ಕಣ್ಣಿಗೆ ಕಾಡಿಗೆ ಹಚ್ಚುವುದರಿಂದಾಗುವ ಪ್ರಯೋಜನವೇನು ಗೊತ್ತಾ

ಬೆಂಗಳೂರು, ಮಂಗಳವಾರ, 23 ಜನವರಿ 2018 (07:32 IST)

ಬೆಂಗಳೂರು : ಮಹಿಳೆಯರು ಬಳಸುವ ಸೌಂದರ್ಯದ ವಸ್ತುಗಳಲ್ಲಿ ಕಣ್ಣಿನ ಕಾಡಿಗೆಯು ಒಂದು. ಇದು ಮಹಿಳೆಯರ ಮುಖದ ಅಂದವನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸ್ತ್ರೀಯರು ಎಷ್ಟೇ ಸುಂದರವಾಗಿ ಅಲಂಕಾರ ಮಾಡಿಕೊಂಡರು ಕಣ್ಣಿಗೆ ಕಾಡಿಗೆ ಹಚ್ಚಿಲ್ಲವೆಂದರೆ ಅದು ಆಕರ್ಷಕವಾಗಿ ಕಾಣಿಸುವುದಿಲ್ಲ. ಹಿಂದಿನ ಕಾಲದಿಂದಲೂ ಕಣ್ಣಿಗೆ ಕಾಡಿಗೆ ಹಚ್ಚುವುದು ರೂಢಿಯಲ್ಲಿತ್ತು.

 
ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಕಣ್ಣು ಸುಂದರವಾಗಿ ಕಾಣುವುದು ಮಾತ್ರವಲ್ಲ. ಕಾಡಿಗೆಯು ಸೂರ್ಯನ ಕಿರಣಗಳು ಕಣ್ಣಿಗೆ ಬಿದ್ದಾಗ ಅದರ ಶಾಖದಿಂದ ಕಣ್ಣನ್ನು ರಕ್ಷಿಸುತ್ತದೆ. ಹಾಗೆ ಕಣ್ಣಿನ ಒಳಗೆ ಧೂಳು ಪ್ರವೇಶಿಸದಂತೆ ತಡೆಯುತ್ತದೆ. ಇದರಿಂದ ದೃಷ್ಟಿ ಕೂಡ ಚೆನ್ನಾಗಿ ಕಾಣಿಸುತ್ತದೆ. ಕಣ್ಣನ ತೇವಾಂಶ ಒಣಗದಂತೆ ತಡೆಯುತ್ತದೆ. ಕಣ್ಣಿನ ರೆಪ್ಪೆಗಳು ಕೂಡ ಕಾಡಿಗೆಯಿಂದಾಗಿ ದಪ್ಪವಾಗಿ ಬೆಳೆಯುತ್ತದೆ. ಇದರಿಂದಾಗಿ ಮುಖದ ಅಂದ ಇನ್ನಷ್ಟು ಹೆಚ್ಚಾಗುತ್ತದೆ. ಕಣ್ಣು ಕೆಂಪಾಗುವುದನ್ನು ತಡೆಯುವುದರ ಜೊತೆಗೆ ಕಣ್ಣನ್ನು ತಂಪಾಗಿ ಇಡುತ್ತದೆ. ಹಾಗೆ ಕಾಡಿಗೆಯನ್ನು ಹಚ್ಚುವುದರಿಂದ ಕೆಟ್ಟ ದೃಷ್ಟಿ ತಾಕುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮುಟ್ಟಿನ ಸಮಯದಲ್ಲಿ ನೋವು ಕಾಣಿಸಿಕೊಳ್ಳಲು ಈ ಅಭ್ಯಾಸಗಳೇ ಕಾರಣ

ಬೆಂಗಳೂರು : ಮುಟ್ಟು ಒಂದು ನೈಸರ್ಗಿಕ ಕ್ರಿಯೆ. ಮಹಿಳೆಯಾದವಳು ಪ್ರತಿ ತಿಂಗಳು ಮೂರ್ನಾಲ್ಕು ದಿನ ಯಮ ಯಾತನೆ ...

news

ಈ ಶಸ್ತ್ರಚಿಕಿತ್ಸೆಯಿಂದ ಪ್ರಾಣಾಪಾಯ ಗ್ಯಾರಂಟಿ!

ಬೆಂಗಳೂರು: ಕೆಲವು ಶಸ್ತ್ರಚಿಕಿತ್ಸೆಗಳು ಪ್ರಾಣಾಂತಿಕವಾಗಬಹುದು ಎಂದು ನಾವು ಕೇಳಿದ್ದೇವೆ. ಅಂತಹದ್ದರಲ್ಲಿ ...

news

ಮದ್ಯಪಾನ ಸೆಕ್ಸ್ ಲೈಫ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ?!

ಬೆಂಗಳೂರು: ಮದ್ಯಪಾನ ಮಾಡುವುದರಿಂದ ಹಲವು ಅಡ್ಡಪರಿಣಾಮಗಳಿವೆ ಎನ್ನುವುದನ್ನು ನಾವು ಓದಿರುತ್ತೇವೆ. ಅದು ...

news

ಹೊಸ ಬಟ್ಟೆಗಳನ್ನು ಒಗೆಯದೇ ಧರಿಸಿದರೆ ಏನಾಗುತ್ತದೆ ಗೊತ್ತಾ...?

ಬೆಂಗಳೂರು : ನಮ್ಮಲ್ಲಿ ಹಲವರಿಗೆ ಹಬ್ಬದ ದಿನಗಳಲ್ಲಿ ಹೊಸ ಬಟ್ಟೆಗಳನ್ನು ತರುವುದು ರೂಢಿ. ಇನ್ನು ಕೆಲವರು ...

Widgets Magazine