ಸಚಿನ್ ಗಿಂತಲೂ ಕೊಹ್ಲಿಯೇ ಚೆನ್ನ ಎಂದ ಕರೀನಾ ಕಪೂರ್

ಮುಂಬೈ, ಶುಕ್ರವಾರ, 22 ಸೆಪ್ಟಂಬರ್ 2017 (10:20 IST)

ಮುಂಬೈ: ವಿರಾಟ್ ಕೊಹ್ಲಿಯನ್ನು ಸಚಿನ್ ತೆಂಡುಲ್ಕರ್ ಜತೆ ಹೋಲಿಸಲಾಗುತ್ತದೆ. ಆದರೆ ಬಾಲಿವುಡ್ ನಟಿ ಕರೀನಾ ಕಪೂರ್ ಗೆ ಮಾತ್ರ ಕ್ರಿಕೆಟ್ ದೇವರು ಸಚಿನ್ ಗಿಂತಲೂ ವಿರಾಟ್ ಎಂದರೆ ಇಷ್ಟವಂತೆ.


 
ಸಂದರ್ಶನವೊಂದರಲ್ಲಿ ಕರೀನಾಗೆ ನಿಮಗೆ ಕೊಹ್ಲಿ ಇಷ್ಟವೋ, ಸಚಿನ್ ಇಷ್ಟವೋ ಎಂದು ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಕರೀನಾ ಇವರಿಬ್ಬರಲ್ಲಿ ನಾನು ಕೊಹ್ಲಿಯನ್ನೇ ಆಯ್ಕೆ ಮಾಡುತ್ತೇನೆ. ಅವರೂ ಕೂಡಾ ಮುಂದಿನ ಸಚಿನ್ ಅಲ್ಲವೇ? ಕೊಹ್ಲಿಯಿಂದಾಗಿಯೇ ನಾವು ಇಂದು ಇಷ್ಟೊಂದು ಮ್ಯಾಚ್ ಗೆಲ್ಲುತ್ತಿದ್ದೇವೆ ಎಂದಿದ್ದಾರೆ.
 
ಏಕದಿನ ಶತಕಗಳ ಪೈಕಿ ಸಚಿನ್ ಗಿಂತ ನಂತರದ ಸ್ಥಾನದಲ್ಲಿರುವ 28 ವರ್ಷದ ಕೊಹ್ಲಿ, ಮುಂದೊಂದು ದಿನ ಸಚಿನ್ ರ ಎಲ್ಲಾ ದಾಖಲೆಗಳನ್ನೂ ಮೀರಿಸಿಯಾರು ಎಂದೇ ಲೆಕ್ಕಾಚಾರ ಹಾಕಲಾಗುತ್ತಿದೆ. ಇತ್ತೀಚೆಗೆ ಇನ್ನೊಬ್ಬ ಬಾಲಿವುಡ್ ನಟಿ ದಿಶಾ ಪಟಾನಿ ಕೂಡಾ ಅವಕಾಶ ಸಿಕ್ಕರೆ ನಾನು ಕೊಹ್ಲಿ ಜತೆ ಡೇಟಿಂಗ್ ಹೋಗಲು ಇಷ್ಟಪಡುತ್ತೇನೆ ಎಂದಿದ್ದರು.
 
ಇದನ್ನೂ ಓದಿ.. ಪೊಲೀಯೋ ಡ್ರಾಪ್ ಸೇವಿಸಿ ಸಾವನ್ನಪ್ಪಿದ ಬಾಲಕ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸಚಿನ್ ತೆಂಡುಲ್ಕರ್ ಕರೀನಾ ಕಪೂರ್ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Sachin Tendulkar Kareena Kapoor Virat Kohli Team India Cricket News Sports News

ಸ್ಯಾಂಡಲ್ ವುಡ್

news

ಧೋನಿ ಬಗ್ಗೆ ಕೇಳಿದ್ದಕ್ಕೆ ಲಕ್ಷ್ಮೀ ರೈ ಹೇಳಿದ್ದೇನು ಗೊತ್ತಾ..?

ದಕ್ಷಿಣ ಭಾರತ ಮಾದಕ ಸುಂದರಿ ಲಕ್ಷ್ಮೀ ರೈ ಜೂಲಿ-2 ಚಿತ್ರದ ಟ್ರೇಲರ್ ಮೂಲಕವೇ ಬಾಲಿವುಡ್`ನಲ್ಲಿ ಬಿಸಿ ...

news

ಸುಳ್ಳು ಗಿಳ್ಳು ಬೇಡ ಎಂದ ನಟಿ ರಮ್ಯಾ

ಬೆಂಗಳೂರು: ಸಿನಿಮಾ ಸಾಕು, ರಾಜಕೀಯವೇ ಬೇಕು ಎಂದಿದ್ದ ನಟಿ ರಮ್ಯಾ ಹೊಸ ಚಿತ್ರವೊಂದರಲ್ಲಿ ಅತಿಥಿ ...

news

ಮಗ ಮಾಡಿದ ತಪ್ಪು ಒಪ್ಪಿಕೊಂಡ ನಟ ಜಗ್ಗೇಶ್

ಬೆಂಗಳೂರು: ನವರಸನಾಯಕ ಜಗ್ಗೇಶ್ ದ್ವಿತೀಯ ಪುತ್ರ ಯತಿರಾಜ್ ಇತ್ತೀಚೆಗೆ ಮಡಿಕೇರಿಯಲ್ಲಿ ಸಂಚಾರ ನಿಯಮ ...

news

ನಟಿಯನ್ನ ಕಾರಿನಿಂದ ಎಳೆದು ಲೈಂಗಿಕ ಕಿರುಕುಳ

ಶೂಟಿಂಗ್ ಮುಗಿಸಿಕೊಂಡು ಕಾರಿನಲ್ಲಿ ತೆರಳುತ್ತಿದ್ದ ನಟಿಯನ್ನ ತಡೆದ ಕಾಮುಕರು ನಡುರಸ್ತೆಯಲ್ಲಿ ಎಳೆದು ...

Widgets Magazine