ಲೇಟೆಸ್ಟ್ ಇಂಟರ್ನೆಟ್ ಸೆನ್ಸೇಷನ್: ಒಂದೇ ದಿನದಲ್ಲಿ ನ್ಯಾಷನಲ್ ಕ್ರಶ್ ಆದ ಪ್ರಿಯಾ ಪ್ರಕಾಶ್ ವಾರಿಯರ್

ಅತಿಥಾ 

ಬೆಂಗಳೂರು, ಸೋಮವಾರ, 12 ಫೆಬ್ರವರಿ 2018 (17:03 IST)

ಮಲೆಯಾಳಂ ಯುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲ. ಆದರೆ ಈ ಚಂದದ ಹುಡುಗಿ ‘ಒರು ಅದರ್ ಲವ್‘ ಎಂಬ ಮಲೆಯಾಳಂ ಸಿನಿಮಾದ ‘ಮಾಣಿಕ್ಯ ಮಲಾರಾಯ ಪೂವಿ‘ ಎಂಬ ಹಾಡಿನ ಸಣ್ಣ ತುಣುಕಿನ ಮೂಲಕ ಇಂದು ದೇಶಾದ್ಯಂತ ಫೇಮಸ್ ಆಗಿದ್ದಾಳೆ.

ಎಲ್ಲೆಡೆ ಈ ಹಾಡಿ‌ನಲ್ಲಿರುವ ನಟಿ ಪ್ರಿಯಾ ಪ್ರಕಾಶ್ ಎಕ್ಸ್‌ಪ್ರೆಶನ್ ಹುಡುಗರ ಹೃದಯವನ್ನೇ ಕಲಕುತ್ತಿದೆ. ಈ ಹಾಡಿ‌ನಲ್ಲಿಯೇ ಬೇರೆ ಬೇರೆ ಭಾಷೆಯ ವರ್ಷನ್‌ಗಳೂ ಕೂಡ ಆರಂಭವಾಗಿವೆ. ಈ ಮಟ್ಟದ ಜನಪ್ರಿಯತೆ ಗಳಿಸಿದ ನಂತರ ನಟಿ ಪ್ರಿಯಾ ತಮ್ಮ ಬಗ್ಗೆ ನೇರವಾಗಿ ಫ್ಯಾನ್ಸ್ ಜೊತೆಗೆ ಮಾತನಾಡಿದ್ದಾರೆ.
 
ಯೂಟ್ಯೂಬ್‌ನಲ್ಲಿ ಪ್ರಿಯಾ ಮೊದಲ ಸಿನಿಮಾದ ಮೊದಲ ಹಾಡು ನಿನ್ನೆಯಿಂದ ಟ್ರೆಂಡಿಂಗ್ ನಂ 1 ನಲ್ಲಿ ಇದೆ. 4 ಮಿಲಿಯನ್ ಜನರು ಈ ಹಾಡನ್ನು ವೀಕ್ಷಿಸಿದ್ದು ಈಗಾಗಲೇ 45 ಲಕ್ಷಕ್ಕೂ ಹೆಚ್ಚು ಹಿಟ್ಸ್ ಬಂದಿವೆ.
 
ಸೋಶಿಯಲ್ ಮೀಡಿಯಾದ ಹೊಸ ಸೆನ್ಸೇಷನ್ ಆಗಿ ರೂಪುಗೊಂಡಿರುವ 18 ವರ್ಷದ ಪ್ರಿಯಾ ಪ್ರಕಾಶ್ ವಾರಿಯರ್ ಜನಿಸಿದ್ದು ಕೇರಳದ ತ್ರಿಶೂರಿನಲ್ಲಿ. ಪ್ರಿಯಾ ತ್ರಿಶೂರಿನ ವಿಮಲಾ ಕಾಲೇಜಿನಲ್ಲಿ ಬಿ. ಕಾಂ ಮೊದಲ ವರ್ಷದಲ್ಲಿ ಓದುತ್ತಿದ್ದಾರೆ. ಒರು ಆದಾರ್ ಚಿತ್ರದಲ್ಲಿಯೂ ಸಹ ಪ್ರಿಯಾ ವಿದ್ಯಾರ್ಥಿನಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಾಧಿಕಾ ಪಂಡಿತ್ ಮಡಿಲಿಗೆ ಬಂತು ಮುದ್ದು ಕಂದಮ್ಮ!

ಬೆಂಗಳೂರು: ಪತಿ ರಾಕಿಂಗ್ ಸ್ಟಾರ್ ಯಶ್ ರನ್ನು ಬಿಟ್ಟು ಅಮೆರಿಕಾ ವಿಮಾನವೇರಿ ಅಣ್ಣನ ಮನೆಗೆ ತೆರಳಿರುವ ...

news

ಮದುವೆ ಆನಿವರ್ಸರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಗೆ ಭರ್ಜರಿ ಗಿಫ್ಟ್ ಕೊಟ್ಟವರಾರು ಗೊತ್ತಾ?!

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಗೆ ನಿನ್ನೆ ಸ್ಪೆಷಲ್ ದಿನ. ಇಬ್ಬರೂ ವೈವಾಹಿಕ ಜೀವನಕ್ಕೆ ...

news

ನಟಿ ಪ್ರಿಯಾಂಕ ಚೋಪ್ರಾ ಬಾಯ್ ಫ್ರೆಂಡ್ ಯಾರು ಗೊತ್ತಾ...?

ಮುಂಬೈ: ನಟಿ ಪ್ರಿಯಾಂಕ ಚೋಪ್ರಾ ಮದುವೆ, ಮಕ್ಕಳ ಕನಸಿನ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದರು. ಈಗ ...

news

ಚುನಾವಣೆಗೆ ಸಂಬಂಧಿಸಿದಂತೆ ಜನರಿಗೆ ಕಿಚ್ಚ ಸುದೀಪ್ ನೀಡಿರುವ ಸಂದೇಶವೇನು ಗೊತ್ತಾ...?

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ...

Widgets Magazine