ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದೂಗಳಿಂದ ಸಂಜೋತಾ ಸ್ಫೋಟ; ಒಪ್ಪಿಕೊಂಡ ಸ್ವಾಮಿ? (RSS | Samjhauta blasts | Swami Aseemanand | CBI)
Bookmark and Share Feedback Print
 
PR

'ಸುನಿಲ್ ಜೋಷಿ ಮತ್ತು ಭರತ್ ನಾಗ್ಪುರದಲ್ಲಿ ಇಂದ್ರೇಶ್ ಅವರನ್ನು ಭೇಟಿ ಮಾಡಿದ್ದರು ಮತ್ತು ಈ ಸಂದರ್ಭದಲ್ಲಿ ಭರತ್ ಉಪಸ್ಥಿತಿಯಲ್ಲೇ ಸುನಿಲ್‌ಗೆ 50,000 ರೂಪಾಯಿಗಳನ್ನು ಇಂದ್ರೇಶ್ ನೀಡಿದ್ದರು ಎಂಬುದು ಕೂಡ ನನಗೆ ತಿಳಿಯಿತು. ಇಂದ್ರೇಶ್ ಐಎಸ್ಐ ಏಜೆಂಟ್ ಎಂದು ಯಾವತ್ತೋ ಒಂದು ಸಲ ನನಗೆ ಕರ್ನಲ್ ಪುರೋಹಿತ್ ಹೇಳಿದ್ದರು. ಅಲ್ಲದೆ ಇದನ್ನು ಸಾಬೀತುಪಡಿಸುವ ದಾಖಲೆಗಳೂ ನನ್ನಲ್ಲಿವೆ ಎಂದಿದ್ದರು. ಆದರೆ ಯಾವತ್ತೂ ಆ ದಾಖಲೆಗಳನ್ನು ನನಗೆ ತೋರಿಸಿರಲಿಲ್ಲ'

'ಮಾಲೆಗಾಂವ್‌ನಲ್ಲಿರುವುದು ಶೇ.80ರಷ್ಟು ಮುಸ್ಲಿಮರು. ಹಾಗಾಗಿ ನಾವು ಮೊದಲ ಬಾಂಬ್ ಅಲ್ಲಿಯೇ ಸ್ಫೋಟಿಸಬೇಕು. ವಿಭಜನೆ ಸಂದರ್ಭದಲ್ಲಿ ಹೈದರಾಬಾದ್ ನಿಜಾಮ ಪಾಕಿಸ್ತಾನಕ್ಕೆ ಸೇರಬೇಕೆಂದು ಬಯಸಿದ್ದ. ಹಾಗಾಗಿ ಅದನ್ನೂ ನಾವು ಗುರಿ ಮಾಡಿದೆವು. ಅಜ್ಮೀರ್ ದರ್ಗಾಕ್ಕೆ ಹಿಂದೂಗಳೂ ಹೋಗುತ್ತಾರೆ. ಅದನ್ನು ತಪ್ಪಿಸಲು ಅಲ್ಲೂ ಸ್ಫೋಟ ನಡೆಸಬೇಕು. ಆಲಿಗಢ ಮುಸ್ಲಿಂ ಯುನಿವರ್ಸಿಟಿಯಲ್ಲೂ ಸ್ಫೋಟ ನಡೆಸಬೇಕು ಎಂದು ನಾನು ಹೇಳಿದ್ದೆ'

'ಸಂಜೋತಾ ರೈಲಿನಲ್ಲಿ ಬಹುತೇಕ ಪಾಕಿಸ್ತಾನೀಯರೇ ಇರುವುದರಿಂದ, ಅದನ್ನೇ ನಾವು ಗುರಿ ಮಾಡಬೇಕು ಎಂದು ಸುನಿಲ್ ಜೋಷಿ (ಈಗ ಅವರು ಬದುಕಿಲ್ಲ) ಸಲಹೆ ಮಾಡಿದ್ದರು'

'2006ರಲ್ಲಿ ಮಾಲೆಗಾಂವ್ ಸ್ಫೋಟ ನಡೆಸಿದ್ದು ನಮ್ಮದೇ ಜನರು ಎಂದು ಸುನಿಲ್ ನನಗೆ ಹೇಳಿದರು. ಆದರೆ ಪತ್ರಿಕೆಗಳು ಇದನ್ನು ನಡೆಸಿದ್ದು ಮುಸ್ಲಿಮರು ಎಂದು ಬರೆದಿದೆಯಲ್ಲ ಎಂದು ಪ್ರಶ್ನಿಸಿದೆ. ಇಲ್ಲ, ಅದನ್ನು ನಡೆಸಿದ್ದು ನಾನೇ ಎಂದು ಸುನಿಲ್ ತಿಳಿಸಿದರು. ಆದರೆ ಸ್ಫೋಟದಲ್ಲಿ ಪಾಲ್ಗೊಂಡವರು ಯಾರು ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ'

'2007ರ ಫೆಬ್ರವರಿಯಲ್ಲಿ ರಿತೇಶ್ವರ್ ಮತ್ತು ಸುನಿಲ್ ಅವರು ಬಾಲ್ಪುರ್ ಎಂಬಲ್ಲಿನ ಶಿವ ದೇವಸ್ಥಾನಕ್ಕೆ ಬೈಕಿನಲ್ಲಿ ಬಂದಿದ್ದರು. ನಾನು ಅವರಿಬ್ಬರಿಗೆ ಅಲ್ಲಿ ಮೊದಲೇ ಕಾಯುತ್ತಿದ್ದೆ. ಇನ್ನೆರಡು ದಿನಗಳಲ್ಲಿ ನಮಗೆ ಶುಭ ಸುದ್ದಿ ಕಾದಿದೆ ಎಂದು ಸುನಿಲ್ ನನಗೆ ಹೇಳಿದರು'

'ಕೆಲವು ದಿನಗಳ ನಂತರ ನಾನು ರಿತೇಶ್ವರ್ ನಿವಾಸಕ್ಕೆ ಹೋಗಿ ಅವರನ್ನು ಭೇಟಿ ಮಾಡಿದ್ದೆ. ಆಗ ಸುನಿಲ್ ಮತ್ತು ಪ್ರಜ್ಞಾ ಸಿಂಗ್ ಠಾಕೂರ್ ಕೂಡ ಅಲ್ಲಿದ್ದರು. ಆಗಲೇ ಸಂಜೋತಾ ಸ್ಫೋಟ ನಡೆದಿತ್ತು. ನೀವು ಇಲ್ಲೇ ಇದ್ದೀರಿ, ಆದರೆ ಹರ್ಯಾಣದಲ್ಲಿ ಸಂಜೋತಾ ಸ್ಫೋಟ ನಡೆದಿದೆ, ಇದು ಹೇಗೆ ಎಂದು ನಾನು ಪ್ರಶ್ನಿಸಿದೆ. ಸ್ಫೋಟ ನನ್ನ ಜನರಿಂದಲೇ ಆಗಿದೆ ಎಂದು ಆಗ ನನಗೆ ಸುನಿಲ್ ಜೋಷಿ ಹೇಳಿದರು'

'ಹೈದರಾಬಾದ್ ಸ್ಫೋಟಗಳಿಗಾಗಿ ನನ್ನಿಂದ ಸುನಿಲ್ ಜೋಷಿ 40,000 ರೂಪಾಯಿ ಪಡೆದುಕೊಂಡಿದ್ದರು. ಕೆಲವು ತಿಂಗಳುಗಳ ನಂತರ ನನಗೆ ಫೋನ್ ಮಾಡಿದ್ದ ಅವರು, ಪತ್ರಿಕೆಗಳ ಮೇಲೆ ಗಮನ ಹರಿಸುವಂತೆ ಸೂಚಿಸಿದ್ದರು. ಕೆಲವೇ ದಿನಗಳಲ್ಲಿ ಮೆಕ್ಕಾ ಸ್ಫೋಟದ ವರದಿ ಪತ್ರಿಕೆಗಳಲ್ಲಿ ಬಂದಿತ್ತು. ಏಳೆಂಟು ದಿನಗಳ ನಂತರ ಅವರು ತೆಲುಗು ಪತ್ರಿಕೆಯೊಂದರ ಜತೆ ಶಬರಿಧಾಮಕ್ಕೆ ಬಂದಿದ್ದರು. ಪತ್ರಿಕೆಗಳೆಲ್ಲ ಇದು ಮುಸ್ಲಿಂ ಹುಡುಗರ ಕೃತ್ಯ ಎಂದು ಬರೆದಿವೆಯಲ್ಲ ಎಂದು ನಾನು ಯಥಾ ಪ್ರಕಾರವಾಗಿ ಸುನಿಲ್ ಜೋಷಿಯವರಲ್ಲಿ ಪ್ರಶ್ನಿಸಿದೆ. ಆದರೆ ಅದನ್ನು ನಡೆಸಿದ್ದು ನನ್ನ ಜನರು ಎಂದು ಅವರು ಉತ್ತರಿಸಿದರು'

ಮುಂದುವರಿದಿದೆ -- 4ನೇ ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ ಮಾಡಿ

 
ಸಂಬಂಧಿತ ಮಾಹಿತಿ ಹುಡುಕಿ