ಮನೆಯಲ್ಲಿಯೇ ಅಡಗಿವೆ ಸೌಂದರ್ಯದ ಟಿಪ್ಸ್

ಬೆಂಗಳೂರು, ಮಂಗಳವಾರ, 5 ಜೂನ್ 2018 (16:30 IST)

ಹೊಳೆಯುವ ಮತ್ತು ಕಾಂತಿಯುತ ಚರ್ಮವನ್ನು ಪಡೆಯುವುದು ಪ್ರತಿಯೊಬ್ಬರ ಕನಸೂ ಆಗಿದೆ. ಬ್ಯೂಟಿಪಾರ್ಲರ್‌ಗೆ ಹೋಗಿ ಗಂಟೆಗಟ್ಟಲೆ ಕುಳಿತು ಹಣ ಕೊಟ್ಟು ಬರುತ್ತಾರೆ. ಆದರೆ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾಂತಿಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು.
1. ಜೇನು ತುಪ್ಪ ಮತ್ತು ನಿಂಬೆ ಹಣ್ಣಿನ ಫೇಸ್‌ಪ್ಯಾಕ್ -
 
1 ಚಮಚ ಜೇನು ತುಪ್ಪ ಮತ್ತು 2 ಚಮಚ ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಿ, ಮುಖಕ್ಕೆ ಲೇಪಿಸಿ 15 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.
 
2. ಅಕ್ಕಿ ಹಿಟ್ಟಿನ ಫೇಸ್‌ಪ್ಯಾಕ್ -
 
2 ಚಮಚ ಅಕ್ಕಿ ಹಿಟ್ಟಿಗೆ, 1 ಚಮಚ ಮೊಸರನ್ನು ಸೇರಿಸಿ ಮುಖಕ್ಕೆ ಹಗುರವಾಗಿ ಉಜ್ಜಿ, 2 ನಿಮಿಷಗಳ ಕಾಲ ಸ್ಕರ್ಬ್ ಮಾಡಿ, ನಂತರ ಮುಖವನ್ನು ತೊಳೆದುಕೊಳ್ಳಿ.
 
3. ಮುಲ್ತಾನಿ ಮಿಟ್ಟಿ ಫೇಸ್‌ಪ್ಯಾಕ್ -
 
1 ಚಮಚ ಮುಲ್ತಾನಿಮಿಟ್ಟಿಗೆ ಸ್ವಲ್ಪ ನಿಂಬೆ ರಸ ಮತ್ತು ಗುಲಾಬಿ ಜಲವನ್ನು ಮಿಶ್ರಣ ಮಾಡಿ, ಮುಖಕ್ಕೆ ಲೇಪಿಸಿಕೊಳ್ಳಿ. ಈ ಪ್ಯಾಕ್ ಒಣಗಿದ ನಂತರ ತಂಪಾದ ನೀರಿಸಿಂದ ಮುಖವನ್ನು ತೊಳೆದುಕೊಳ್ಳಿ. ಈ ಫೇಸ್‌ಪ್ಯಾಕ್ ಅನ್ನು ವಾರಕ್ಕೆ 3 ಬಾರಿ ಬಳಸಿ.
 
4. ಬಾದಾಮಿ ಪುಡಿ ಮತ್ತು ಮೊಸರಿನ ಫೇಸ್‌ಪ್ಯಾಕ್ -
 
1 ಚಮಚ ಬಾದಾಮಿ ಪುಡಿಗೆ ಮತ್ತು 1 ಚಮಚ ಮೊಸರನ್ನು ಮಿಶ್ರಣ ಮಾಡಿ, ಮುಖಕ್ಕೆ ಲೇಪಿಸಿ ಹಗುರವಾಗಿ ಉಜ್ಜಿ 10 ನಿಮಿಷ ಹಾಗೆ ಬಿಡಿ, ನಂತರ ತಂಪಾದ ನೀರಿಸಿಂದ ಮುಖವನ್ನು ತೊಳೆದುಕೊಳ್ಳಿ.
 
5. ಕಡಲೆ ಹಿಟ್ಟಿನ ಫೇಸ್‌ಪ್ಯಾಕ್ -
1 ಚಮಚ ಕಡಲೆ ಹಿಟ್ಟಿಗೆ, ಸ್ವಲ್ಪ ಅರಿಶಿಣ ಮತ್ತು ಹಾಲು ಹಾಕಿ ಮಿಶ್ರಣ ಮಾಡಿ, ಮುಖಕ್ಕೆ ಲೇಪಿಸಿ, ಒಣಗಲು ಬಿಡಿ. 10 ನಿಮಿಷಗಳ ನಂತರ ತಂಪಾದ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಸೌಂದರ್ಯ ಸಲಹೆಗಳು ಆರೋಗ್ಯ ಟಿಪ್ಸ್ ಆರೋಗ್ಯ ಸಲಹೆಗಳು Beauty Health Information Beauty Tips Health Tips

ಆರೋಗ್ಯ

news

ಕಪ್ಪಾಗಿರುವ ಚರ್ಮವನ್ನು ಬಿಳಿಯಾಗಿಸಿಕೊಳ್ಳುವುದು ಹೇಗೆ...!?

ಎಲ್ಲ ಯುವಕ ಯುವತಿಯರಿಗೂ ತಾವು ಶ್ವೇತವರ್ಣದವರಾಗಿರಬೇಕು ಎನ್ನುವ ಹಂಬಲವಿರುತ್ತದೆ. ಇನ್ನು ಕೆಲವರ ಚರ್ಮ ...

news

ನಿಮ್ಮ ತಲೆಗೂದಲಿನ ಉತ್ತಮ ಆರೋಗ್ಯಕ್ಕಾಗಿ ಕೆಲವು ಸಲಹೆಗಳು...

ತಲೆ ಕೂದಲು ದಟ್ಟವಾಗಿ ಉದ್ದವಾಗಿದ್ದರೂ ಸಹ ಅದನ್ನು ಧೂಳು, ಬೆವರಿನಿಂದ ಕಾಪಾಡಿಕೊಳ್ಳುವುದು ಮತ್ತು ...

news

ನಿಮ್ಮ ಹೈಟ್ ಕಡಿಮೆಯಾಗಲು ಕಾರಣವೇನು ಗೊತ್ತಾ?

ಬೆಂಗಳೂರು : ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ದೇಹದ ಬೆಳವಣಿಗೆ ಕಡಿಮೆಯಾಗುತ್ತದೆ, ಕೆಲವೊಮ್ಮೆ ...

news

50 ದಾಟಿದ ಮೇಲೂ ಸೆಕ್ಸ್ ಮಾಡುವುದರಿಂದ ಭಾರೀ ಲಾಭವಿದೆಯಂತೆ!

ಬೆಂಗಳೂರು: ಲೈಂಗಿಕ ಕ್ರಿಯೆಗೆ ವಯಸ್ಸಿನ ಹಂಗಿಲ್ಲ. ಗಂಡ ಹೆಂಡಿರ ಮಧ್ಯೆ ಒಳ್ಳೆ ಬಾಂಧವ್ಯ, ...

Widgets Magazine
Widgets Magazine