ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಭಾನುವಾರ, 5 ಮೇ 2019 (06:53 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ರಾಜಕೀಯ ರಂಗದಲ್ಲಿರುವವರಿಗೆ ಎಚ್ಚರಿಕೆಯಿಂದಿದ್ದರೆ ಉತ್ತಮ ಫಲ. ಮನೆಗೆ ಹೊಸ ಅತಿಥಿಗಳ ಆಗಮನವಾಗಲಿದ್ದು, ಕೆಲಸದೊತ್ತಡ ಹೆಚ್ಚುವುದು. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಆರೋಗ್ಯ ಸುಧಾರಿಸುವುದು.
 
ವೃಷಭ: ಸಾಂಸಾರಿಕವಾಗಿವ ಅಭಿವೃದ್ಧ ಗೋಚರಕ್ಕೆ ಬರುವುದು. ಮಕ್ಕಳಿಂದ ಸಂತಸ ಸಿಗುವುದು. ಗೃಹ ಸಂಬಂಧೀ ವಸ್ತುಗಳ ಖರೀದಿ ಮಾಡುವಿರಿ. ಮನೆ ರಿಪೇರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ವ್ಯಾಪಾರ ವ್ಯವಹಾರದಲ್ಲಿ ಲಾಭ.
 
ಮಿಥುನ: ವ್ಯಾಪಾರಿ ವರ್ಗದವರಿಗೆ ಲಾಭ ಸಿಗಲಿದೆ. ಆದರೆ ಹಿತವಂಚಕರ ಬಗ್ಗೆ ಎಚ್ಚರಿಕೆ ಅಗತ್ಯ. ಕಾಗದ ಪತ್ರಗಳ ಸರಿಯಾದ ವಿಲೇವಾರಿ ನಡೆಸಿದರೆ ಕ್ಷೇಮ. ಕೌಟುಂಬಿಕವಾಗಿ ಹಿರಿಯರ ಆರೋಗ್ಯ ಹದಗೆಡುವುದು. ಕಾಳಜಿ ವಹಿಸಿ.
 
ಕರ್ಕಟಕ: ಅವಿವಾಹಿತರಿಗೆ ವಿವಾಹ ಭಾಗ್ಯ ಸದ್ಯದಲ್ಲೇ ಕೂಡಿಬರಲಿದೆ. ಆರ್ಥಿಕವಾಗಿ ಅಡಚಣೆಗಳಿದ್ದರೂ ಕೈಗೊಂಡ ಕೆಲಸಗಳು ನೆರವೇರುವುದು. ಸಾಂಸಾರಿಕವಾಗಿ ಮನದೆನ್ನೆಯ ಮಾತಿಗೆ ಬೆಲೆಕೊಡಿ.
 
ಸಿಂಹ: ಹಳೇ ವೈಷಮ್ಯಗಳಿಗೆ ಮತ್ತೆ ಜೀವ ಬರಲಿದೆ. ಇದರಿಂದ ವಿನಾಕಾರಣ ವಾದ-ವಿವಾದಗಳಲ್ಲಿ ಸಿಲುಕಬೇಕಾದೀತು. ಮಹಿಳೆಯರಿಂದ ಅವಮಾನ ಎದುರಿಸುವ ಸಂಭವವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ.
 
 
ಕನ್ಯಾ: ಅಧ್ಯಾಪನಾ ವೃತ್ತಿಯಲ್ಲಿರುವವರಿಗೆ ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ ಸಿಗುವ ಸಾಧ್ಯತೆ.  ಉದ್ಯೋಗಿಗಳು ಸಿಕ್ಕ ಅವಕಾಶದಲ್ಲಿ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ಹೊಂದಾಣಿಕೆಯ ಜೀವನ ನಡೆಸಬೇಕು.
 
ತುಲಾ: ಉದ್ದೇಶಿತ ಕೆಲಸಗಳು ಸಫಲವಾಗಲಿದೆ. ಕೆಲವೊಂದು ಶುಭ ಫಲಗಳು ಸಂತಸಕ್ಕೆ ಕಾರಣವಾಗಲಿದೆ. ದೂರ ಸಂಚಾರದಿಂದ ಕಾರ್ಯ ಪ್ರಾಪ್ತಿಯಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ.
 
ವೃಶ್ಚಿಕ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸುವಿರಿ. ಕಳೆದುಹೋಗಿದ್ದ ಅಮೂಲ್ಯ ವಸ್ತು ಮರಳಿ ಬರುವುದು. ಕೋರ್ಟು ಕಚೇರಿ ವ್ಯವಹಾರದಲ್ಲಿ ವಿಳಂಬವಾಗಲಿದೆ. ತಾಳ್ಮೆ, ಸಮಾಧಾನ ಅಗತ್ಯ.
 
ಧನು: ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ತೋರಿಬರುವುದು. ಉದ್ದೇಶಿತ ಕೆಲಸಗಳನ್ನು ಪೂರೈಸಲು ಕಠಿಣ ಪರಿಶ್ರಮ ಪಡಬೇಕಾದೀತು. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತವಾಗಿ ವರ್ಗಾವಣೆ ಅಥವಾ ಬಡ್ತಿ ಸಾಧ್ಯತೆ.
 
ಮಕರ: ಆರ್ಥಿಕವಾಗಿ ಅಡಚಣೆಗಳು ತೋರಿಬರಲಿವೆ. ಆರೋಗ್ಯ ಸಮಸ್ಯೆ ಕಂಡುಬಂದೀತು. ಹಿತ ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ಕುಂಭ: ಹಿರಿಯರಿಗೆ ತೀರ್ಥ ಯಾತ್ರೆಯ ಭಾಗ್ಯ. ದಾಯಾದಿಗಳೊಂದಿಗೆ ವಾದ ವಿವಾದ ನಡೆಸುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ. ಓಡಾಟದಿಂದ ದೇಹಾಯಾಸ. ವಿವಾಹಾಪೇಕ್ಷಿಗಳು ಸ್ವಲ್ಪ ದಿನ ಕಾಯುವುದು ಒಳ್ಳೆಯದು.
 
ಮೀನ: ಶೀತ, ಕಫ ಸಂಬಂಧಿತ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾದೀತು. ವೃತ್ತಿರಂಗದಲ್ಲಿ ನಿಮ್ಮ ಕೆಲಸಗಳಿಗೆ ತಕ್ಕ ಮನ್ನಣೆ, ಪ್ರಶಂಸೆ ಸಿಗಲಿದೆ. ಅಧಿಕಾರಿ ವರ್ಗದವರಿಗೆ ಬಡ್ತಿ ಯೋಗ. ದೇವತಾ ಪ್ರಾರ್ಥನೆ ಮಾಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ದೀಪದ ಬತ್ತಿಯಿಂದ ಧನು ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ...

news

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

ಲಕ್ಷ್ಮೀ ದೇವಿ ಯಾಕೆ ಸದಾ ಪತಿ ಶ್ರೀಮನ್ನಾರಾಯಣನ ಪಾದ ಒತ್ತುತ್ತಾಳೆ?

ಬೆಂಗಳೂರು: ಲಕ್ಷ್ಮೀ ದೇವಿ ಶ್ರೀಮನ್ನಾರಾಯಣನ ಪಾದವನ್ನು ಒತ್ತುವ ಹಲವು ಚಿತ್ರಗಳನ್ನು ನಾವು ನೋಡಿರುತ್ತೇವೆ. ...