ರಾಶಿಗನುಗುಣವಾಗಿ ವಾಹನಗಳ ಬಣ್ಣವನ್ನು ಆಯ್ಕೆ ಮಾಡಿ

ಬೆಂಗಳೂರು, ಬುಧವಾರ, 28 ನವೆಂಬರ್ 2018 (14:03 IST)

ಬೆಂಗಳೂರು : ವಾಹನಗಳನ್ನು ಖರೀದಿಸುವಾಗ ರಾಶಿಗಳಿಗನುಗುಣವಾಗಿ ಕಾರನ್ನು ಖರೀದಿಸಿದರೆ ಒಳ್ಳೆಯದು. ಇಲ್ಲವಾದರೆ ಕೆಲವೊಮ್ಮೆ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ರಾಶಿಗನುಗುಣವಾಗಿ ವಾಹನನ್ನು ಖರೀದಿಸಿ.


ಮೇಷ : ಕಿತ್ತಳೆ ಮಿಶ್ರಿತ ಕೆಂಪು, ತಿಳಿಗೆಂಪು ಮತ್ತು ಕಡುಗೆಂಪು ವರ್ಣದ ವಾಹನಗಳನ್ನು ಖರೀದಿಸಿದರೆ ಒಳ್ಳೆಯದು. ಇವರ ಅಧಿಪತಿ ಕುಜ. ಕುಜನ ಬಣ್ಣ ಕೆಂಪು. ಮಂಗಳವಾರದಂದು ಖರೀದಿ ಶುಭ.


ವೃಷಭ : ಬಿಳಿ ಅಥವಾ ಹಸಿರು ವರ್ಣದ ವಾಹನ ಉತ್ತಮ. ರಾಶಿಯ ಅಧಿಪತಿ ಚಂದ್ರ. ಚಂದ್ರನಿಗೆ ಬಿಳಿ ಬಣ್ಣ ಇಷ್ಟ. ಸೋಮವಾರ ವಾಹನ ಖರೀದಿಗೆ ಪ್ರಾಶಸ್ತ್ಯ.


ಮಿಥುನ : ಹಸಿರು ವರ್ಣ ಒಳ್ಳೆಯದು. ಹಳದಿ ವರ್ಣದ ವಾಹನ ಇವರಿಗೆ ಅಷ್ಟೇನು ಒಳಿತನ್ನು ಮಾಡುವುದಿಲ್ಲ. ವಾಹನ ಖರೀದಿಗೆ ಬುಧವಾರ ಉತ್ತಮ.


ಕಟಕ : ಬಿಳಿ, ಬೂದು, ನೇರಳೆ, ಕಪ್ಪು ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಚಂದ್ರ. ಸೋಮವಾರ ಖರೀದಿಗೆ ಉತ್ತಮ.


ಸಿಂಹ : ಬಂಗಾರದ ಕೆಂಪು ಬಣ್ಣ, ಕಿತ್ತಳೆ ಬಣ್ಣ ಹಾಗೂ ನೇರಳೆ ಬಣ್ಣದ ವಾಹನವನ್ನು ಖರೀದಿಸಬಹುದು. ರಾಶಿಯ ಅಧಿಪತಿ ರವಿ. ಕೆಂಪು ಬಣ್ಣದ ಪ್ರಿಯ. ಭಾನುವಾರ ವಾಹನ ಖರೀದಿಸುವುದು ಒಳ್ಳೆಯದು.


ಕನ್ಯಾ : ನೀಲಿ ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಬುಧ. ಹಳದಿ ಬಣ್ಣದ ವಾಹನ ಖರೀದಿ ಒಳ್ಳೆಯದು.

ತುಲಾ : ತಿಳಿಗೆಂಪು ಕಿತ್ತಳೆ ವರ್ಣ ಪ್ರಿಯರು. ಕೆಂಪು ಬಣ್ಣವು ಇವರಿಗೆ ಫೇವರಿಟ್‌. ಖರೀದಿಗೆ ಶುಕ್ರವಾರ ಶುಭವಾರ.


ವೃಶ್ಚಿಕ : ಗಾಢ ಕೆಂಪು ಬಣ್ಣ, ಕಂದು ಮಿಶ್ರಿತ ಬಣ್ಣದ ವಾಹನವನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಶಿಯ ಅಧಿಪತಿ ಕುಜ.


ಧನಸ್ಸು : ಹಳದಿ, ಕೆಂಪು ಮಿಶ್ರಿತ ಹಳದಿ ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಗುರು. ವಾಹನ ಖರೀದಿ ಶುಭ.


ಮಕರ: ನೀಲಿ, ಕೃಷ್ಣ ನೀಲಿ, ಹಳದಿ ಮಿಶ್ರಿತ ನೀಲ ವರ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಶನಿ. ಶನಿವಾರ ವಾಹನ ಖರೀದಿ ಉತ್ತಮ.


ಕುಂಭ : ಚಿನ್ನದ ಬಣ್ಣ, ಹಳದಿ ಮಿಶ್ರಿತ ಕೆಂಪು, ನೀಲಿ ಅಥವಾ ಕಪ್ಪು ಬಣ್ಣದ ವಾಹನ ಖರೀದಿಸಬಹುದು. ರಾಶಿಯ ಅಧಿಪತಿ ಶನಿ. ಶನಿವಾರ ಖರೀದಿಸಿದರೆ ಉತ್ತಮ.


ಮೀನ : ಹಳದಿ, ಹಳದಿ ಮಿಶ್ರಿತ ಕಿತ್ತಳೆ ಬಣ್ಣದ ವಾಹನ ಖರೀದಿಸಿದರೆ ಒಳ್ಳೆಯದು. ರಾಶಿಯ ಅಧಿಪತಿ ಗುರು. ಗುರುವಾರ ವಾಹನ ಖರೀದಿಸಿದರೆ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಶ್ರಾವಣ ಮಾಸದಲ್ಲಿ ಮಹಿಳೆಯರು ಈ ಬಣ್ಣದ ಬಟ್ಟೆ ಧರಿಸಿದರೆ ಸುಮಂಗಲಿಯಾಗಿರ್ತಾರಂತೆ

ಬೆಂಗಳೂರು : ಶ್ರಾವಣ ಮಾಸದಲ್ಲಿ ಎಲ್ಲಾ ಕಡೆ ಪ್ರಕೃತಿ ಹಚ್ಚ ಹಸಿರಾಗಿ ಕಂಗೊಳಿಸುತ್ತಿರುತ್ತದೆ. ಶ್ರಾವಣ ...

news

ಲಕ್ಷ್ಮೀ ಪೂಜೆಯ ನಂತರ ಹೀಗೆ ಮಾಡಿದರೆ ಧನಾಭಿವೃದ್ಧಿಯಾಗುವುದು ಖಂಡಿತ

ಬೆಂಗಳೂರು : ಧನಾಭಿವೃದ್ಧಿಗಾಗಿ ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಆದರೆ ಜ್ಯೋತಿಷ್ಯದಲ್ಲಿ ಪೂಜೆಯ ನಂತರ ಈ ...

news

ಈ ವಸ್ತುಗಳನ್ನು ದಾನ ಮಾಡಿದರೆ ದಾರಿದ್ರ್ಯ ಗ್ಯಾರಂಟಿ

ಬೆಂಗಳೂರು : ದಾನ ಮಾಡಿದರೆ ಪುಣ್ಯ ಲಭಿಸುತ್ತದೆ. ಆದರೆ ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ಪಾಪ ...

news

ನೀವು ಮಾಡುವ ಈ ಕೆಲಸ ಆತ್ಮಗಳನ್ನು ಆಕರ್ಷಿಸುತ್ತದೆಯಂತೆ

ಬೆಂಗಳೂರು : ಸಾಮಾನ್ಯವಾಗಿ ಆತ್ಮಗಳು ಮನುಷ್ಯರಿಂದ ದೂರ ಇರುತ್ತವೆ. ಆದರೆ ನಾವು ಮಾಡುವ ಕೆಲವೊಂದು ಕೆಲಸಗಳು ...

Widgets Magazine
Widgets Magazine