ಸೂರ್ಯ ಮುಳುಗಿದ ಮೇಲೆ ಮನೆಯಿಂದ ಹೊರಗೆ ನೀಡಲೇಬಾರದಂತ 5 ವಸ್ತುಗಳು ಯಾವುವು ಗೊತ್ತಾ…?

ಬೆಂಗಳೂರು, ಶನಿವಾರ, 13 ಜನವರಿ 2018 (07:31 IST)

ಬೆಂಗಳೂರು : ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನೇಕ ಆಚಾರ, ವಿಚಾರ, ಪದ್ಧತಿಗಳು ರೂಢಿಯಲ್ಲಿವೆ. ಆದರೆ ನಾವು ಅದನ್ನು ಒಂದು ಮೂಢನಂಬಿಕೆ ಎಂದು ಪಾಲಿಸುತ್ತಾ ಇಲ್ಲ. ಆದರೆ ಯಾವುದೇ ಪದ್ಧತಿಯನ್ನು ನಮ್ಮ ಹಿರಿಯರು ಕಾರಣವಿಲ್ಲದೆ ಮಾಡಿಲ್ಲ. ಎಲ್ಲವೂ  ಅವರ  ಅನುಭವದಿಂದಲ್ಲೇ  ಮಾಡಿರುವುದು. 

 
ಮುಳುಗಿದ ಮೇಲೆ ಮನೆಯಿಂದ ಹೊರಗೆ 5 ವಸ್ತುಗಳು ಕೊಡಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅವು ಯಾವುವು, ಒಂದು ವೇಳೆ ಕೊಟ್ಟರೆ ಏನಾಗುತ್ತದೆ ಎಂದು ತಿಳಿಯೋಣ. ಅಮಾವಾಸ್ಯೆ ಹಾಗು ಹುಣ್ಣಿಮೆ, ಮಂಗಳವಾರ ಹಾಗು ಶುಕ್ರವಾರ ಮನೆಯಿಂದ ಹಣವನ್ನು ಹೊರಗಿನವರಿಗೆ ಕೊಡಬಾರದು. ಒಂದುವೇಳೆ ಕೊಟ್ಟರೆ ಲಕ್ಷ್ಮೀ ಮನೆಯಿಂದ ಹೊರಟುಹೋಗುತ್ತಾಳೆ ಎನ್ನುತ್ತಾರೆ. ಆದರೆ ಕೆಲವು ಅನಿವಾರ್ಯದ ಸಂದರ್ಭದಲ್ಲಿ ಯಾರಿಗೆ ಹಣ ಕೊಡುತ್ತಿರೊ ಅವರ ಬಳಿ ಒಂದು ಅಥವಾ ಎರಡು ರೂಪಾಯಿ ತೆಗೆದುಕೊಂಡು ನಿಮ್ಮ ಮನೆಯಲ್ಲಿ ಹಣವಿಡುವ ಸ್ಥಳದಲ್ಲಿಟ್ಟು ನಂತರ ಅವರಿಗೆ ಹಣ ಕೊಡಿ.

 
ಸೂರ್ಯ ಮುಳುಗಿದ ಮೇಲೆ ತುಳಸಿ ಗಿಡವನ್ನು ಮುಟ್ಟಬಾರದು. ಏಕೆಂದರೆ  ಆ ಸಮಯದಲ್ಲಿ ತುಳಸಿದೇವಿ ನಿದ್ರಿಸುತ್ತಿರುತ್ತಾಳೆ. ಹಾಗೆ ತುಳಸಿ ಗಿಡವನ್ನು ಎಡಗೈಯಿಂದ ಮುಟ್ಟಬಾರದು. ಹಾಗೆ ಸೂರ್ಯ ಮುಳುಗಿದ ಮೇಲೆ ಶಂಖವನ್ನು ಊದಬಾರದು. ಏಕೆಂದರೆ ಇದು ಹರಿಹರರಿಬ್ಬರಿಗೂ ಸೇರಿದ್ದು, ಅವರು ಆ ಸಮಯದಲ್ಲಿ ವಿಶ್ರಾಂತಿಯಲ್ಲಿರುವ ಕಾರಣ ಆವಾಗ ಶಂಖ ಊದಿದರೆ ಮುಕ್ಕೋಟಿ ದೇವತೆಗಳು ಕೂಡ ಕೋಪಗೊಳ್ಳುವರು ಎಂದು ಹೇಳುತ್ತಾರೆ. ಹಾಗೆ ಮಜ್ಜಿಗೆ, ಉಪ್ಪು, ಸೂಜಿ, ಅರಶಿನ, ಸೀಗೆಕಾಯಿ ಇವುಗಳನ್ನು ಕೂಡ ಯಾವುದೇ ಕಾರಣಕ್ಕೂ ಸಂಜೆಯ ವೇಳೆ ಕೊಡಬಾರದು, ಕೊಟ್ಟರೆ ದಾರಿದ್ರ್ಯ ಕಾಡುವುದು ಎಂದು ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಜೀವನದಲ್ಲಿ ಊಹಿಸದ ಕಷ್ಟಗಳು ಬಂದಿವೆಯಾ..? ಇಲ್ಲಿದೆ ನೋಡಿ ಸುಲಭ ಪರಿಹಾರ

ಬೆಂಗಳೂರು : ಜೀವನವು ಸುಖಮಯವಾಗಿ ಸಾಗುತ್ತಿರುವಾಗ ಊಹಿಸದ ಕಷ್ಟಗಳು ಬಂದರೆ ಅವರಿಗೆ ಅದನ್ನು ...

news

ವಿನಾಯಕನ ಸೊಂಡಿಲು ಯಾವ ದಿಕ್ಕಿಗಿದ್ದರೆ ಏನು ಫಲ ಎಂದು ತಿಳಿಯಬೇಕಾ...?

ಬೆಂಗಳೂರು : ಸಾಮಾನ್ಯವಾಗಿ ವಿನಾಯಕನ ಪ್ರತಿಮೆಯನ್ನು ಇಡುವುದು, ಪೂಜೆಮಾಡುವುದು, ವಿಸರ್ಜಿಸುವುದು ಎಲ್ಲಾ ...

news

ಉಗುರು ಮತ್ತು ಕೂದಲು ಕಟ್ ಮಾಡಲು ಯಾವ ದಿನ ಪ್ರಶಸ್ತವಾದದ್ದು ಗೊತ್ತಾ…?

ಬೆಂಗಳೂರು : ಉಗುರು ಮತ್ತು ಕೂದಲು ಎಷ್ಟೇ ಕತ್ತರಿಸಿದರೂ ಮತ್ತೆ ಮತ್ತೆ ಹುಟ್ಟಿಬರುತ್ತವೆ. ಆರೋಗ್ಯದ ...

news

ನವಗ್ರಹಕ್ಕೆ ಈ ರೀತಿಯಲ್ಲಿ ಪ್ರದಕ್ಷಿಣೆ ಹಾಕಿದರೆ ಗ್ರಹದೋಷ ನಿವಾರಣೆಯಾಗುವುದಂತೆ!

ಬೆಂಗಳೂರು : ಗ್ರಹಗತಿಗಳಿಂದ ಎದುರಾಗುವ ತೊಂದರೆಗಳನ್ನು ಪರಿಹರಿಸಲು ಸುಲಭವಾದ ವಿಧಾನ ನವಗ್ರಹ ಪ್ರದಕ್ಷಿಣೆ ...

Widgets Magazine