ದೇಗುಲ ದರ್ಶನ: ಶಿವನ ಆರಾಧಕರು ಈ ದೇವಾಲಯಕ್ಕೆ ತಪ್ಪದೇ ಭೇಟಿ ಕೊಡಿ!

ಬೆಂಗಳೂರು, ಶುಕ್ರವಾರ, 9 ಫೆಬ್ರವರಿ 2018 (10:18 IST)

ಬೆಂಗಳೂರು: ಬೆಂಗಳೂರಿನಿಂದ ಅತ್ತಿಬೆಲೆ ಗಡಿ ದಾಟಿ ತಮಿಳುನಾಡು ಕಡೆಗೆ ಸಾಗುವಾಗ ಹೆದ್ದಾರಿಗಿಂತ ಕೊಂಚ ಪಕ್ಕದಲ್ಲೇ ಚಂದ್ರಚೂಡೇಶ್ವರ ಸಿಗುತ್ತದೆ.
 

ಪುರಾತನವಾದ ಈ ದೇವಾಲಯ ಇರುವುದು ಹೊಸೂರು ಬಳಿ, ತಮಿಳುನಾಡಿನ ಕೃಷ್ಣಗಿರಿ ತಾಲೂಕಿನಲ್ಲಿ. ತಮಿಳುನಾಡು ದತ್ತಿ ಇಲಾಖೆಯ ಆಡಳಿತಕ್ಕೊಳಪಟ್ಟ ದೇವಾಲಯ ಇದಾಗಿದೆ.
 
ಬೆಟ್ಟವೇರಿ ಸಾಗಿದರೆ ಶಿವ ದೇಗುಲ ಸಿಗುತ್ತದೆ. ಹೊಯ್ಸಳರ ಕಾಲದಲ್ಲೇ ಈ ದೇವಾಲಯ ಅಸ್ಥಿತ್ವದಲ್ಲಿದೆ ಎಂದು ನಂಬಲಾಗಿದೆ. ಅತ್ಯಂತ ಪುರಾತನವಾದ ಈ ದೇವಾಲಯ ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣಗೊಂಡಿದೆ. ಗರ್ಭಗುಡಿಯಲ್ಲಿ ಚಂದ್ರನನ್ನೇ ಆಭರಣವಾಗಿ ಮುಡಿಗೇರಿಸಿಕೊಂಡ ಶಿವ ಲಿಂಗವಿದೆ.
 
ಇಲ್ಲಿಗೆ ಪ್ರತಿ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಬೆಟ್ಟದ ತುದಿಯಲ್ಲಿ ದೇವಾಲಯವಿರುವ ಕಾರಣ ಇಲ್ಲಿಂದ ಬೆಂಗಳೂರು ನಗರದ ವಿಹಂಗಮ ನೋಟ ವೀಕ್ಷಿಸಬಹುದು. ಕಲ್ಲು,  ಬಂಡೆಗಳು ಸೆಲ್ಫೀ ಪ್ರಿಯರಿಗೆ ಇಷ್ಟವಾಗುತ್ತದೆ. ಇಲ್ಲಿ ಪ್ರತಿ ನಿತ್ಯ ಊಟದ ವ್ಯವಸ್ಥೆಯೂ ಇದ್ದು, ಮೊದಲು ಬಂದ 100 ಮಂದಿಗೆ ಭೋಜನ ಲಭ್ಯವಿರುತ್ತದೆ. ಇನ್ನೇನು ಶಿವರಾತ್ರಿ ಬಂತು. ಶಿವ ದೇಗುಲಕ್ಕೆ ಭೇಟಿ ನೀಡುವ ಯೋಜನೆಯಿದ್ದರೆ ಇಲ್ಲಿಗೆ ಬರಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ನೀವು ನಂಬುವಿರಾ

news

ಚಂದ್ರಗ್ರಹಣ ಯಾವ ರಾಶಿ, ನಕ್ಷತ್ರದವರಿಗೆ ದೋಷ?

ಬೆಂಗಳೂರು: ಇಂದು ಖಗ್ರಾಸ ಚಂದ್ರಗ್ರಹಣ. ಧಾರ್ಮಿಕ ಶ್ರದ್ಧೆ ನಂಬಿಕೆ ಇರುವವರು ಇಂದು ಶ್ರದ್ಧೆಯಿಂದ ಗ್ರಹಣ ...

news

ಗಣಪತಿಯ ಮೂವತ್ತೆರಡು ಅವತಾರಗಳ ಬಗ್ಗೆ ಗೊತ್ತಾ?

ಬೆಂಗಳೂರು: ಗಣೇಶ ಆದಿ ಪೂಜಿತ ದೇವ. ಲೋಕೋದ್ದಾರಕ್ಕಾಗಿ ಗಣೇಶ 32 ಅವತಾರ ಎತ್ತಿದ್ದಾನೆ. ಅವು ಯಾವುವು

news

ದೇವರಿಗೇಕೆ ದೀಪ ಉರಿಸಿ ನಮಸ್ಕಾರ ಮಾಡಬೇಕು?

ಬೆಂಗಳೂರು: ಪ್ರತೀ ಮನೆಯಲ್ಲಿ ಸಂಧ್ಯಾಕಾಲದಲ್ಲಿ ದೀಪ ಉರಿಸಿ ನಮಸ್ಕಾರ ಮಾಡುವ ಪದ್ಧತಿಯಿರುತ್ತದೆ. ಸಂಜೆ ...

news

ಇಂದು ಚಂದ್ರಗ್ರಹಣ: ಯಾವ ನಕ್ಷತ್ರದವರಿಗೆ ದೋಷ?

ಬೆಂಗಳೂರು: ಶ್ರೀ ಹೇವಿಳಂಬಿ ನಾಮ ಸಂವತ್ಸರದ ಶ್ರಾವಣ ಮಾಸ ಶುಕ್ಷ ಹುಣ್ಣಿಮೆ ಆಗಸ್ಟ್ 7, 2017 ರಂದು ಶ್ರವಣಾ ...

Widgets Magazine