ಯಾವ ನಕ್ಷತ್ರದವರು ಯಾವ ಗಿಡ ಬೆಳೆಸಿದರೆ ದೋಷ ನಿವಾರಣೆಯಾಗುತ್ತದೆಂಬುದು ತಿಳಿಬೇಕಾ?

ಬೆಂಗಳೂರು, ಮಂಗಳವಾರ, 12 ಜೂನ್ 2018 (11:59 IST)

ಬೆಂಗಳೂರು : ಗಿಡ, ಮರಗಳ  ರಕ್ಷಣೆಯಿಂದ ಗ್ರಹದೋಷ ನಿವಾರಣೆಯಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ..ಇದಕ್ಕೆ ಸಾಕ್ಷಿ ಇತ್ತೀಚೆಗೆ  ಗಿಡಮೂಲಿಕಾ ವನ, ನವಗ್ರಹ ವನ, ದೇವ ವನಗಳ  ಸಂಖ್ಯೆ ಹೆಚ್ಚುತ್ತಿರುವುದು. ಆದಕಾರಣ ಜನರು ತಮ್ಮ ನಕ್ಷತ್ರಗಳಿಗನುಗುಣವಾಗಿ ಗಿಡಗಳನ್ನು ನೆಟ್ಟರೆ ಸಂರಕ್ಷಣೆಯ ಜೊತೆಗೆ  ಅವರ ದೋಷಗಳು ಕೂಡ ನಿವಾರಣೆಯಾಗುತ್ತದೆ. ಯಾವ ನಕ್ಷತ್ರದವರು ಯಾವ ಗಿಡವನ್ನು ಬೆಳೆಸಬೇಕು ಎಂಬುದು ಇಲ್ಲಿದೆ ನೋಡಿ .


ಅಶ್ವಿನಿ, ಮಖ, ಮೂಲಾ : ಅಧಿಪತಿ ಕೇತು. ಕೇತು ದೋಷ ಪರಿಹಾರಕ್ಕೆ ಅರಳಿ ಹಾಗೂ ಜಾಜಿ ಹೂವಿನ ಗಿಡವನ್ನು ಬೆಳೆಸಬೇಕು.

ಭರಣಿ, ಪುಬ್ಬ , ಪೂರ್ವಾಷಾಢ: ಅಧಿಪತಿ ಶುಕ್ರ. ಶುಕ್ರ ದೋಷ ನಿವಾರಣೆಗೆ ಅತ್ತಿ (ಔದುಂಬರ) ಹಾಗೂ ಕಮಲದ ಹೂವಿನ ಗಿಡವನ್ನು ಬೆಳೆಸುವುದು ಒಳ್ಳೆಯದು.

ಕೃತ್ತಿಕಾ, ಉತ್ತರೆ, ಉತ್ತರಾಷಾಢ : ಅಧಿಪತಿ ರವಿ. ರವಿ ದೋಷ ನಿವಾರಣೆಗೆ ಹೊಂಗೆ ಹಾಗೂ ಕನಕಾಂಬರ ಹೂವಿನ ಗಿಡವನ್ನು ಬೆಳೆಸುವುದು.

ರೋಹಿಣಿ, ಹಸ್ತ, ಶ್ರವಣ : ಅಧಿಪತಿ ಚಂದ್ರ. ಚಂದ್ರ ದೋಷ ಪರಿಹಾರಕ್ಕೆ ಮುತ್ತುಗದ ಹಾಗೂ ಬಿಳಿ ತಾವರೆಯನ್ನು ಬೆಳೆಸಿ ಪೋಷಿಸುವುದು.

ಮೃಗಶಿರಾ, ಚಿತ್ತ, ಧನಿಷ್ಠ : ಅಧಿಪತಿ ಕುಜ. ಕುಜ ದೋಷ ನಿವಾರಣೆಗೆ ಕಗ್ಗಲಿ ಹಾಗೂ ದತ್ತೂರಿ ಹೂವಿನ ಗಿಡವನ್ನು ಬೆಳೆಸಬೇಕು.

ಆರಿದ್ರ, ಸ್ವಾತಿ, ಶತಭಿಷ : ಅಧಿಪತಿ ರಾಹು. ರಾಹು ದೋಷ ನಿವಾರಣೆಗೆ ಮಾವು ಹಾಗೂ ಬೆಟ್ಟದ ತಾವರೆ ಹೂವಿನ ಗಿಡವನ್ನು ಬೆಳೆಸುವುದು.

ಪುನರ್ವಸು, ವಿಶಾಖ, ಪೂರ್ವಾಭಾದ್ರ : ಅಧಿಪತಿ ಗುರು. ಗುರು ದೋಷ ನಿವಾರಣೆಗೆ ಗಂಧದ ಮರ ಹಾಗೂ ಪಾರಿಜಾತ ಹೂವಿನ ಮರವನ್ನು ಬೆಳೆಸಬೇಕು.

ಪುಷ್ಯ, ಅನುರಾಧ, ಉತ್ತರಾಭಾದ್ರ : ಅಧಿಪತಿ ಶನಿ. ಶನಿ ದೋಷ ನಿವಾರಣೆಗೆ ಶಮೀ ವೃಕ್ಷ ಹಾಗೂ ತುಳಸಿ ಸಸಿಯನ್ನು ನೆಡಬೇಕು.

ಆಶ್ಲೇಷ, ಜ್ಯೇಷ್ಠ , ರೇವತಿ : ಅಧಿಪತಿ ಬುಧ. ಬುಧ ದೋಷ ನಿವಾರಣೆಗೆ ಸಂಪಿಗೆ ಮತ್ತು ಮಲ್ಲಿಗೆ ಹೂವಿನ ಗಿಡವನ್ನು ಬೆಳೆಸುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಭಸ್ಮವನ್ನು ಯಾಕೆ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು? ಎಂಬುದು ತಿಳಿಬೇಕಾ...

ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಕೆಲವರು ಭಸ್ಮವನ್ನು ದೇವರ ಪ್ರಸಾದವೆಂದು ಹಣೆಗೆ ...

news

ಜಾತಕದಲ್ಲಿರುವ ನವಗ್ರಹ ದೋಷಕ್ಕೆ ಈ ನವಧಾನ್ಯಗಳ ದಾನವೇ ಪರಿಹಾರ

ಬೆಂಗಳೂರು : ಹೆಚ್ಚಿನವರ ಜಾತಕದಲ್ಲಿ ಗ್ರಹದೋಷಗಳು ಕಂಡುಬರುತ್ತದೆ. ಇದರಿಂದ ಅವರು ಅನೇಕ ಸಮಸ್ಯೆಗಳನ್ನು ...

news

ಯಾವ ಹೂವಿನಿಂದ ದೇವರನ್ನ ಪೂಜಿಸಿದರೆ ಏನು ಫಲ ಎಂಬುದು ತಿಳಿಬೇಕಾ?

ಬೆಂಗಳೂರು : ದೇವರಿಗೆ ಭಕ್ತಿಯಿಂದ ಒಂದು ಪುಷ್ಪವನ್ನು ಅರ್ಪಿಸಿದರೆ ಸಾಕು ಭಕ್ತರು ಬೇಡದಿದ್ದರೂ ವರ ...

news

ಗುಡುಗು ಸಿಡಿಲಿನ ಶಬ್ದ ಕೇಳಿ ನಮ್ಮ ಹಿರಿಯರು , ಫಲ್ಗುಣಾ ಎಂದು ಜಪಿಸುವುದ್ಯಾಕೆ ಗೊತ್ತಾ?

ಬೆಂಗಳೂರು : ಮಳೆಗಾಲದಲ್ಲಿ ಗುಡುಗು ಸಿಡಿಲು ಸಾಮಾನ್ಯ. ಸಿಡಿಲು ಹೆಚ್ಚಾಗಿ ಮರ ಗಿಡಗಳಿಗೆ ಬಡಿಯುವುದನ್ನು ...

Widgets Magazine