ಮನೆಯಲ್ಲೇ ಕೈಕಾಲಿಗೆ ವ್ಯಾಕ್ಸ್ ಮಾಡುವುದು ಹೇಗೆ ಗೊತ್ತಾ..?

ಬೆಂಗಳೂರು, ಶುಕ್ರವಾರ, 5 ಜನವರಿ 2018 (12:41 IST)

ಬೆಂಗಳೂರು : ಹೆಚ್ಚಿನ ಹುಡುಗಿಯರಿಗೆ  ಕೈಕಾಲುಗಳಲ್ಲಿ ತುಂಬಾ ಕೂದಲುಗಳಿರುತ್ತವೆ. ಅದು ನೋಡಲು ತುಂಬಾ ಅಸಹ್ಯವಾಗಿ ಕಾಣಿಸುತ್ತದೆ. ಇದರಿಂದ ಅವರಿಗೆ ಫ್ಯಾಶನ್ ಡ್ರೆಸ್ ಗಳನ್ನು ಧರಿಸಲು ಆಗುವುದಿಲ್ಲ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸಿ ಹೆಚ್ಚು ಹಣಗಳನ್ನು ಕೊಟ್ಟು ವ್ಯಾಕ್ಸ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ಕ್ರೀಂಗಳಿಂದ ಚರ್ಮಗಳಲ್ಲಿ ಅಲರ್ಜಿ ಆಗುವ ಸಂಭವವಿರುತ್ತದೆ.


ಅದಕ್ಕಾಗಿ ಮನೆಯಲ್ಲೇ ವ್ಯಾಕ್ಸ್ ತಯಾರಿಸಿ ಬಳಸಬಹುದು. ಅದು ನೈಸರ್ಗಿಕವಾಗಿದ್ದು, ಯಾವುದೆ ಎಫೆಕ್ಟ್ ಕೂಡ ಆಗುವುದಿಲ್ಲ. 1ಕಪ್ ಸಕ್ಕರೆಗೆ (200ಗ್ರಾಂ), ¼ ಕಪ್ (60ಎಂ.ಎಲ್.)ನಿಂಬೆರಸ ಹಾಕಿ , ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಮೇಲೆ ಮಿಡಿಯಂ ಹಿಟ್ ನಲ್ಲಿ ಕುದಿಸುತ್ತಾ ಅದನ್ನು ಮಿಕ್ಸ್ ಮಾಡುತ್ತಾಇರಿ. 10 ನಿಮಿಷ ಚೆನ್ನಾಗಿ ಕುದಿಸಿ ಅದು ಬ್ರೌನ್ ಕಲರ್ ಬಂದ ಮೇಲೆ ಅದನ್ನು ಇಳಿಸಿ ಒಂದು ಗ್ಲಾಸ್ ಹಾಕಿ ಉಗುರುಬೆಚ್ಚಗಾದ ಮೇಲೆ ಕಾಲಿಗೆ ಬೇಬಿ ಪೌಡರ್ ಹಚ್ಚಿ ಒಂದು ಸ್ಟಿಕ್ ನ ಸಹಾಯದಿಂದ  ಈ ಮಿಶ್ರಣವನ್ನು ಕಾಲಿಗೆ ಹಚ್ಚಿ. ಒಂದು ಚಿಕ್ಕ ಬಟ್ಟೆಯ ಪೀಸನ್ನು  ಅದರ ಮೇಲೆ ಇಟ್ಟು ಒತ್ತಿ ನಂತರ ಎಳೆಯಿರಿ. ಹೀಗೆ ಕೈಕಾಲಲ್ಲಿ ಕೂದಲಿರುವ ಕಡೆ ಹಚ್ಚಿ ಈ ರೀತಿಯಾಗಿ ಮಾಡಿದರೆ ಕೂದಲು ನಿವಾರಣೆಯಾಗುತ್ತದೆ. ನಂತರ ಕಾಲಿಗೆ ಬೇಬಿ ಆಯಿಲ್ ಹಚ್ಚಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಒಬ್ಬ ಮಹಿಳೆಯನ್ನು ನೋಡಿದರೆ ಇನ್ನೊಬ್ಬ ಮಹಿಳೆ ಹೊಟ್ಟೆಕಿಚ್ಚು ಪಡುವುದು ಯಾಕೆ ಗೊತ್ತಾ...?

ಬೆಂಗಳೂರು : ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಯಾರೋ ಒಬ್ಬರ ಮೇಲೆ ದ್ವೇಷವಿದ್ದೆ ಇರುತ್ತದೆ. ಅವರನ್ನು ...

news

ಹೆಚ್ಚು ಸೆಕ್ಸ್ ಮಾಡೋದು ಯಾರು? ಸಸ್ಯಾಹಾರಿಗಳಾ? ಮಾಂಸಾಹಾರಿಗಳಾ?

ಬೆಂಗಳೂರು: ಲೈಂಗಿಕ ವಿಚಾರದಲ್ಲಿ ಪುರುಷರಿಗೆ ಹೆಚ್ಚು ಆಸಕ್ತಿಯಾ ಮಹಿಳೆಯರಿಗೆ ಹೆಚ್ಚು ಆಸಕ್ತಿಯಾ ಎಂದು ...

news

ಎಷ್ಟು ನಿಧಾನವಾಗಿ ತಿಂಡಿ ತಿನ್ನೋದು ಅಂತ ಬೈತಾರಾ? ಚಿಂತೆ ಮಾಡಬೇಡಿ!

ಬೆಂಗಳೂರು: ಕೆಲವರಿಗೆ ಬೇಗ ತಿನ್ನುವ ಅಭ್ಯಾಸವಿರುವುದಿಲ್ಲ. ತಟ್ಟೆ ಮುಂದೆ ತುಂಬಾ ಹೊತ್ತು ಕೂತು ನಿಧಾನಕ್ಕೆ ...

news

ಹಲಸಿನ ಹಣ್ಣಿನ ಹಲವಾರು ತಿನಿಸುಗಳು: ಮನೆಯಲ್ಲಿ ಮಾಡುವ ಸರಳ ವಿಧಾನ

ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಲವಾರು ಪೋಷಕಾಂಶ ಭರಿತ ಈ ಹಣ್ಣನ್ನು ತಿನ್ನುವುದು ...

Widgets Magazine
Widgets Magazine