ಚುನಾವಣಾ ಫಲಿತಾಂಶ ಹೊರಬೀಳತೊಡಗಿರುವಂತೆಯೇ, ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಸತತ ಮೂರನೇ ಬಾರಿ ಅಧಿಕಾರಕ್ಕೇರುವ ನಿರೀಕ್ಷೆ ಮೂಡಿಸಿದೆ. 126 ಕ್ಷೇತ್ರಗಳಿಗೆ ಇಲ್ಲಿ ಚುನಾವಣೆ ನಡೆದಿದ್ದು, ಮಿತ್ರ ಪಕ್ಷ ಬಿಪಿಎಫ್ ಜೊತೆಗೆ ಅದು ಮರಳಿ ಅಧಿಕಾರಕ್ಕೇರಲು ಸಜ್ಜಾಗಿದೆ.
ಪ್ರತಿಪಕ್ಷಗಳಾದ ಅಸ್ಸಾಂ ಗಣ ಪರಿಷತ್ (ಎಜಿಪಿ), ಬಿಜೆಪಿಗಳು ಕೂಡ ಒಂದಿಷ್ಟು ಸ್ಥಾನಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದು, ಫಲಿತಾಂಶದ ಬಳಿಕ ಸರಕಾರ ರಚಿಸುವಷ್ಟು ಬಲ ಇದೆ ಎಂದಾದರೆ ಒಂದಾಗುವ ಸಾಧ್ಯತೆಗಳಿವೆ.
2006ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು 71 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದರೆ, ಪ್ರತಿಪಕ್ಷ ಎಜಿಪಿ 20, ಬಿಜೆಪಿ 8 ಹಾಗೂ ಎಐಯುಡಿಎಫ್ 10 ಸ್ಥಾನಗಳಲ್ಲಿ ವಿಜಯ ಸಾಧಿಸಿತ್ತು.