Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 25 ಮಾರ್ಚ್ 2019 (08:37 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 
ಮೇಷ: ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಶೀತ ಸಂಬಂಧೀ ರೋಗ ಬಾಧೆಗಳು ಕಂಡುಬರವುದು. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡವಿರುವುದು. ಆದರೆ ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು.
 
ವೃಷಭ: ಬಾಕಿ ಹಣ ಸಂದಾಯವಾಗದೇ ಹಣಕಾಸಿಗೆ ಪರದಾಡುವಿರಿ. ಹೊಸ ಕೆಲಸಗಳಿಗೆ ಕೈ ಹಾಕಲು ಹೊರಟರೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಕೇಳಿಬಂದೀತು. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.
 
ಮಿಥುನ: ಅತಿಯಾದ ಆತ್ಮವಿಶ್ವಾಸದಿಂದ ವಂಚನೆಗೊಳಗಾಗುವಿರಿ. ಆದರೆ ನಿಮ್ಮ ಒಳ್ಳೆಯ ಗುಣನಡತೆಯಿಂದಲೇ ವಿರೋಧಿಗಳನ್ನೂ ಗೆಲ್ಲುವಿರಿ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಆರೋಗ್ಯದ ಬಗ್ಗೆ ಕೊಂಚ ಕಾಳಜಿ ವಹಿಸುವುದು ಸೂಕ್ತ.
 
ಕರ್ಕಟಕ: ಪತ್ನಿಯ ಮನದಿಚ್ಛೆ ಪೂರೈಸಲು ಕೆಲವು ಖರ್ಚು ವೆಚ್ಚಗಳನ್ನು ಮಾಡಬೇಕಾಗುತ್ತದೆ. ಆದಾಯ ಸಾಕಷ್ಟು ಇರುವುದರಿಂದ ಆಸ್ತಿ ಖರೀದಿಗೂ ಚಿಂತನೆ ಮಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಯೋಗವಿದೆ.
 
ಸಿಂಹ: ಅಂದುಕೊಂಡ ಕಾರ್ಯಗಳನ್ನು ನೆರವೇರಿಸಲು ಕೆಲವು ಕಷ್ಟ ನಷ್ಟ ಎದುರಿಸಬೇಕಾದೀತು. ಆದರೆ ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸವೇ ನಿಮ್ಮ ದಾರಿ ದೀಪವಾಗಲಿದೆ. ಅಪರಿಚಿತರನ್ನು ನಂಬಿ ವ್ಯವಹಾರಕ್ಕೆ ಕೈ ಹಾಕಬೇಡಿ. ಎಚ್ಚರಿಕೆಯಿಂದ ಹೆಜ್ಜೆಯಿಡಿ.
 
ಕನ್ಯಾ: ಕುಟುಂಬದಲ್ಲಿ ಹೆಚ್ಚಿನ ಹೊಣೆಗಾರಿಕೆ ಹೆಗಲಿಗೇರಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರುವುದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮುನ್ನಡೆಗೆ ಸಹೋದ್ಯೋಗಿಗಳು ಅಸೂಯೆಪಡುವರು. ದೇವರ ಪ್ರಾರ್ಥನೆ ಮರೆಯಬೇಡಿ.
 
ತುಲಾ: ಎಷ್ಟೋ ದಿನಗಳಿಂದ ಬಾಕಿಯಿದ್ದ ಹರಕೆ ತೀರಿಸಲು ಮುಂದಾಗುವಿರಿ. ಹೊಸ ಕೆಲಸಗಳಿಗೆ ಕೈ ಹಾಕುವ ಮೊದಲು ಹಿರಿಯರ ಆಶೀರ್ವಾದ ಪಡೆಯುವುದು ಮರೆಯಬೇಡಿ. ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ.
 
ವೃಶ್ಚಿಕ: ಕಾರ್ಯದೊತ್ತಡದಿಂದ ಹೈರಾಣಾಗುವಿರಿ. ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಸಂತಾನಕ್ಕಾಗಿ ಪರಿತಪಿಸುತ್ತಿರುವ ದಂಪತಿಗಳು ದೇವರ ಮೊರೆ ಹೋದರೆ ಶುಭ ಫಲವಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ಮಾಡಲು ಚಿಂತನೆ ಮಾಡುವಿರಿ.
 
ಧನು: ದುಡುಕು ವರ್ತನೆಯಿಂದ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ ಮಾಡಬೇಕಾಗುತ್ತದೆ. ಸಹೋದರರೊಂದಿಗೆ ಆಸ್ತಿ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಬೇಕಾಗುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
 
ಮಕರ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗಾರ್ಥ ದೂರ ಸಂಚಾರ ಮಾಡಿದರೆ ಶುಭ ಫಲವಿದೆ. ಬೇಡದ ಚಿಂತೆಗಳನ್ನು ಮನಸ್ಸಿನಿಂದ ಕಿತ್ತು ಹಾಕಿ ಹೊಸ ಕೆಲಸಕ್ಕೆ ಕೈ ಹಾಕಿ.
 
ಕುಂಭ: ಕೆಲವು ಋಣಾತ್ಮಕ ಚಿಂತನೆಗಳು ಮನಸ್ಸಿಗೆ ಆವರಿಸಿ ಅಂದುಕೊಂಡ ಕಾರ್ಯ ನೆರವೇರಿಸಲು ಉದಾಸೀನ ಪ್ರವೃತ್ತಿ ಕಂಡುಬರುವುದು. ಆರ್ಥಿಕವಾಗಿ ಹಣದ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಹಿರಿಯರ ಸಲಹೆಗಳಿಗೆ ಕಿವಿಗೊಡಿ.
 
ಮೀನ: ಇಷ್ಟಮಿತ್ರರೊಂದಿಗೆ ಭೋಜನ ಮಾಡುವಿರಿ. ಇಂದು ದೈವಾನುಕೂಲ ನಿಮ್ಮ ಮೇಲಿದ್ದು, ಅಂದುಕೊಂಡ ಕಾರ್ಯಗಳು ಸುಮಗವಾಗಿ ನೆರವೇರುವುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ


ಇದರಲ್ಲಿ ಇನ್ನಷ್ಟು ಓದಿ :