ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕುಮಾರ ರಾಜ್ಯಪಾಲರಿಗೆ, ಅನರ್ಹರು ಹೈಕೋರ್ಟಿಗೆ ಮೊರೆ (Vidhana Soudha | BJP Government | Karnataka Crisis | Vote of Confidence)
Bookmark and Share Feedback Print
 
WD
ರಾಜ್ಯದ ಬಿಜೆಪಿ ಸರಕಾರ ಅಕ್ರಮವಾಗಿ ವಿಶ್ವಾಸಮತ ಗೆದ್ದಿದೆ. ಇದು ನ್ಯಾಯಯುತವಾಗಿ ಕಲಾಪ ನಡೆದಿಲ್ಲ ಎಂದು ಆರೋಪಿಸಿರುವ ಪ್ರತಿಪಕ್ಷಗಳು ರಾಜ್ಯಪಾಲರ ಮೊರೆ ಹೋಗಿದ್ದು, ಸಂಜೆಯೊಳಗೆ ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಭಿನ್ನಮತೀಯ ಬಿಜೆಪಿ ನಾಯಕರ ನೇತೃತ್ವ ವಹಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ರಾಜಭವನದ ಹೊರಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜಭವನವು ರಾಜಕೀಯ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಈ ನಡುವೆ, ಅನರ್ಹಗೊಂಡ ಶಾಸಕರು ಹೈಕೋರ್ಟ್ ಮೊರೆ ಹೋಗಿದ್ದು, ಅದರ ವಿಚಾರಣೆ ಸೋಮವಾರ ಅಪರಾಹ್ನ 3 ಗಂಟೆಗೆ ನಿಗದಿಯಾಗಿದೆ.

ಎಂಎಲ್‌ಸಿಗಳು ಕೂಡ ವಿಧಾನಸಭೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಭಾಧ್ಯಕ್ಷರು ಒಂದು ಕ್ಷಣವೂ ಆ ಸ್ಥಾನದಲ್ಲಿ ಕೂರುವ ನೈತಿಕತೆ ಕಳೆದುಕೊಂಡಿದ್ದಾರೆ. ಈ ನಡವಳಿಕೆಯು, ಬಿಜೆಪಿ ಸರಕಾರಕ್ಕೆ ಬೆಂಬಲವಿಲ್ಲ ಎಂಬುದು ಸಾಬೀತಾಗಿದ್ದು, ಬಹುಮತ ಸಾಬೀತುಪಡಿಸಲು ವಿಫಲವಾಗಿ, ಸಭಾಧ್ಯಕ್ಷ ಸ್ಥಾನದ ದುರುಪಯೋಗ ಮಾಡಿದ್ದಾರೆ. ಅಂತೆಯೇ ಪೊಲೀಸರಿಗೆ ಸದನದೊಳಗೆ ಬರಲು ಅಧಿಕಾರ ಕೊಟ್ಟವರಾರು, ಅದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಅವರೇ ಬೆಲೆ ತೆರುತ್ತಾರೆ ಎಂದರು.

ಎಲ್ಲ ಭಿನ್ನಮತೀಯ ಶಾಸಕರು, ಜೆಡಿಎಸ್, ಕಾಂಗ್ರೆಸ್ ಶಾಸಕರೆಲ್ಲರೂ ಸೇರಿ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಸರಕಾರವನ್ನು ವಜಾ ಮಾಡುವಂತೆ ಕೋರಿದ್ದೇವೆ ಎಂದ ಅವರು, ರಾಜ್ಯಪಾಲರು ಸಂಜೆಯೊಳಗೆ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಸಂಖ್ಯೆಯ ಆಟ...
ಇಂದು ಬೆಳಿಗ್ಗೆ 16 ಶಾಸಕರ ಅನರ್ಹತೆಯ ಬಳಿಕ ವಿಧಾನಸಭೆಯ ಒಟ್ಟು ಸಂಖ್ಯಾಬಲವು 224ರಿಂದ 208ಕ್ಕೆ ಕುಸಿಯಿತು. ಈ ಕಾರಣ, ಬಹುಮತಕ್ಕೆ ಬೇಕಾದ ಸಂಖ್ಯೆಯೂ 105ಕ್ಕೆ ಇಳಿದಿತ್ತು. ಬಿಜೆಪಿ ಪರವಾಗಿ 106 ಸದಸ್ಯರು ಸಭೆಯಲ್ಲಿದ್ದರು.

ಇದೀಗ ಕಾಂಗ್ರೆಸ್ 73, ಜೆಡಿಎಸ್ 28, ಸ್ವತಂತ್ರರು 6 ಹಾಗೂ ಬಿಜೆಪಿಯ ಬಂಡಾಯ ಶಾಸಕರು 11 ಮಂದಿ ಸೇರಿದರೆ 118 ಆಗುತ್ತದೆ. (ಇವರಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಐದೂವರೆಗೆ ಅನರ್ಹಗೊಂಡ 16 ಮಂದಿಯೂ ಸೇರಿದ್ದಾರೆ- ಹೀಗಾಗಿ ಅವರ ವಾಸ್ತವ ಸಂಖ್ಯಾಬಲ 102). ಇದೀಗ ಬಿಜೆಪಿ ಪರವಾಗಿ 106 ಮಂದಿ ಮಾತ್ರವೇ ಉಳಿದುಕೊಂಡಿದೆ.

ಕಾನೂನು ಮೀರಿಲ್ಲ ಅಂದ್ರು ಸ್ಪೀಕರ್...
ಈ ಬಗ್ಗೆ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ರಾಜ್ಯಪಾಲರು ಅಧಿವೇಶನ ಕರೆದಿದ್ದು ಒಂದೇ ಒಂದು ಉದ್ದೇಶಕ್ಕೆ, ಸರಕಾರದ ಬಹುಮತ ಸಾಬೀತುಪಡಿಸುವುದಕ್ಕಾಗಿ. ಹೀಗಾಗಿ ಅದೇ ಒಂದು ಪ್ರಸ್ತಾಪನೆಯನ್ನು ಮಂಡಿಸಲು ಅವಕಾಶ ಕೊಡಲಾಗಿತ್ತು.

ತಾನು ಕಾನೂನುಬದ್ಧವಾಗಿಯೇ, ಸಂವಿಧಾನಾತ್ಮಕ ನಿಯಮಾವಳಿಗಳ ಪ್ರಕಾರವೇ ಧ್ವನಿಮತಕ್ಕೆ ಹಾಕಿದ್ದೇನೆ. ಅದನ್ನು ಅಂಗೀಕರಿಸಿಯೂ ಇದ್ದೇನೆ. ಧರಣಿ, ಗಲಾಟೆ ಮಾಡುತ್ತಿದ್ದ ವಿರೋಧಪಕ್ಷ ಸದಸ್ಯರಲ್ಲಿ ಗದ್ದಲ ಮಾಡದಂತೆ ಎಷ್ಟು ವಿನಂತಿಸಿಕೊಂಡರೂ ಅವರು ಕಿವಿಗೊಡಲಿಲ್ಲ. ನಿಯಮಾವಳಿಗಳ ಮೂಲಕ ಪ್ರಸ್ತಾವನೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಿದ್ದೇನೆ. ಸಭಾಧ್ಯಕ್ಷರ ಸ್ಥಾನ ಸಂವಿಧಾನಾತ್ಮಕ ಹುದ್ದೆಯಾಗಿದೆ. ಹೇಗೆ ಕರ್ತವ್ಯ ನಿರ್ವಹಿಸಬೇಕೆಂಬುದು ಸಂವಿಧಾನದಲ್ಲಿದೆ, ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದೆ ಎಂದು ಹೇಳುವುದಾದರೆ ಎಂದರೆ ನನ್ನ ಬಳಿ ಉತ್ತರವಿಲ್ಲ. ಸಭಾಧ್ಯಕ್ಷರ ನಿರ್ಣಯವನ್ನು ಯಾರೂ ಚಾಲೆಂಜ್ ಮಾಡುವಂತಿಲ್ಲ ಎಂಬುದು ಕೂಡ ನಿಯಮ ಎಂದೂ ಹೇಳಿದರು.

ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ತೀರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಆದರೆ, ಸ್ಪೀಕರ್ ಅವರೇ ಹೇಳುವಂತೆ, ಶಾಸಕಾಂಗದ ಮುಖ್ಯಸ್ಥರಾದ ಸಭಾಧ್ಯಕ್ಷರ ತೀರ್ಮಾನವನ್ನು ಯಾರೂ ಪ್ರಶ್ನಿಸುವಂತಿಲ್ಲ. ಇದೀಗ ಮತ್ತೊಂದು ಬಾರಿ ನ್ಯಾಯಾಂಗ ಮತ್ತು ಶಾಸಕಾಂಗ ನಡುವೆ ಸಂಘರ್ಷಕ್ಕೆ ಕಾರಣವಾಗುವ ಪ್ರಸಂಗವಿದು.

ಇವನ್ನೂ ಓದಿ... "ಮನರಂಜನಾ" ಸುದ್ದಿಗಳಿವು!
ಧ್ವನಿಮತದಿಂದ ವಿಶ್ವಾಸಮತ ಗೆದ್ದ ಸರಕಾರ!
ಪ್ರತಿಪಕ್ಷಗಳಿಗೆ ಹತಾಶೆ, ಕುಮಾರ 'ದುರ್ಯೋಧನ': ಸಿಎಂ!
ಕುತಂತ್ರ ರಾಜಕಾರಣ; ಕುಮಾರಸ್ವಾಮಿಗೆ ಮೊದಲ ಸೋಲು!
ಸ್ಪೀಕರ್ ಕ್ರಮ ತಪ್ಪು; ಅಯ್ಯೋ ದೇವ್ರೇ ಎಂದ ಗೌಡ್ರು!
ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್!
ವಿಧಾನಸೌಧದಲ್ಲಿ ಏನೆಲ್ಲಾ ಆಯಿತು ಗೊತ್ತೇ... ಇಲ್ಲಿ ಕ್ಲಿಕ್ ಮಾಡಿ
ಗಲಾಟೆ, ಗದ್ದಲ, ಮಾರ್ಷಲ್‌ಗೇ ಏಟು ಕೊಟ್ಟ ಶಾಸಕರು!
ಗೂಳಿಹಟ್ಟಿಯಿಂದ ಅಂಗಿಹರಿದುಕೊಂಡು ಪ್ರತಿಭಟನೆ!
ಸಂಬಂಧಿತ ಮಾಹಿತಿ ಹುಡುಕಿ