Widgets Magazine

ಬಿಹಾರ ಪ್ರವಾಹ: ಸಂತ್ರಸ್ತರಿಗೆ 25ಲಕ್ಷ ರೂ. ಪರಿಹಾರ ನೀಡಿದ `ದಂಗಲ್’ ಸ್ಟಾರ್

ಮುಂಬೈ, ಶುಕ್ರವಾರ, 1 ಸೆಪ್ಟಂಬರ್ 2017 (13:33 IST)

Widgets Magazine

ಮುಂಬೈ: ಬಿಹಾರದಲ್ಲಿ ಪ್ರವಾಹದಿಂದಾಗಿ ನೂರಾರು ಕೋಟಿ ನಷ್ಟವಾಗಿದೆ. ಸಾಕಷ್ಟು ಮಂದಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡಿದ್ದು, 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರೈಲ್ವೇ ಇಲಾಖೆಗೂ ಭಾರೀ ನಷ್ಟವಾಗಿದೆ.


ಈ ನಿಟ್ಟಿನಲ್ಲಿ ಬಾಲಿವುಡ್ ಸೂಪರ್ ಸ್ಟಾರ್, ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಪ್ರವಾಹದಿಂದ ತತ್ತರಿಸಿದ ಸಂತ್ರಸ್ತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ಚೆಕ್ ನೀಡಿದ್ದಾರೆ. ಚೆಕ್ ನ್ನು ಕೊರಿಯರ್ ಮೂಲಕ ಕಳುಹಿಸಿದ್ದು, ಸಿಎಂ ನಿತೀಶ್ ಕುಮಾರ್ ಸ್ವೀಕರಿಸಿದ್ದಾರೆ.

ದಂಗಲ್ ಸ್ಟಾರ್ ಕೇವಲ ಪರಿಹಾರ ನೀಡದೆ ತಮ್ಮ ಅಭಿಮಾನಿಗಳಿಗೆ ಸಹ ಸಹಾಯ ಧನ ನೀಡುವಂತೆ ಮನವಿ ಮಾಡಿದ್ದಾರೆ. ಅಂದಹಾಗೆ ಆಮಿರ್ ಸಹಾಯ ಧನ ನೀಡುತ್ತಿರುವುದು ಇದೆ ಮೊದಲೇನಲ್ಲ. ಇದೇ ತಿಂಗಳಲ್ಲಿ ಅಸ್ಸಾಂ ಮತ್ತು ಗುಜರಾತ್ ನಲ್ಲಿ ಪ್ರವಾಹವಾದಾಗಲೂ 25 ಲಕ್ಷ ರೂ. ನೀಡಿದ್ದರು.  

ಬಿಹಾರದಲ್ಲಾದ ಪ್ರವಾಹದಿಂದ 21 ಜಿಲ್ಲೆಗಳ 1 ಕೋಟಿ 70ಲಕ್ಷ ಮಂದಿ ತೊಂದರೆಗೊಳಗಾಗಿದ್ದಾರೆ. ದರ್ಬಾಂಗ ಮತ್ತು ಸಮಸ್ತಿಪುರ್ ನಿಲ್ದಾಣಗಳಲ್ಲಿ ಇಂದಿಗೂ ರೈಲು ಸಂಚಾರ ಅಸ್ತವ್ಯಸ್ತವಾಗಿದೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಗೆಳೆಯ ಶ್ರೇಯಸ್ ಜೊತೆ ಹಸೆಮಣೆ ಏರಿದ ಸಿಂಧು ಲೋಕನಾಥ್

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ...

news

ಸಂಭಾವನೆ ವಿಷಯದಲ್ಲಿ ಸ್ಟಾರ್ ನಟರನ್ನೂ ಹಿಂದಿಕ್ಕಿದ ಆ ನಟಿ ಯಾರು…?

ಮುಂಬೈ: ಇತ್ತೀಚಿಗಷ್ಟೇ ಫೋರ್ಬ್ಸ್ ತನ್ನ ನಿಯತಕಾಲಿಕೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ-ನಟಿಯರ ...

news

`ಮುಗುಳು ನಗೆ’ಗೆ ಪುರುಷರ ಪ್ರವೇಶ ನಿರ್ಬಂಧ...! ಯಾಕೆ…? ಈ ಸ್ಟೋರಿ ಓದಿ…

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ, ಗಣೇಶ್ ಅಭಿನಯದ `ಮುಗುಳು ನಗೆ’ ನಾಳೆ ರಾಜ್ಯಾದ್ಯಂತ ರಿಲೀಸ್ ...

news

‘ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂರ್ಖರಲ್ಲ ಎಂದುಕೊಂಡಿದ್ದೇನೆ’

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳು ಬಂದ ಬೆನ್ನಲ್ಲೇ ಬಿಜೆಪಿ ...

Widgets Magazine Widgets Magazine