ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಲ್ಲ ರಾಜ್ಯಗಳ ಬಲಾಬಲ ಅಂತಿಮ ಫಲಿತಾಂಶಕ್ಕೆ ಕ್ಲಿಕ್ ಮಾಡಿ (Assembly Election Results 2011 | Tamilnadu | Kerala | West Bengal | Puduchery | Assam)
ಎಲ್ಲ ರಾಜ್ಯಗಳ ಬಲಾಬಲ ಅಂತಿಮ ಫಲಿತಾಂಶಕ್ಕೆ ಕ್ಲಿಕ್ ಮಾಡಿ
ನವದೆಹಲಿ, ಶನಿವಾರ, 14 ಮೇ 2011( 12:05 IST )
ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರಕಾರದ ಮೇಲೂ ಪ್ರಭಾವ ಬೀರಲಿರುವ ಐದು ರಾಜ್ಯಗಳಾದ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭೆಗಳಲ್ಲಿ ಹೊಸ ಆಡಳಿತ ಯಾರು ನಡೆಸುತ್ತಾರೆ ಎಂಬುದು ಈಗ ದೃಢಪಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್-ಕಾಂಗ್ರೆಸ್ ಮೈತ್ರಿಕೂಟ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಐಕ್ಯರಂಗ, ಅಸ್ಸಾಂನಲ್ಲಿ ಪುನಃ ಕಾಂಗ್ರೆಸ್, ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಹಾಗೂ ಪುದುಚೇರಿಯಲ್ಲಿ ಎಐಎಡಿಎಂಕೆ-ಎನ್ಆರ್‌ಕಾಂಗ್ರೆಸ್ ಮೈತ್ರಿಕೂಟ ಸರಕಾರ ಸ್ಥಾಪಿಸಲು ಹೊರಟಿವೆ.