ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪೋರನಿಗೆ ವಿಸ್ಕಿ: ಮಾಧ್ಯಮಗಳ ವಿರುದ್ಧ ರೇಣುಕಾಚಾರ್ಯ ಗರಂ (Renukacharaya | BJP | Karnataka | Wisky | Media)
Bookmark and Share Feedback Print
 
ಐದರ ಹರೆಯದ ಪುಟ್ಟ ಪೋರನಿಗೆ ಮದ್ಯ ಕುಡಿಸಿರುವ ಆರೋಪ ಹೊತ್ತುಕೊಂಡಿರುವ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ.

ಆ ಹುಡುಗ ಕುಡಿಯುತ್ತಾನೋ ಇಲ್ಲವೋ ಎಂದು ಪರೀಕ್ಷೆ ಮಾಡಲು ಈ ರೀತಿ ಮಾಡಿದೆ. ಅವನು ಕುಡಿಯುತ್ತಾನೆ ಎಂದು ಗೊತ್ತಾದ ಕೂಡಲೇ ತಕ್ಷಣವೇ ಬಾಟಲನ್ನು ಹಿಂದಕ್ಕೆ ಎಳೆದುಕೊಂಡೆ. ಆದರೆ ಮಾಧ್ಯಮಗಳು ತಿರುಚಿ ವರದಿ ಪ್ರಕಟಿಸಿವೆ ಎಂದು ಆರೋಪಿಸಿದರು.

ಮಾಧ್ಯಮಗಳು ವಿಸ್ಕಿ ಬಾಟಲನ್ನು ಕೂಡಲೇ ಹಿಂದಕ್ಕೆ ಎಳೆದುಕೊಂಡದ್ದನ್ನು ವರದಿ ಮಾಡದೆ, ಕೇವಲ ಬಾಯಿಗೆ ಇಟ್ಟಿದ್ದನ್ನು ಬಿಂಬಿಸಿದೆ. ಅಲ್ಲದೆ, ಬಳಿಕ ಬಾಲಕನಿಗೆ ಬುದ್ದಿವಾದ ಹೇಳಿ ಶಾಲೆಗೆ ಸೇರಿಸುವ ಭರವಸೆ ನೀಡಿದ್ದನ್ನು ಮಾಧ್ಯಮಗಳು ಪ್ರಕಟಿಸಿಲ್ಲ. ಈ ಮೂಲಕ ಮಾಧ್ಯಮಗಳು ತಮ್ಮನ್ನು ತೇಜೋವಧೆ ಮಾಡುತ್ತಿವೆ ಎಂದು ದೂರಿದರು.

ಕಳ್ಳಭಟ್ಟಿ ದಂಧೆ ನಡೆಸಿದರೆ ಸರ್ಕಾರಿ ಸೌಲಭ್ಯ ಕಡಿತ: ಇದೇ ವೇಳೆ ಕಳ್ಳಭಟ್ಟಿ ತಯಾರಿಕೆ ಹಾಗೂ ಮಾರಾಟ ಮಾಡುವವರಿಗೆ ಆಶ್ರಯ ಯೋಜನೆ, ಬಿಪಿಎಲ್ ಕಾರ್ಡ್ ಸೇರಿದಂತೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ರದ್ದುಗೊಳಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಳ್ಳಭಟ್ಟಿ ನಿಯಂತ್ರಣದಲ್ಲಿದ್ದರೂ, ಕೆಲವೆಡೆ ಈ ಸಮಸ್ಯೆ ಇದ್ದೇ ಇದೆ. ಇಂತವರಿಗೆ ಸರ್ಕಾರಿ ಸೌಲಭ್ಯವನ್ನು ಕಡಿತಗೊಳಿಸಿದರೆ, ಈ ಪಿಡುಗು ಕಡಿಮೆಯಾಗಬಹುದೆಂಬುದು ತಮ್ಮ ಆಶಯ ಎಂದರು.

ಅಲ್ಲದೆ, ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಮದ್ಯ ಸಂಗ್ರಹ, ಕಳ್ಳಭಟ್ಟಿ ತಯಾರಿಕೆಯಂತಹ ಕೃತ್ಯಗಳ ಬಗ್ಗೆ ವಿಶೇಷ ನಿಗಾವಹಿಸುವ ನಿಟ್ಟಿನಲ್ಲಿ ತನಿಖಾ ತಂಡ ರಚಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಬ್ಬಾ...ನೀರು ಬೆರಸದೆ ವಿಸ್ಕಿ ಕುಡಿಯುವ ಐದರ ಪೋರ


ಪೋರನಿಗೆ ವಿಸ್ಕಿ ಕುಡಿಸಿದ ರೇಣುಕಾಚಾರ್ಯ ವಿರುದ್ಧ ದೂರು
ಸಂಬಂಧಿತ ಮಾಹಿತಿ ಹುಡುಕಿ