ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮದುವೆ ಕಾಗದ ಬಹಿರಂಗ; ಮದುಮಗ ತರೂರ್ ಗರಂ (Shashi Tharoor | Sunanda Pushkar | Kerala | Marriage)
Bookmark and Share Feedback Print
 
ಕೇಂದ್ರ ಗೃಹಸಚಿವಾಲಯದ ರಾಜ್ಯ ಸಚಿವ ಹಾಗೂ ತಿರುವನಂತಪುರಂ ಸಂಸದ ಶಶಿ ತರೂರ್ ಮತ್ತು ಸುನಂದಾ ಪುಷ್ಕರ್ ಮದುವೆ ದಿನಾಂಕ ಹಲವಾರು ಬದಲಾವಣೆಗಳನ್ನು ಕಂಡು ಕೊನೆಗೂ ಆಗಸ್ಟ್ 22ರಂದು ನಡೆಯುವುದು ಖಚಿತವಾಗಿದೆ. ಆದರೆ ವಿವಾಹದ ಆಮಂತ್ರಣ ಪತ್ರಗಳನ್ನು ಮಾಧ್ಯಮಗಳು ಪ್ರಕಟಿಸಿರುವುದಕ್ಕೆ ತರೂರ್ ಕೋಪಗೊಂಡಿದ್ದಾರೆ.

ಇದನ್ನೂ ಓದಿ: ಸುನಂದಾರನ್ನು ಭಾವೀ ಪತ್ನಿಯೆಂದು ಒಪ್ಪಿಕೊಂಡ ತರೂರ್

ಕಳೆದ ಕೆಲವು ವರ್ಷಗಳಿಂದ ಸುನಂದಾ ಜತೆ ಎಲ್ಲೆಂದರೆ ಅಲ್ಲಿ ತಿರುಗಾಡುತ್ತಿದ್ದ ತರೂರ್, ಕೇರಳದ ಎರ್ನಾಕುಲಂನಲ್ಲಿನ ತನ್ನ ಪೂರ್ವಿಕರ 200 ವರ್ಷಗಳ ಹಳೆಯದಾದ ಮನೆಯಲ್ಲಿ ಮದುವೆ ಮಾಡಿಕೊಂಡು ತನ್ನ ಜೀವನದ ಮೂರನೇ ದಾಂಪತ್ಯಕ್ಕೆ ಇಬ್ಬರೂ ಕಾಲಿಡುತ್ತಿದ್ದಾರೆ.

ಈ ಹಿಂದೆ ತಲಾ ಎರಡೆರಡು ಮದುವೆಯಾಗಿರುವ ತರೂರ್ ಮತ್ತು ಸುನಂದಾ ಇಬ್ಬರಿಗೂ ಇದು ಮೂರನೇ ಮದುವೆ. ಕೇರಳದಲ್ಲಿ ಮದುವೆ ಕಾರ್ಯಕ್ರಮಕ್ಕೆ ಕುಟುಂಬ ಮತ್ತು ಕೆಲವೇ ಗೆಳೆಯರನ್ನು ಮಾತ್ರ ಆಹ್ವಾನಿಸಲಾಗುತ್ತದೆ. ಉಳಿದಂತೆ ರಾಜಕಾರಣದಲ್ಲಿನ ಗೆಳೆಯರನ್ನು ನವದೆಹಲಿಯಲ್ಲಿ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ಕರೆಯಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಚಾನೆಲ್‌ಗಳ ವಿರುದ್ಧ ಆಕ್ರೋಶ...
ಸುದ್ದಿವಾಹಿನಿಗಳು ತನ್ನ ಮದುವೆಯ ಆಮಂತ್ರಣ ಪತ್ರಗಳನ್ನು ಪ್ರಸಾರ ಮಾಡಿರುವುದಕ್ಕೆ ಅಸಹ್ಯ ವ್ಯಕ್ತಪಡಿಸಿರುವ ತರೂರ್, ಮಾಧ್ಯಮಗಳಿಗೆ ಒಂಚೂರಾದರೂ ಸಭ್ಯತೆ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಂಸತ್‌ಗೆ ಚಕ್ಕರ್ ಹಾಕಿ ತರೂರ್-ಸುನಂದಾ ರೊಮ್ಯಾನ್ಸ್

ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಸಂದೇಶ ರವಾನಿಸಿರುವ ಅವರು, 'ನನ್ನ ಮದುವೆಯ ಆಮಂತ್ರಣ ಪತ್ರಗಳು ಗೆಳೆಯರ ಕೈ ಸೇರುವ ಮೊದಲೇ ಅದನ್ನು ಅಡ್ಡ ಹಾದಿಯ ಮೂಲಕ ಎಗರಿಸಿ ಎರಡು ಚಾನೆಲ್‌ಗಳು ಪ್ರಸಾರ ಮಾಡಿರುವುದು ಅಸಹ್ಯ ಹುಟ್ಟಿಸಿದೆ. ನಮ್ಮ ಮಾಧ್ಯಮಗಳಿಗೆ ನಿಜಕ್ಕೂ ಸಭ್ಯತೆ ಎಂದರೆ ಏನೆಂದು ತಿಳಿದಿದೆಯೇ?' ಎಂದಿದ್ದಾರೆ.

ಇತ್ತೀಚೆಗಷ್ಟೇ ಸುನಂದಾ ಜತೆ ಸೇರಿ ರಾಜಸ್ತಾನದ ಅಜ್ಮೀರ್, ಮಹಾರಾಷ್ಟ್ರದಲ್ಲಿನ ಶಿರ್ಡಿ ಸಾಯಿಬಾಬಾ ಮತ್ತು ಶನೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿದ್ದ ತರೂರ್, ತಮ್ಮಿಬ್ಬರ ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂಬುದನ್ನೂ ಕಾರ್ಯಕ್ರಮವೊಂದರಲ್ಲಿ ಸೂಚ್ಯವಾಗಿ ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ