ಶ್ರಾವಣ ಮಾಸದಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಶುಭ ಫಲ ದೊರಕುತ್ತದೆಯಂತೆ

ಬೆಂಗಳೂರು, ಬುಧವಾರ, 22 ಆಗಸ್ಟ್ 2018 (07:15 IST)

ಬೆಂಗಳೂರು : ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ ವಿಶೇಷ ಫಲ ದೊರೆಯುತ್ತದೆ. ಆದ್ದರಿಂದ ದೇವಾಲಯಗಳಲ್ಲಿ ಭಕ್ತರ ದಂಡೇ ನೆರೆದಿರುತ್ತದೆ. ಅದರಲ್ಲೂ ವಿಶೇಷವಾಗಿ ಸೋಮವಾರದಂದು ದೇವಸ್ಥಾನದಲ್ಲಿ ಶಿವನ ಪೂಜೆ, ಅಭಿಷೇಕ ಜೋರಾಗಿರುತ್ತದೆ.


ಶ್ರಾವಣ ಮಾಸದಲ್ಲಿ ಶಿವ ಪೂಜೆಯ ಜೊತೆಗೆ ಶಿವನಿಗೆ ಸಂಬಂಧಪಟ್ಟ ಕೆಲವು ವಸ್ತುಗಳನ್ನು ಮನೆಯಲ್ಲಿ ತಂದಿಟ್ಟುಕೊಳ್ಳುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಶ್ರಾವಣ ಮಾಸದಲ್ಲಿ ಬೆಳ್ಳಿ ತ್ರಿಶೂಲವನ್ನು ತಂದಿಡುವುದರಿಂದ ಅವಮಾನದಿಂದ ಮುಕ್ತಿ ಸಿಗುತ್ತದೆ.


ಹಾವು ಶಿವನ ಆಭರಣ. ಆದ್ದರಿಂದ ಶ್ರಾವಣ ಮಾಸದ ಸೋಮವಾರದಂದು ಹಾವಿನ ಬೆಳ್ಳಿ ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಬಂದು ಪ್ರತಿದಿನ ಪೂಜೆ ಮಾಡಿ. ನಂತರ ಶ್ರಾವಣ ಮಾಸದ ಕೊನೆಯ ದಿನ ಅದನ್ನು ಪವಿತ್ರವಾದ ನದಿಯಲ್ಲಿ ತೊಳೆದು ದೇವಸ್ಥಾನಕ್ಕೆ ನೀಡಿ. ಹೀಗೆ ಮಾಡಿದ್ರೆ ಜಾತಕದಲ್ಲಿರುವ ಪಿತೃದೋಷ ಹಾಗೂ ಸರ್ಪದೋಷ ನಿವಾರಣೆಯಾಗುತ್ತದೆ.
ಶ್ರಾವಣ ಮಾಸದಲ್ಲಿ ಕೊರಳಿಗೆ ರುದ್ರಾಕ್ಷಿ ಮಾಲೆಯನ್ನು ಧರಿಸಿದರೆ ಸಮೃದ್ಧಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ. ಹಾಗೇ ಡಮರುಗ ಶಿವನ ಪವಿತ್ರ ವಾದ್ಯ. ಶ್ರಾವಣ ಮಾಸದಲ್ಲಿ ಡಮರುಗ ಮನೆಗೆ ತಂದು ಬಾರಿಸಿದರೆ ಮನೆಯಲ್ಲಿರುವ  ನಕರಾತ್ಮಕ ಶಕ್ತಿಗಳು ನಾಶವಾಗುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಶ್ರಾವಣ ಮಾಸದ ಮಂಗಳವಾರದಂದು ಈ ಚಿಕ್ಕ ಕೆಲಸ ಮಾಡಿದರೆ ನಿಮಗೆ ಹಣದ ಕೊರತೆ ಎಂದಿಗೂ ಕಾಡಲ್ಲ

ಬೆಂಗಳೂರು : ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಮಾಸದಲ್ಲಿ ...

news

ದಾರಿಯಲ್ಲಿ ಸಿಗುವ ಹಣವನ್ನು ಮನೆಗೆ ತಂದರೆ ಏನಾಗುತ್ತೆ ಗೊತ್ತೇ?

ಬೆಂಗಳೂರು : ಕೆಲವೊಮ್ಮೆ ರಸ್ತೆಬದಿಯಲ್ಲಿ ಹೋಗುವಾಗ ಹಣ ಬಿದ್ದಿರುವುದನ್ನು ನಾವು ಗಮನಿಸಿರುತ್ತೇವೆ. ಕೆಲವರು ...

news

ನೀವು ಕೆಲಸಮಾಡುವ ಸ್ಥಳದಲ್ಲಿ ನಿಮಗೆ ಗೌರವ ಮನ್ನಣೆ ಸಿಗಬೇಕಾದರೆ ನೀವು ಈ ರೀತಿಯಾಗಿ ಮಾಡಿ

ಬೆಂಗಳೂರು : ವ್ಯಾಪಾರ ಸ್ಥಳದಲ್ಲಿ ನಿಮ್ಮ ವ್ಯಾಪಾರ ಅಭಿವೃದ್ಧಿಯಾಗಬೇಕು. ಒಳ್ಳೆ ಧನ ಸಂಪಾಧನೆಯಾಗಬೇಕು, ...

news

ಈ ಐದು ಸಂದರ್ಭದಲ್ಲಿ ಹಿರಿಯರಿಗೆ ನಮಸ್ಕಾರ ಮಾಡಬಾರದಂತೆ

ಬೆಂಗಳೂರು : ಹಿರಿಯರಿಗೆ ನಮಸ್ಕಾರ ಮಾಡುವುದು ನಮ್ಮ ಭಾರತೀಯ ಹಿಂದೂ ಸಂಸ್ಕೃತಿ. ಅದನ್ನು ಈಗಿನವರು ಸಹ ...

Widgets Magazine