ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದೂಗಳಿಂದ ಸಂಜೋತಾ ಸ್ಫೋಟ; ಒಪ್ಪಿಕೊಂಡ ಸ್ವಾಮಿ? (RSS | Samjhauta blasts | Swami Aseemanand | CBI)
Bookmark and Share Feedback Print
 
ಸ್ವಾಮಿ ಅಸೀಮಾನಂದ್
PR

ಅಸೀಮಾನಂದ್ ಹೇಳಿಕೆಯಿದು...

'ನಾನು ಹೈದರಾಬಾದಿನ ಜೈಲಿನಲ್ಲಿದ್ದಾಗ ಅದೇ ಜೈಲಿನಲ್ಲಿದ್ದ ಕಲೀಂ ಎಂಬಾತನ ಪರಿಚಯವಾಯಿತು. ಆತ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾದವನು. ಸುಮಾರು ಒಂದೂವರೆ ವರ್ಷ ಜೈಲಿನಲ್ಲೇ ಕಾಲ ಕಳೆದಿದ್ದಾನೆ. ನನಗೆ ಆತ ನೀರು ತಂದುಕೊಡುವುದು, ತಿಂಡಿ ಕೊಡುವುದನ್ನು ಮಾಡುತ್ತಿದ್ದ. ಆತನ ಸಭ್ಯ ವರ್ತನೆ ನನ್ನನ್ನು ಭಾರೀ ಕೆದಕಿತು. ಕನಿಷ್ಠ ಪಾಯಶ್ಚಿತ ಮಾಡಿಕೊಳ್ಳಬೇಕೆಂಬ ನಿರ್ಧಾರಕ್ಕೆ ನಾನು ಬಂದದ್ದೇ ಆಗ. ಹಾಗಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಿದ್ದೇನೆ'

'ನನಗೆ ಮರಣ ದಂಡನೆ ಶಿಕ್ಷೆ ನೀಡಬಹುದು ಎಂಬುದು ಗೊತ್ತು. ಆದರೂ ನಾನು ತಪ್ಪೊಪ್ಪಿಗೆ ನೀಡುತ್ತೇನೆ'

'ಬಾಂಬ್‌ಗೆ ಬಾಂಬ್ ಮೂಲಕವೇ ಉತ್ತರಿಸಬೇಕು. ಆದರೆ ಹಿಂದೂಗಳು ಸುಮ್ಮನೆ ಕುಳಿತಿದ್ದಾರೆ. ಇದು ಒಳ್ಳೆಯದಲ್ಲ ಎಂದು ನಾನು ಪ್ರತಿಯೊಬ್ಬರಿಗೂ ಹೇಳಿದ್ದೆ'

'2005ರಲ್ಲಿ ಒಂದು ದಿನ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಇಂದ್ರೇಶ್ ಶಬರಿಧಾಮಕ್ಕೆ ಬಂದಿದ್ದರು. ಅವರ ಜತೆ ಆರೆಸ್ಸೆಸ್‌ನ ಹಲವು ಉನ್ನತ ನಾಯಕರು ಇದ್ದರು. ಸುನಿಲ್ ಜೋಷಿ ಕೂಡ ಇದ್ದರು. ಇಂದ್ರೇಶ್ ಎಲ್ಲರನ್ನೂ ಭೇಟಿ ಮಾಡಿದರು'

'ಬಾಂಬು ತಯಾರಿಸುವುದು ನನ್ನ ಕೆಲಸವಲ್ಲ, ನಾನು ಬುಡಕಟ್ಟು ಜನರ ಜತೆ ಕೆಲಸ ಮಾಡಬೇಕು ಎಂದು ಆರೆಸ್ಸೆಸ್ ನನಗೆ ಸೂಚಿಸಿದೆ. ಬಾಂಬು ತಯಾರಿಸುವ ಹೊಣೆಯನ್ನು ಸುನಿಲ್ ಜೋಷಿಗೆ ನೀಡಲಾಗಿದೆ. ಸುನಿಲ್‌ಗೆ ಯಾವುದೇ ರೀತಿಯ ಸಹಾಯ ಬೇಕಿದ್ದರೂ ನಾವು ನೀಡುತ್ತೇವೆ ಎಂದು ಇಂದ್ರೇಶ್ ನನಗೆ ತಿಳಿಸಿದ್ದರು'

ಮುಂದುವರಿದಿದೆ -- 3ನೇ ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ ಮಾಡಿ

 
ಸಂಬಂಧಿತ ಮಾಹಿತಿ ಹುಡುಕಿ