Widgets Magazine

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು| Krishnaveni K| Last Modified ಗುರುವಾರ, 22 ಆಗಸ್ಟ್ 2019 (08:47 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

 
ಮೇಷ: ವೃತ್ತಿರಂಗದಲ್ಲಿ ಕಾರ್ಯದೊತ್ತಡ ಹೆಚ್ಚಲಿದೆ. ಆರೋಗ್ಯದಲ್ಲಿ ಕೊಂಚ ಮಟ್ಟಿಗಿನ ಸುಧಾರಣೆ ಕಂಡುಬಂದರೂ ಮನಸ್ಸಿಗೆ ನೆಮ್ಮದಿಯಿರದು. ಬೇಡದ ಯೋಚನೆಗಳು ಕಾಡಲಿವೆ. ಮಕ್ಕಳಿಂದ ಸಂತಸ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಾಗದು. ಆದರೆ ಖರ್ಚಿನ ಬಗ್ಗೆ ಮಿತಿಯಿರಬೇಕು.
 
ವೃಷಭ: ಸಹೋದ್ಯೋಗಿಗಳ ನೆರವು ಸಿಗಲಿದ್ದು, ಉದ್ಯೋಗ ಕ್ಷೇತ್ರದಲ್ಲಿ ಬರುವ ಕಂಟಕಗಳನ್ನು ನಿಭಾಯಿಸುವಿರಿ. ಸಾಮಾಜಿಕವಾಗಿ ಗೌರವ ಸಂಪಾದಿಸಲಿದ್ದೀರಿ. ಮಹಿಳೆಯರಿಗೆ ಆಭರಣ ಖರೀದಿ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲ ಸಿಗುವುದು.
 
ಮಿಥುನ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಸಣ್ಣ ವ್ಯಾಪಾರಿಗಳಿಗೆ ನಿವ್ವಳ ಲಾಭ ಸಿಗುವುದು. ಮೈ ಕೈ ನೋವಿನಂತಹ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡುಬರಬಹುದು. ಹಿರಿಯರ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ಕಿರು ಸಂಚಾರ ಯೋಗವಿದೆ.
 
ಕರ್ಕಟಕ: ಸಂತಾನಾಪೇಕ್ಷಿತ ದಂಪತಿಗಳು ದೈವದ ಮೊರೆ ಹೋಗುವರು. ಕೆಳ ಹಂತದ ನೌಕರರಿಗೆ ಬಡ್ತಿ ಯೋಗವಿದೆ. ವಾಹನ ಖರೀದಿಗೆ ಉತ್ತಮ ಸಮಯ. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.
 
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯಿರುತ್ತದೆ. ಆದರೆ ಸ್ತ್ರೀಯರಿಂದ ಮಾನ ಹಾನಿಯಾಗಬಹುದು. ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ. ರಾಜಕೀಯ ರಂಗದವರಿಗೆ ಮುನ್ನಡೆ ಭಾಗ್ಯವಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ.
 
ಕನ್ಯಾ: ಸಾಂಸಾರಿಕವಾಗಿ ಇದುವರೆಗೆ ಇದ್ದ ತೊಂದರೆಗಳು ನಿಧಾನವಾಗಿ ದೂರವಾಗುವುದು. ಸಂಗಾತಿಯೊಂದಿಗೆ ಸುಮಧುರ ಕ್ಷಣ ಕಳೆಯುವಿರಿ. ಆರ್ಥಿಕವಾಗಿ ಸ್ಥಿತಿ ಗತಿ ಸುಧಾರಿಸಲಿದೆ. ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸುವಿರಿ.
 
ತುಲಾ: ಉದ್ಯೋಗ ನಿಮಿತ್ತ ದೂರ ಸಂಚಾರ ಕೈಗೊಳ್ಳಬೇಕಾಗುತ್ತದೆ. ಇಷ್ಟ ಮಿತ್ರರ ಕಷ್ಟಗಳಿಗೆ ಸ್ಪಂದಿಸುವಿರಿ. ಆದರೆ ಅತಿಯಾಗಿ ಯಾರನ್ನೂ ನಂಬಲು ಹೋಗಬೇಡಿ. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.
 
ವೃಶ್ಚಿಕ: ಕುಲದೇವರ ಪ್ರಾರ್ಥನೆ ಮೂಲಕ ದಿನದಾರಂಭ ಮಾಡಿದರೆ ಇಂದು ಅಂದುಕೊಂಡ ಕಾರ್ಯಗಳು ಸುಗಮವಾಗಿ ನೆರವೇರುವುದು. ಅಪರಿಚಿತರನ್ನು ನಂಬಿ ಹೂಡಿಕೆ ಮಾಡಲು ಹೋಗಬೇಡಿ. ವ್ಯಾಪಾರಿಗಳಿಗೆ ನಿವ್ವಳ ಲಾಭ ಸಿಗಲಿದೆ. ಆರೋಗ್ಯದಲ್ಲಿ ಚೇತರಿಕೆ.
 
ಧನು: ದುಡುಕು ಮಾತಿನಿಂದ ಸಂಗಾತಿಯ ಮನಸ್ಸು ನೋಯಿಸಬೇಡಿ. ಮಾತಿನ ಮೇಲೆ ನಿಗಾ ಇರಲಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟರೆ ಮಾತ್ರ ಫಲ ಪಡೆಯಲು ಸಾಧ್ಯ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು. ದೇವತಾ ಪ್ರಾರ್ಥನೆ ಮಾಡಿ.
 
ಮಕರ: ಉದ್ಯೋಗ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಯನ್ನು ತಾಳ್ಮೆಯಿಂದ ನಿಭಾಯಿಸಬೇಕು. ಪಾಲು ಬಂಡವಾಳ ವ್ಯವಹಾರದಲ್ಲಿ ವಂಚನೆಗೊಳಗಾಗುವ ಭೀತಿಯಿದೆ. ಎಚ್ಚರಿಕೆಯಿಂದಿರಿ. ಕೌಟುಂಬಿಕವಾಗಿ ಬಂಧುಮಿತ್ರರ ಆಗಮನವಾಗಿ ಮನಸ್ಸಿಗೆ ಸಂತಸವಾಗುವುದು.
 
ಕುಂಭ: ಋಣಾತ್ಮಕ ಚಿಂತನೆಗಳನ್ನು ದೂರ ಮಾಡಿ. ಉದ್ಯೋಗ ಕ್ಷೇತ್ರದಲ್ಲಿ ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕಿದೆ. ಪ್ರೀತಿ ಪಾತ್ರರಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಮಕ್ಕಳ ಆರೋಗ್ಯ ಚಿಂತೆಗೆ ಕಾರಣವಾಗಬಹುದು. ದಿನದಂತ್ಯಕ್ಕೆ ಶುಭ ಸುದ್ದಿ.
 
ಮೀನ: ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಸರಕಾರಿ ಕೆಲಸಗಳಲ್ಲಿ ಜಯ. ದಾಯಾದಿಗಳೊಂದಿಗಿನ ಮನಸ್ತಾಪ ಬಗೆಹರಿದು ಮನಸ್ಸಿಗೆ ನೆಮ್ಮದಿಯಾಗುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಇದರಲ್ಲಿ ಇನ್ನಷ್ಟು ಓದಿ :