹೋದರೋ ಅಥವಾ ನಡೆದುಕೊಂಡೇ ಹೋದರೋ ಎಂಬುದೂ ಒಂದು ವಿಷಯವೇ ಎಂದು ಪತ್ರಕರ್ತರಲ್ಲಿ ಸಿಂಗ್ ಪ್ರಶ್ನಿಸಿದ್ದಾರೆ.

ಇಲ್ಲಿ ಪ್ರಮುಖ ವಿಚಾರವಿರುವುದು ದುರಂತ ನಡೆದು 25 ವರ್ಷದ ನಂತರವೂ ಸಂಕಟದಲ್ಲೇ ಜೀವನ ಸಾಗಿಸುತ್ತಿರುವವರಿಗೆ ಪರಿಹಾರ ಮತ್ತು ಪುನಶ್ಚೇತನ ಸಿಕ್ಕಿದೆಯೇ ಎಂಬುದು. ಉಳಿದ ವಿಚಾರಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಭೋಪಾಲ್‌ನಿಂದ ಆಂಡರ್ಸನ್ ಕಳಚಿಕೊಂಡಿರುವ ಬಗ್ಗೆ ಆಗಿನ ಮಧ್ಯಪ್ರದೇಶ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಸತ್ಯ ಹೇಳುತ್ತಿಲ್ಲ ಎಂಬ ಈಗಿನ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಇದಕ್ಕೂ ಮೊದಲು ಚೌಹಾನ್ ಎಷ್ಟು ಸತ್ಯಗಳನ್ನು ಮಾತನಾಡುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ತಿರುಗೇಟು ನೀಡಿದರು.

ಮಧ್ಯಪ್ರದೇಶದಲ್ಲಿ 3,000 ಕೋಟಿ ಹೂಡಿಕೆ ಮಾಡಲಾಗಿತ್ತು. ಆದರೆ ಇದು ಮೇಲ್ನೋಟಕ್ಕೆ ಎಲ್ಲೂ ಕಾಣ ಸಿಗುತ್ತಿಲ್ಲ ಎಂದು ಚೌಹಾನ್ ಸಂಶಯ ವ್ಯಕ್ತಪಡಿಸಿದ್ದರು.

ಸಂಬಂಧ ಸುದ್ದಿಗಳಿವು:
** ಭೋಪಾಲ್ ಖಳ ರಾಜೀವ್‌ ಗಾಂಧಿಯಲ್ಲ, ನರಸಿಂಹರಾವ್!
** ಭೋಪಾಲ್ ದುರಂತ; ರಾಜೀವ್ ಗಾಂಧಿಯತ್ತ ಬಿಜೆಪಿ ಬೆಟ್ಟು
ಸಂಬಂಧಿತ ಮಾಹಿತಿ ಹುಡುಕಿ