Widgets Magazine

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು| Krishnaveni K| Last Modified ಸೋಮವಾರ, 8 ಏಪ್ರಿಲ್ 2019 (08:30 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
 
ಮೇಷ: ಒಂದು ರೀತಿಯ ಅಭದ್ರತೆಯ ಭಾವ ಕಾಡಲಿದೆ. ಮಾನಸಿಕ ನೆಮ್ಮದಿಗಾಗಿ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡುವುದನ್ನು ಮರೆಯಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಸಾಧ್ಯತೆಯಿದೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ವೃಷಭ: ಹೆಚ್ಚಿನ ಸಮಯವನ್ನು ಪ್ರೀತಿ ಪಾತ್ರರಿಗಾಗಿ ಮೀಸಲಿಡಬೇಕಾಗುತ್ತದೆ. ಕುಟುಂಬದವರೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಾಗದು.
 
ಮಿಥುನ: ಇಂದು ದೈವಾನುಕೂಲ ನಿಮ್ಮ ಮೇಲಿದ್ದು, ಅಂದುಕೊಂಡ ಕಾರ್ಯಗಳನ್ನು ನೆರವೇರಿಸುವಿರಿ. ಆರ್ಥಿಕವಾಗಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗುವುದು. ಮನೆ, ಆಸ್ತಿ ಖರೀದಿಗೆ ಚಿಂತನೆ ಮಾಡುವಿರಿ.  ಕೌಟುಂಬಿಕವಾಗಿಯೂ ನೆಮ್ಮದಿಯ ದಿನ.
 
ಕರ್ಕಟಕ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಒಡಾಟ ನಡೆಸಬೇಕಾಗುತ್ತದೆ. ವ್ಯವಹಾರದಲ್ಲಿ ಕೊಂಚ ನಷ್ಟ ಅನುಭವಿಸಬೇಕಾದೀತು. ಆದರೆ ಸೂಕ್ತ ಸಮಯದಲ್ಲಿ ಸಂಗಾತಿಯಿಂದ ನೆರವು ಸಿಗಲಿದೆ.
 
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಏಳಿಗೆ ಕಂಡು ಸಹೋದ್ಯೋಗಿಗಳೇ ಅಸೂಯೆ ಪಡುವರು. ಸಾಮಾಜಿಕವಾಗಿ ನೀವು ಮಾಡುವ ಕೆಲಸಗಳಿಗೆ ಮನ್ನಣೆ ಸಿಕ್ಕಿ ಸ್ಥಾನ ಮಾನಗಳು ಉತ್ತಮವಾಗುವುದು. ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ.
 
ಕನ್ಯಾ: ಕಷ್ಟ ಎಂದು ಬಂದವರಿಗೆ ಸಾಲ ಕೊಡಲು ಹೋಗಿ ಸಂಕಷ್ಟಕ್ಕೆ ಈಡಾಗುವಿರಿ. ಎಚ್ಚರಿಕೆ ಅಗತ್ಯ. ಹಿತ ಶತ್ರುಗಳು ಬೆನ್ನ ಹಿಂದೇ ಇರುವರು. ಆದರೆ ಕೌಟುಂಬಿಕವಾಗಿ ನೆಮ್ಮದಿಯ ದಿನ. ಸಂಗಾತಿ, ಮಕ್ಕಳಿಂದ ಸಂತೋಷ ಅನುಭವಿಸುವಿರಿ.
 
ತುಲಾ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಮನೆಯಲ್ಲಿ ಸಂತಸದ ವಾತಾವರಣವಿರುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಪಾಲಿಗೆ ಬಂದಿದ್ದನ್ನು ಬಳಸಿಕೊಳ್ಳಿ.
 
ವೃಶ್ಚಿಕ: ಋಣಾತ್ಮಕ ಚಿಂತನೆಗಳು ನಿಮ್ಮನ್ನು ಆಳುವುದಕ್ಕೆ ಅವಕಾಶ ಕೊಡಬೇಡಿ. ಆತ್ಮಸ್ಥೈರ್ಯದಿಂದ ಮುನ್ನಡೆದರೆ ಜಯ ನಿಮ್ಮದೇ. ಮಿತ್ರರಿಂದ ಸಂಕಷ್ಟದ ಸಮಯದಲ್ಲಿ ಸಹಕಾರ ಸಿಗುವುದು. ದೇವತಾ ಪ್ರಾರ್ಥನೆ ಮಾಡಿ.
 
ಧನು: ಮಹಿಳೆಯರಿಗೆ ಇಂದು ಸ್ಥಾನ ಮಾನ ಹೆಚ್ಚಿ, ಉದ್ಯೋಗದಲ್ಲೂ ಯಶಸ್ಸು ಸಾಧಿಸಲು ಸಾಧ್ಯವಾಗುವ ಶುಭ ದಿನ. ಕೃಷಿ ಕ್ಷೇತ್ರದಲ್ಲಿರುವವರಿಗೆ ನೀರಿಗಾಗಿ ಪರದಾಟ ತಪ್ಪದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮಕರ: ಅನಿರೀಕ್ಷಿತ ಸಮಯದಲ್ಲಿ ಧನ ಲಾಭವಾಗಿ ಅಂದುಕೊಂಡ ಕಾರ್ಯಗಳು ನೆರವೇರುವುದು. ಮನೆಯಲ್ಲಿ ಸಹೋದರಿಯ ಮದುವೆ ಸಂಬಂಧ ಓಡಾಟ ನಡೆಸುವಿರಿ. ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ಕುಲದೇವರ ಪ್ರಾರ್ಥನೆ ಮಾಡಿ ಮುಂದುವರಿಯಿರಿ.
 
ಕುಂಭ: ವಾಹನ-ಆಸ್ಥಿ ಖರೀದಿ ಮಾಡುವ ಯೋಜನೆಯಿದ್ದರೆ ಸ್ವಲ್ಪ ದಿನ ಮುಂದೂಡುವುದು ಒಳ್ಳೆಯದು. ನಂಬಿದವರೇ ವಂಚಿಸುವ ಸಾಧ್ಯತೆಯಿದೆ. ಹಣದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯ ಭಾಗ್ಯ ಸುಧಾರಿಸುವುದು.
 
ಮೀನ: ಸನ್ಮಿತ್ರರ ಸಹಕಾರದಿಂದ ಎಲ್ಲವೂ ಒಳ್ಳೆಯದಾಗಲಿದೆ. ಸಂಕಷ್ಟಗಳು ಎದುರಾದರೂ ಅದರಿಂದ ಪಾರಾಗಲು ಮಿತ್ರರ ನೆರವು ಸಿಗಲಿದೆ. ಸಂಗಾತಿಯೊಂದಿಗೆ ಕೊಂಚ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಆದರೆ ದಿನದಂತ್ಯಕ್ಕೆ ಎಲ್ಲವೂ ಒಳ್ಳೆಯದಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :