ಪಾದಗಳನ್ನು ಬಿಳಿಯಾಗಿಸಬೇಕೇ…? ಮನೆಯಲ್ಲಿಯೇ ಈ ಪೆಡಿಕ್ಯೂರ್ ಮಾಡಿಕೊಳ್ಳಿ

ಬೆಂಗಳೂರು, ಭಾನುವಾರ, 14 ಜನವರಿ 2018 (06:46 IST)

ಬೆಂಗಳೂರು : ಕೆಲವರ ಪಾದಗಳು ನೋಡಲು ತುಂಬಾ ಕಪ್ಪಾಗಿಯೂ, ಅಸಹ್ಯವಾಗಿಯೂ ಇರುತ್ತದೆ. ಅಷ್ಟೇ ಅಲ್ಲದೆ ಉಗುರಿನಲ್ಲಿ ಕೊಳಕು ಕೂಡ ತುಂಬಿರುತ್ತದೆ. ಇದನ್ನು ಮಾಮೂಲಾಗಿ ಸ್ವಚ್ಚ ಮಾಡಿದರೆ ಅದು ಶುಭ್ರವಾಗುವುದಿಲ್ಲ. ಅದಕ್ಕಾಗಿ ನಾವು ಪ್ರತಿಬಾರಿ ಪಾರ್ಲರ್ ಗೆ  ಹೋಗೋಕೆ ಆಗಲ್ಲ. ಅದಕ್ಕಾಗಿ ನಾವು ಮನೆಯಲ್ಲೇ ನಮ್ಮ ಪಾದಗಳನ್ನು ಸುಂದರವಾಗಿಟ್ಟುಕೊಳ್ಳಬಹುದು.

 
ಮೊದಲಿಗೆ  ಉಗುರುಗಳನ್ನುಕಟ್ ಮಾಡಿ ನೈಲ್ ಪಾಲಿಶ್ ಗಳನ್ನು ತೆಗೆದುಕೊಂಡು ಉಗುರು ಬೆಚ್ಚಗಿನ ನೀರಿನಲ್ಲಿ 2 ಚಮಚ ನಿಂಬೆರಸ, 2 ಚಮಚ ಅಡುಗೆ ಸೋಡಾ, ಸ್ವಲ್ಪ ಉಪ್ಪು, 1 ಚಮಚ ನೀವು ಉಪಯೋಗಿಸುವ ಶಾಂಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದರಲ್ಲಿ ಪಾದಗಳನ್ನು ಇಟ್ಟು 10 ನಿಮಿಷದ ಬಳಿಕ ಸ್ವಲ್ಪ ಶಾಂಪುವನ್ನು ತೆಗೆದುಕೊಂಡು ಪಾದಗಳನ್ನು ಹಾಗು ಉಗುರುಗಳನ್ನು ಚೆನ್ನಾಗಿ ಉಜ್ಜಬೇಕು. ನಂತರ ಸ್ವಚ್ಚ ಮಾಡಿ ಒಂದು ಕಾಟನ್ ಬಟ್ಟೆಯಿಂದ ಒರೆಸಿಕೊಳ್ಳಿ . ನಂತರ 4 ಚಮಚ ಮಲ್ತಾನ್ ಮಿಟ್ಟಿ , 2 ಚಮಚ ನಿಂಬೆರಸ, 2 ಚಮಚ ಆಲೊವೆರಾ ಜೆಲ್ ಹಾಗು ಸ್ವಲ್ಪ ರೋಸ್ ವಾಟರ್ ಹಾಕಿ  ಪೇಸ್ಟ್ ಮಾಡಿ ಪಾದಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. 10-15 ನಿಮಿಷದ ನಂತರ ತೊಳೆಯಿರಿ. ನಂತರ ಯಾವುದಾದರೂ ಮೊಶ್ಚರೈಸೆಶನ್ ಕ್ರೀಂ ನ್ನು ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಿ. ಇದನ್ನು ವಾರದಲ್ಲಿ 2 ಬಾರಿ ಮಾಡುವುದರಿಂದ ಪಾದಗಳು ಬಿಳಿಯಾಗಿ ಅಂದವಾಗಿಯೂ ಇರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಹಿಳೆಯರೇ ಪೀರಿಯಡ್ಸ್ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ!

ಬೆಂಗಳೂರು : ಎಲ್ಲರೂ ಹೆಣ್ಣಿನ ಸೌಂದರ್ಯ ಕಂಡು ಸಂತೋಷ ಪಡುತ್ತಾರೆ. ಆದರೆ ಹೆಣ್ಣು ತನ್ನ ಮೇಲೆ ತಾನು ...

news

ಕಿವಿಯಲ್ಲಿರುವ ಮಲೀನಗಳನ್ನು ತೊಲಗಿಸಲು ಸುಲಭ ಉಪಾಯ ಇಲ್ಲಿದೆ

ಬೆಂಗಳೂರು : ಕಿವಿಯಲ್ಲಿರುವ ಮಲೀನವನ್ನು ಕೆಲವೆಡೆ ಹಲವು ವಿಧವಾಗಿ ಕರೆಯಲಾಗುತ್ತದೆ. ಧೂಳು, ನೀರಿನಂತಹ ...

news

ಮನೆಯಲ್ಲೇ ಶಾಂಪೂ ತಯಾರಿಸೋದು ಹೇಗೆ ಗೊತ್ತಾ…?

ಬೆಂಗಳೂರು : ಹೆಚ್ಚಿನವರೂ ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದಕ್ಕೆ ಒಂ\ದು ಮುಖ್ಯ ಕಾರಣ ...

news

ಸುಲಭವಾಗಿ ತಯಾರಾಗುವ ರುಚಿಕರವಾದ ಮೊಟ್ಟೆ (ಎಗ್) ಪಲ್ಯ

ಬೆಂಗಳೂರು : ಮೊಟ್ಟೆಯಿಂದ ಹಲವು ಬಗೆಯ ರೆಸಿಪಿಯನ್ನು ಮಾಡಬಹುದು. ಅದು ಬಹಳ ರುಚಿಯಾಗಿಯೂ ಇರುತ್ತದೆ. ಬೇಕು ...

Widgets Magazine
Widgets Magazine