ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮದನಿ ಶರಣಾಗತಿಗೆ ಆಚಾರ್ಯ ಅಂತಿಮ 'ಡೆಡ್‌ಲೈನ್' (Karnataka | Kerala | PDP | Abdul Nasser Madani)
Bookmark and Share Feedback Print
 
'ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಶಂಕಿತ ಆರೋಪಿ ಅಬ್ದುಲ್ ನಾಸಿರ್ ಮದನಿಯನ್ನು ಮಂಗಳವಾರ ಮಧ್ಯಾಹ್ನ 3 ಗಂಟೆಯೊಳಗೆ ಕರ್ನಾಟಕದ ಪೊಲೀಸರಿಗೆ ಒಪ್ಪಿಸಿದರೆ ಸರಿ, ಇಲ್ಲದಿದ್ದರೆ ಕರ್ನಾಟಕ ಪೊಲೀಸರೆ ಮುಂದಿನ ಕ್ರಮ ಕೈಗೊಳ್ಳುತ್ತಾರೆ' ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ಕೇರಳ ಸರಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಮುಖಂಡ ಅಬ್ದುಲ್ ನಾಸಿರ್ ಮದನಿಯನ್ನು ಬಂಧಿಸಲು ಕಳೆದ ಒಂದು ವಾರದಿಂದ ಕೊಲ್ಲಂ ಜಿಲ್ಲೆಯಲ್ಲಿ ಠಿಕಾಣಿ ಹೂಡಿದ್ದಾರೆ. ಆದರೆ ಕಳೆದ ನಾಲ್ಕು ದಿನಗಳಿಂದ ನಾಟಕೀಯ ಬೆಳವಣಿಗೆಯಿಂದಾಗಿ ನಾಸಿರ್ ಬಂಧನ ಸಾಧ್ಯವಾಗಿಲ್ಲ. ಮತ್ತೊಂದೆಡೆ ಕೇರಳ ಪೊಲೀಸರು ಕೂಡ ಮದನಿ ಬಂಧನಕ್ಕೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಆಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಶಂಕಿತ ಆರೋಪಿ ಅಬ್ದುಲ್ ನಾಸಿರ್ ಮದನಿ ಇಂದು ಮಧ್ಯಾಹ್ನ 3ಗಂಟೆಯೊಳಗೆ ಶರಣಾಗುವಂತೆ ಆಚಾರ್ಯ ಅಂತಿಮ ಗಡುವು ವಿಧಿಸಿದ್ದು, ಇಲ್ಲದಿದ್ದರೆ ನಾವೇ ಮದನಿಯನ್ನು ಬಂಧಿಸುತ್ತೇವೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಆ ನಿಟ್ಟಿನಲ್ಲಿ ಮದನಿಯ ಗ್ರಾಮವಾದ ಅನ್ವಶ್ಶೇರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇನ್ನು ವಿಳಂಬ ಸಾಧ್ಯವಿಲ್ಲ: ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮದನಿಯ ಬಂಧನ ವಿಳಂಬವಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ಆಚಾರ್ಯ, ನಾವು ಮದನಿಯನ್ನು ಕೋರ್ಟ್‌ಗೆ ಹಾಜರುಪಡಿಸಲೇಬೇಕಾಗಿದೆ. ಕೋರ್ಟ್ ನೀಡಿರುವ ಗಡುವು ಸೋಮವಾರಕ್ಕೆ ಮುಕ್ತಾಯಗೊಂಡಿದೆ. ಅಲ್ಲದೇ, ಮದನಿಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಲಾಯಿತು. ಇವೆಲ್ಲ ನಾಟಕಗಳ ನಡುವೆ ಮದನಿ ಬಂಧನ ವಿಳಂಬವಾಗುತ್ತಿದೆ ಎಂದು ಆಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಇಂದು ಮದನಿ ಬಂಧನ ಖಚಿತ ಎಂದು ಸ್ಪಷ್ಟಪಡಿಸಿದರು.

ಜಾಮೀನು ಅರ್ಜಿ ಇಂದು ವಿಚಾರಣೆ: ಆರೋಪಿ ಅಬ್ದುಲ್ ನಾಸಿರ್ ಮದನಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ. ಮದನಿಗೆ ನಿರೀಕ್ಷಣಾ ಜಾಮೀನು ನೀಡಲು ನಗರದ ಐದನೇ ತ್ವರಿತ ನ್ಯಾಯಾಲಯ ಜುಲೈ 9ರಂದು ನಿರಾಕರಿಸಿತ್ತು. ಇದೀಗ ಈ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.

ಏತನ್ಮಧ್ಯೆ ತನ್ನ ಬಂಧನದ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿ ಮದನಿ ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯ ವಿಚಾರಣೆ ಕೂಡ ಮಂಗಳವಾರ ನಡೆಯುವ ಸಾಧ್ಯತೆ ಇದೆ ಎಂದು ಆತನ ವಕೀಲರಾದ ಅಡಾಲ್ಫ್ ಮ್ಯಾಥ್ಯೂ ವಿವರಿಸಿದ್ದಾರೆ.

ಮದನಿ ಶರಣಾಗತಿ ಸಾಧ್ಯತೆ?: ಮದನಿ ಬಂಧನಕ್ಕೆ ಕರ್ನಾಟಕ ರಾಜ್ಯದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನ್ವಶ್ಶೇರಿಯಲ್ಲಿರುವ ಅಬ್ದುಲ್ ನಾಸಿರ್ ಮದನಿ ಇಂದು ಕೊಲ್ಲಂ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ.

ಸುಪ್ರೀಂ ಮೊರೆ ಹೋದ ಅಬ್ದುಲ್ ನಾಸಿರ್ ಮದನಿ

ನನ್ನ ಬಂಧಿಸಿದ್ರೆ ಕೋಮುದಳ್ಳುರಿ ನಡೆಯುತ್ತೆ-ಮದನಿ
ಸಂಬಂಧಿತ ಮಾಹಿತಿ ಹುಡುಕಿ