ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತ.ನಾಡಿನಲ್ಲಿ ಅಧಿಕಾರದತ್ತ 'ಜಯಾ'ಲಲಿತ: ಕರುಣಾ ಹಿನ್ನಡೆ (Tamilnadu Assembly Election Results 2011 | Jayalalithaa | AIADMK | Karunanidhi)
ಆರು ವಾರಗಳ ಕಾತರಕ್ಕೆ ಶುಕ್ರವಾರ ತೆರೆ ಬೀಳತೊಡಗಿದ್ದು, ತಮಿಳುನಾಡಿನಲ್ಲಿ 2ಜಿ ಹಗರಣ ಫಲ ಕೊಟ್ಟಿದೆ. ಆಡಳಿತಾರೂಢ ಡಿಎಂಕೆ ಹಾಗೂ ಪಾಲುದಾರ ಕಾಂಗ್ರೆಸ್ ಪಕ್ಷವು ಮತದಾರರ ಕೈಯಲ್ಲಿ ಹೀನಾಯವಾಗಿ ದಂಡಿಸಿಕೊಂಡಿರುವ ಲಕ್ಷಣಗಳು ಕಾಣಿಸುತ್ತಿವೆ. ಜಯಲಲಿತಾಗೆ ಜಯ ಮಾಲೆ ದೊರೆಯುವುದು ನಿಚ್ಚಳವಾಗಿದ್ದು, ಈಗಾಗಲೇ ಎಐಎಡಿಎಂಕೆ ನಾಯಕಿಯ ಪೊಯೆಸ್ ಗಾರ್ಡನ್ ನಿವಾಸದ ಸುತ್ತ ಕಾರ್ಯಕರ್ತರು ವಿಜಯೋತ್ಸಾಹದಲ್ಲಿ, ಆಚರಣೆಯಲ್ಲಿ ನಿರತರಾಗಿದ್ದಾರೆ.

ಕ್ಲಿಕ್ ಮಾಡಿ: ಎಲ್ಲ ರಾಜ್ಯಗಳ ಇತ್ತೀಚಿನ ಬಲಾಬಲವೇನು, ಟ್ರೆಂಡ್ ಏನು?

ಟಿವಿ, ಫ್ರಿಜ್, ವಾಷಿಂಗ್ ಮೆಶಿನ್, ಲ್ಯಾಪ್‌ಟಾಪ್, ಕಂಪ್ಯೂಟರ್, ಅದೂ-ಇದೂ ಅಂತ ಮತದಾರರಿಗೆ ಹಲವಾರು ಆಮಿಷಗಳನ್ನು ಎಲ್ಲ ರಾಜಕೀಯ ಪಕ್ಷಗಳು ಒಡ್ಡಿದ ಹೊರತಾಗಿಯೂ, ಬಹುಶಃ ದೇಶವನ್ನೇ ಕಂಗೆಡಿಸಿದ್ದ 2ಜಿ ಸ್ಪೆಕ್ಟ್ರಂ ಹಗರಣ ಇಲ್ಲಿ ಬಲವಾಗಿಯೇ ತನ್ನ ಪ್ರಭಾವ ಬೀರಿದಂತೆ ತೋರುತ್ತಿದೆ. ಮುಖ್ಯಮಂತ್ರಿ ಎಂ.ಕರುಣಾನಿಧಿ ನೇತೃತ್ವದ ಮತ್ತು ಕಾಂಗ್ರೆಸ್ ಭರ್ಜರಿ ಸಾಥ್ ನೀಡಿರುವ ಮೈತ್ರಿಕೂಟವು ನೆಲ ಕಚ್ಚಿರುವುದು ನಿಚ್ಚಳವಾಗಿದ್ದು, ಆಡಳಿತ ವಿರೋಧಿ ಅಲೆಯಿಂದ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರ ಕಳೆದುಕೊಳ್ಳತೊಡಗಿದೆ.

2006ರ ಚುನಾವಣೆಗಳಲ್ಲಿ ಒಟ್ಟು 243 ಕ್ಷೇತ್ರಗಳಲ್ಲಿ, ಆಡಳಿತಾರೂಢ ಡಿಎಂಕೆ 96, ಕಾಂಗ್ರೆಸ್ 34 ಸ್ಥಾನಗಳಲ್ಲಿ ಮತ್ತು ಎಐಎಡಿಎಂಕೆ 61 ಸ್ಥಾನಗಳಲ್ಲಿ ಗೆದ್ದುಕೊಂಡಿತ್ತು. ಪಿಎಂಕೆ 18, ಸಿಪಿಎಂ 9, ಸಿಪಿಐ 6, ಎಂಡಿಎಂಕೆ 6, ವಿಸಿಕೆ 2 ಹಾಗೂ ಇತರರು 11 ಮಂದಿ ಗೆಲುವು ಸಾಧಿಸಿದ್ದರು.

ಪೂರ್ಣ ಮಾಹಿತಿಗಾಗಿ ವೆಬ್‌ದುನಿಯಾ ನೋಡುತ್ತಿರಿ.
ಇವನ್ನೂ ಓದಿ