ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್‌ಗೆ ಭಾರತದ ನ್ಯಾಯಾಂಗದಲ್ಲಿ ನಂಬಿಕೆಯಿಲ್ವಂತೆ! (Pakistan | Ajmal Kasab | Bombay High Court | Mumbai attacks)
Bookmark and Share Feedback Print
 
ತನ್ನ ಮರಣದಂಡನೆಯನ್ನು ಖಚಿತಪಡಿಸುವ ಬಾಂಬೆ ಹೈಕೋರ್ಟ್ ವಿಚಾರಣೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಸತತ ನಿರಾಕರಣೆ ವ್ಯಕ್ತಪಡಿಸುತ್ತಿರುವ ಪಾಕಿಸ್ತಾನಿ ಪಾತಕಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್, ತನಗೆ ಅದರಲ್ಲಿ ನಂಬಿಕೆ ಇಲ್ಲ ಎಂದು ಹೇಳುತ್ತಿದ್ದಾನೆ ಎಂದು ಆತನ ವಕೀಲರು ಹೇಳಿದ್ದಾರೆ.

ಇದನ್ನೂ ಓದಿ:
* ಕ್ಯಾಮರಾಕ್ಕೆ ಉಗುಳಿದ ಕಸಬ್, ಪೊಲೀಸರೊಂದಿಗೆ ಜಗಳ
* ಅತ್ತ ವಿಚಾರಣೆ; ಇತ್ತ ಕಸಬ್‌ನಿಂದ ಆಕಳಿಕೆ, ನಗು, ಕೆರೆತ!

ಗುರುವಾರ ಆರ್ಥರ್ ರೋಡ್ ಸೆಂಟ್ರಲ್ ಜೈಲಿನಲ್ಲಿ ಕಸಬ್‌ನನ್ನು ಭೇಟಿಯಾದ ಆತನ ವಕೀಲರುಗಳಾದ ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ, ಆತ ನೇರವಾಗಿ ನ್ಯಾಯಾಲಯದ ಮುಂದೆ ಬರಲು ಬಯಸುತ್ತಿದ್ದಾನೆ ಎಂದು ಹೇಳಿದ್ದಾರೆ.
PTI

ಆತನಿಗೆ ವೀಡಿಯೋ ಕಾನ್ಫರೆನ್ಸ್‌ನಲ್ಲಿ ನಂಬಿಕೆಯಿಲ್ಲ. ನನ್ನನ್ನು ನೇರವಾಗಿ ಬಾಂಬೆ ಹೈಕೋರ್ಟಿಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾನೆ. ಆತನಿಗಿರುವ ಬೆದರಿಕೆಗಳ ಬಗ್ಗೆ ವಿವರಣೆ ನೀಡಿದರೂ ಆತ ಬಗ್ಗುತ್ತಿಲ್ಲ. ನ್ಯಾಯಾಲಯಕ್ಕೇ ಬರುವುದಾಗಿ ಹೇಳುತ್ತಿದ್ದಾನೆ ಎಂದು ಶಾ ವಿವರಣೆ ನೀಡಿದ್ದಾರೆ.

ಅದೇ ಹೊತ್ತಿಗೆ ತನಗೆ ಭಾರತೀಯ ನ್ಯಾಯಾಂಗದಲ್ಲಿ ನಂಬಿಕೆಯಿಲ್ಲ ಎಂದೂ ಕಸಬ್ ಹೇಳಿದ್ದಾನೆ. ಆದರೆ ಈ ಕುರಿತು ಆತನ ವಕೀಲರು ಹೆಚ್ಚಿನ ವಿವರ ನೀಡಿಲ್ಲ.

ಭಾರತದಲ್ಲಿ ನನ್ನ ಬಗ್ಗೆ ಸಾಕಷ್ಟು ಮಾನವ ಹಕ್ಕುಗಳ ಉಲ್ಲಂಘನೆಗಳು ನಡೆದಿರುವುದರಿಂದ ನನ್ನ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಶಿಫಾರಸು ಮಾಡಬಹುದಾಗಿದೆ. ನನಗೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ ಎಂದು ತಿಳಿಸಿದ್ದಾನೆ ಎಂದು ವಕೀಲರು ಹೇಳಿದ್ದಾರೆ.

ನಮಗೆ ಕಸಬ್ ಹೇಳಿರುವುದನ್ನು ನಾವು ನ್ಯಾಯಾಲಯಕ್ಕೆ ತಿಳಿಸುತ್ತೇವೆ. ಈ ಕುರಿತ ಅಂತಿಮ ನಿರ್ಧಾರವನ್ನು ನ್ಯಾಯಮೂರ್ತಿಗಳೇ ತೆಗೆದುಕೊಳ್ಳಲಿ. ಜತೆಗೆ ಆತನನ್ನು ಜೈಲಿನಲ್ಲಿ ಪ್ರತ್ಯೇಕವಾಗಿ ಒಬ್ಬನನ್ನೇ ಕೋಣೆಯಲ್ಲಿ ಇಡಲಾಗಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಪತ್ರಿಕೆಗಳು ಅಥವಾ ಪುಸ್ತಕಗಳನ್ನೂ ಓದಲು ನೀಡುತ್ತಿಲ್ಲ ಎಂದು ದೂರಿಕೊಂಡಿದ್ದಾನೆ ಎಂದರು.

ತನಗೆ ಹೊರ ಜಗತ್ತಿನ ಸಂಪರ್ಕ ಏರ್ಪಡಿಸುವಂತೆ ಮಾಡಿ. ಈ ರೀತಿಯಾಗಿ ಒಬ್ಬಂಟಿಯಾಗಿ ನಾಲ್ಕು ಗೋಡೆಗಳ ನಡುವೆ ಇರುವುದು ನನಗೆ ಮಾನಸಿಕ ಅಶಾಂತಿಯನ್ನು ಉಂಟು ಮಾಡುತ್ತಿದೆ ಎಂದೂ ಕಸಬ್ ಒತ್ತಾಯಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ