Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 2 ಆಗಸ್ಟ್ 2019 (08:43 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಆರ್ಥಿಕವಾಗಿ ಬಾಕಿ ಹಣ ವಾಪಸಾತಿ ಚಿಂತೆಯಾಗುವುದು. ಹಲವಾರು ಅವಕಾಶಗಳು ಎದುರಾದರೂ ಆಲಸ್ಯತನದಿಂದಾಗಿ ನೆನೆಗುದಿಗೆ ಬೀಳಲಿದೆ. ಎಚ್ಚರಿಕೆ ಅಗತ್ಯ.
 
ವೃಷಭ: ಕೆಲಸ ಕಾರ್ಯಗಳಲ್ಲಿ ಹಾನಿಯಾಗುವ ಸಂಭವವಿದ್ದರೂ ಆರ್ಥಿಕವಾಗಿ ಧನಲಾಭಕ್ಕೆ ಕೊರತೆಯಾಗದು. ಪಾಲು ಬಂಡವಾಳ ಹೂಡಿಕೆಯಲ್ಲಿ ಎಚ್ಚರವಿರಲಿ. ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುವುದು.
 
ಮಿಥುನ: ಅಂದುಕೊಂಡ ಕೆಲಸ ಕಾರ್ಯ ಪೂರ್ತಿ ಮಾಡಲು ಹಲವು ಅಡ್ಡಿ ಆತಂಕಗಳು ಎದುರಾಗಲಿವೆ. ಸಾಂಸಾರಿಕವಾಗಿ ಹಲವು ಮನೋಕ್ಲೇಶಗಳು ಎದುರಾಗಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕರ್ಕಟಕ: ವೃತ್ತಿರಂಗದಲ್ಲಿ ಅಚ್ಚರಿಯ ವಾರ್ತೆ, ಬಡ್ತಿ ಯೋಗವಿದೆ. ಮನೆ ಖರೀದಿಗೆ ಚಿಂತನೆ ಮಾಡುವಿರಿ. ಆರ್ಥಿಕವಾಗಿ ಧಾರ್ಜನೆಗೆ ನಾನಾ ಮಾರ್ಗಗಳನ್ನು ಹುಡುಕುವಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.
 
ಸಿಂಹ: ಇತರರನ್ನು ಹೇಳುವ ಸಲಹೆಗಳನ್ನು ಶಾಂತವಾಗಿ ಆಲಿಸುವ ಸಹನೆ ಇರಲಿ. ದುಡುಕು ವರ್ತನೆಯಿಂದ ಕಾರ್ಯ ಹಾಳಾಗಬಹುದು. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ದಿನದಂತ್ಯಕ್ಕೆ ಶುಭ ಸುದ್ದಿ.
 
ಕನ್ಯಾ: ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಅಧಿಕಾರಿ ವರ್ಗದವರಿಗೆ ಅನುಕೂಲಕರ ವಾತಾವರಣವಿರಲಿದೆ. ಸಾಮಾಜಿಕವಾಗಿ ಸ್ಥಾನ ಮಾನ ಹೆಚ್ಚುವುದು. ದೇವತಾ ಪ್ರಾರ್ಥನೆ ಮಾಡಿ.
 
ತುಲಾ: ನಿಮ್ಮ ಮೃದು ವ್ಯಕ್ತಿತ್ವ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದು. ವಾಗ್ವಾದವಾಗುತ್ತಿದ್ದರೆ ಮೌನವಾಗಿರುವುದೇ ಲೇಸು. ಅಪರಿಚಿತರೊಡನೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿರಿ. ಖರ್ಚು ವೆಚ್ಚದ ಬಗ್ಗೆ ಮಿತಿಯಿರಲಿ.
 
ವೃಶ್ಚಿಕ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ತಾಳ್ಮೆಯಿಂದ ಕಾರ್ಯ ಸಾಧನೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ನಡೆಸಬೇಕು.
 
ಧನು: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ಸಿಗುವುದು. ಆದರೆ ಉದ್ಯೋಗದಲ್ಲಿ ಕಿರಿ ಕಿರಿಯಿಂದಾಗಿ ಮನಸ್ಸು ಬದಲಾವಣೆ ಬಯಸುವುದು. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ಮಕರ: ಆಸಕ್ತಿಯಿಂದ ಕೆಲಸ ಕಾರ್ಯ ಮಾಡಿದರೆ ತಕ್ಕ ಪ್ರತಿಫಲ ಸಿಗುವುದು. ನಿಮ್ಮ ಕೆಲಸಗಳಿಗೆ ಮೇಲಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರರಾಗುವಿರಿ. ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.
 
ಕುಂಭ: ಕಷ್ಟದ ಸಮಯದಲ್ಲಿ ಮಹಿಳೆಯರಿಂದ ನೆರವು ಸಿಗುವುದು. ಹೊಸ ವ್ಯವಹಾರದಲ್ಲಿ ಬಂಡವಾಳ ಹೂಡಿಕೆ ಮಾಡಲು ಇದು ಸಕಾಲ. ದೇಹಾರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ.
 
ಮೀನ: ವ್ಯಾಪಾರಿ ವರ್ಗದವರಿಗೆ ಉತ್ತಮ ಲಾಭ ಸಿಗಲಿದೆ. ಆರ್ಥಿಕವಾಗಿ ಸಾಕಷ್ಟು ಧನ ಲಾಭವಾಗಲಿದೆ. ಆದರೆ ಸಾಂಸಾರಿಕವಾಗಿ ಕೆಲವೊಂದು ಭಿನ್ನಾಭಿಪ್ರಾಯಗಳಿಂದ ಮನಸ್ಸಿಗೆ ಕಿರಿ ಕಿರಿಯಾಗುವುದು.
ಇದರಲ್ಲಿ ಇನ್ನಷ್ಟು ಓದಿ :