ಆಸ್ಕರ್ ಗೆ ಎಂಟ್ರಿ ಪಡೆಯಲು ವಿಫಲವಾದ ಬಾಹುಬಲಿ 2!

ನವದೆಹಲಿ, ಮಂಗಳವಾರ, 26 ಸೆಪ್ಟಂಬರ್ 2017 (07:20 IST)

ನವದೆಹಲಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಸಿನಿಮಾ ಬೇರೆಯದೇ ಹವಾ ಸೃಷ್ಟಿಸಿತ್ತು. ಇದು ಭಾರತದ ಚಿತ್ರರಂಗದ ಇತಿಹಾಸದಲ್ಲೇ ಮೈಲುಗಲ್ಲಾಗಿತ್ತು. ಹಾಗಿದ್ದರೂ ಆಸ್ಕರ್ ಗೆ ಎಂಟ್ರಿ ಪಡೆಯಲು ವಿಫಲವಾಗಿದೆ.


 
ಬಾಹುಬಲಿ 2 ಆಸ್ಕರ್ ಗೆ ಪ್ರವೇಶ ಪಡೆಯುತ್ತದೆ ಎಂದೇ ಅಭಿಮಾನಿಗಳು ನಂಬಿದ್ದರು. ಆದರೆ ಬಾಹುಬಲಿಯನ್ನು ಮೀರಿಸಿ ಅಮಿತ್ ಮಸುರ್ಕರ್ ನಿರ್ದೇಶನದ ‘ನ್ಯೂಟನ್’ ಚಿತ್ರ ಭಾರತದಿಂದ ಪ್ರತಿಷ್ಠಿತಿ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದಿದೆ.
 
ಇದರಿಂದ ನಿರಾಸೆಯಾಗಿದೆಯೇ ಎಂದು ನಿರ್ದೇಶಕ ರಾಜಮೌಳಿಯನ್ನು ಕೇಳಿದಾಗ ‘ಖಂಡಿತಾ ಇಲ್ಲ. ನಾನು ಪ್ರಶಸ್ತಿ ಆಸೆಗಾಗಿ ಸಿನಿಮಾ ಮಾಡಿಲ್ಲ. ನನಗೆ ಹಾಗೂ ನನ್ನ ಸಿನಿಮಾದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ತಾವು ಹಾಕಿದ ಬಂಡವಾಳ ವಾಪಸಾಗಬೇಕು ಮತ್ತು ಮಾಡಿದ ಕೆಲಸ ತೃಪ್ತಿ ಕೊಡಬೇಕು. ಅಷ್ಟೇ ನನಗೆ ತೃಪ್ತಿ ಕೊಡುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಅಭಿಮಾನಿಗಳಿಗೆ ಮಾತ್ರ ತುಂಬಾ ಬೇಜಾರಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚಿತ್ರರಂಗಕ್ಕೆ ರಮ್ಯಾ ಹೇಳ್ತಾರಂತೆ ಗುಡ್ ಬೈ!

ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ಎನಿಸಿಕೊಂಡಿದ್ದ ರಮ್ಯಾ ತಮ್ಮ ಅಭಿಮಾನಿಗಳಿಗೆ ಬೇಸರವಾಗುವಂತಹ ...

news

ಕೊಲಂಬೊ ಪ್ರವಾಸದಲ್ಲಿ ಗಣೇಶ್ ಫ್ಯಾಮಿಲಿ

ಬೆಂಗಳೂರು: ಸತತ ಸಿನಿಮಾಗಳಿಂದ ಬ್ಯುಸಿಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಈಗ ಜಾಲಿ ಮೂಡಲ್ಲಿದ್ದಾರೆ. ತಮ್ಮ ...

news

ಚಿತ್ರರಂಗಕ್ಕೆ ಚಿರಂಜೀವಿ ಕುಟುಂಬದ ಮತ್ತೊಬ್ಬ ನಟ ಎಂಟ್ರಿ

ಹೈದರಾಬಾದ್: ಸಿನಿಮಾ ರಂಗಕ್ಕೆ ಯಾರೇ ಎಂಟ್ರಿಯಾದರು ಅವರ ಫ್ಯಾಮಿಲಿ ಸಹ ಅದೇ ರಂಗದಲ್ಲಿ ಮುಂದುವರೆಯುತ್ತೆ. ...

news

ರಮೇಶ್ ಅರವಿಂದ್ `ಪ್ಯಾರಿಸ್ ಪ್ಯಾರಿಸ್’ಗೆ `ಕ್ವೀನ್’ ಕಾಜಲ್ ಅಗರ್ವಾಲ್

ಬೆಂಗಳೂರು: ಬಾಲಿವುಡ್ `ಕ್ವೀನ್’ ಸಿನಿಮಾ ಕನ್ನಡ ಸೇರಿದಂತೆ ತಮಿಳು ಭಾಷೆಗಳಿಗೆ ರಿಮೇಕ್ ಆಗ್ತಿರೋದು ಗೊತ್ತೇ ...

Widgets Magazine
Widgets Magazine