ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ ವೇತನ ಹೆಚ್ಚಳಕ್ಕೆ ತಕರಾರು ಯಾಕೆ?: ಸಂಸದರು (MP's salary | Govt of India | Congress | BJP)
Bookmark and Share Feedback Print
 
ಬೆಲೆಯೇರಿಕೆ, ಬರ-ನೆರೆಯ ನಡುವೆ ಸಂಸತ್ ಸದಸ್ಯರ ವೇತನ ಹೆಚ್ಚಳ ಬೇಕೇ ಎಂದು ರಾಷ್ಟ್ರದಾದ್ಯಂತ ಭಾರೀ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತಾಪವನ್ನು ಸರಕಾರ ಮುಂದೂಡಿರುವ ನಡುವೆಯೇ ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರು ಪಕ್ಷಭೇದ ಮರೆತು ಒಕ್ಕೊರಲಿನ ದನಿ ಹೊರಡಿಸಿದ್ದಾರೆ. ನಮ್ಮ ವೇತನ ಹೆಚ್ಚಳಕ್ಕೆ ಇಂತಹ ತಕರಾರುಗಳು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

ವಿಶ್ವದಲ್ಲೇ ಭಾರತೀಯ ಸಂಸದರ ವೇತನ ಕನಿಷ್ಠ. ಸರಕಾರಿ ಗುಮಾಸ್ತನೊಬ್ಬ ಪಡೆಯುವ ಸಂಬಳಕ್ಕಿಂತಲೂ ನಾವು ಕಡಿಮೆ ಸಂಬಳವನ್ನು ಪಡೆಯುತ್ತಿದ್ದೇವೆ. ಸಂಸದರು ಕಾರ್ಯದರ್ಶಿಗಳಿಗಿಂತ ಉನ್ನತರಾಗಿರುವುದರಿಂದ, ಅವರ ಸಂಬಂಳದಲ್ಲೂ ವ್ಯತ್ಯಾಸ ಅಗತ್ಯ ಎಂದು ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಅಭಿಪ್ರಾಯಪಟ್ಟಿದ್ದಾರೆ.

ನೀವು ಸಂಸದರ ಕಷ್ಟ ಅರ್ಥ ಮಾಡಿಕೊಳ್ಳಬೇಕು ಎಂದಿರುವವರು ಬಿಜೆಪಿ ನಾಯಕ, ರಾಜ್ಯಸಭೆಯಲ್ಲಿನ ಪ್ರತಿಪಕ್ಷದ ಉಪನಾಯಕ ಎಸ್.ಎಸ್. ಅಹ್ಲುವಾಲಿಯಾ.

ಸಂಸದರು ತಮಗೆ ಗೌರವಾರ್ಹ ವೇತನ ಬೇಕೆಂದು ಕೇಳಿದರೆ, ಅದಕ್ಕೆ ಈ ರೀತಿ ಅರಚಾಟ-ಕೂಗಾಟಗಳು ಯಾಕೆ? ಈ ಕುರಿತು ದೊಡ್ಡ ನಾಟಕವನ್ನೇ ರೂಪಿಸಲಾಗುತ್ತಿದೆ ಎಂದಿರುವ ಶುಕ್ಲಾ, ನಮ್ಮ ಹುದ್ದೆಯೇನೂ ಶಾಶ್ವತವಲ್ಲ ಎಂದು ಟೀಕಾಕಾರರಿಗೆ ನೆನಪಿಸಿದ್ದಾರೆ.

ಮೇಲಿನ ಇಬ್ಬರೂ ನಾಯಕರು ಛತ್ತೀಸ್‌ಗಢದ ಸಂಸದ (ಕಾಂಗ್ರೆಸ್) ಚರಣದಾಸ್ ಮಹಂತ್ ಅವರ ನೇತೃತ್ವದ ಸದನ ಸಮಿತಿಯ ಸದಸ್ಯರು. ಸಂಸದರ ವೇತನವನ್ನು 80,001 ರೂಪಾಯಿಗಳಿಗೆ ಏರಿಕೆ ಮಾಡಬೇಕು ಎಂದು ಈ ಸಮಿತಿ ಶಿಫಾರಸು ಮಾಡಿತ್ತು.

ಆದರೆ ವೇತನವನ್ನು 50,000 ರೂಪಾಯಿಗಳಿಗೆ ಏರಿಕೆ ಮಾಡಲು ಸಂಸದೀಯ ವ್ಯವಹಾರಗಳ ಸಚಿವಾಲಯ ಒಪ್ಪಿಕೊಂಡಿತ್ತು. ಈ ಸಂಬಂಧ ಸೋಮವಾರ ಸಂಪುಟ ಸಚಿವರು ಸಭೆ ಸೇರಬೇಕಿತ್ತಾದರೂ, ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ಸರಕಾರದ ಮೇಲೆ ಕಾಮನ್‌ವೆಲ್ತ್ ಗೇಮ್ಸ್ ಭ್ರಷ್ಟಾಚಾರ ಆರೊಪ ಬಂದಿರುವ ಹೊತ್ತಿನಲ್ಲಿ ಮತ್ತು ದೇಶದ ಕೆಲ ಭಾಗ ಬರ ಪರಿಸ್ಥಿತಿಯಲ್ಲಿರುವುದರಿಂದ ಸಂಸದರ ವೇತನ ಹೆಚ್ಚಳದ ಕುರಿತು ಸಚಿವ ಸಂಪುಟದಲ್ಲಿ ಒಮ್ಮತ ಮೂಡಿಲ್ಲ ಎಂದು ಸರಕಾರಿ ಮೂಲಗಳು ಹೇಳಿವೆ.

ಸದಾ ವಿವಾದಿತ-ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಾ ಬಂದಿರುವ ಕಾಂಗ್ರೆಸ್ ವಕ್ತಾರ-ಸಂಸದ ಮನೀಷ್ ತಿವಾರಿಯವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಜಂಟಿ ಸದನ ಸಮಿತಿಯಲ್ಲಿ ವಿವಿಧ ಪಕ್ಷಗಳಿಗೆ ಸೇರಿದ ಸದಸ್ಯರಿದ್ದು, ಅವರು ಮಾಡಿರುವ ಶಿಫಾರಸುಗಳನ್ನು ಸ್ವೀಕರಿಸುವ ಅಥವಾ ಬದಲಾವಣೆ ಮಾಡುವ ನಿರ್ಧಾರ ಸರಕಾರಕ್ಕೆ ಬಿಟ್ಟದ್ದು. ಅವರೇ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ಹಾಗಾಗಿ ನಿಮ್ಮ ಪ್ರಶ್ನೆಗಳನ್ನು ಸಂಬಂಧಪಟ್ಟವರನ್ನೇ ಕೇಳಿ ಎಂದಿದ್ದಾರೆ.

ಸಂಬಂಧಪಟ್ಟ ಸುದ್ದಿಗಳು:
** ಸಂಸದರ ಸಂಬಳ ಹೆಚ್ಚಳಕ್ಕೆ ಯಾರೂ ಗದ್ದಲ ಎಬ್ಬಿಸಲ್ಲ!
** ಸಂಸದರ ವೇತನ 50,000 ರೂ.; ಶೀಘ್ರದಲ್ಲೇ ನಿರ್ಧಾರ
ಸಂಬಂಧಿತ ಮಾಹಿತಿ ಹುಡುಕಿ