Widgets Magazine

ನನ್ನ ಪತಿ ವರ್ಜಿನ್ ಅಲ್ಲ, ಗರ್ಲ್‌ಫೆಂಡ್ ಇದ್ದಾರೆ ಏನ್ ಮಾಡಲಿ: ನಟಿ ಸ್ವಾತಿ

ಹೈದ್ರಾಬಾದ್| Rajesh patil| Last Modified ಗುರುವಾರ, 14 ಮಾರ್ಚ್ 2019 (19:53 IST)
ಅಶ್ಲೀಲ ಸಿನೆಮಾಗಳಲ್ಲಿ ನಟಿಸಿ ಖ್ಯಾತಿ ಪಡೆದ ಸ್ವಾತಿ ನಾಯ್ಡು ಅವಿನಾಶ್ ಎನ್ನುವವರನ್ನು ಫೆಬ್ರವರಿ ತಿಂಗಳಲ್ಲಿ ವಿವಾಹವಾಗಿದ್ದಾರೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಪಾಲ್ಗೊಂಡ ಸ್ವಾತಿ ನಾಯ್ಡು ಹಲವು ಆಸಕ್ತಿಕರ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ.
ಸುಮಾರು ಎಂಟು ತಿಂಗಳುಗಳಿಂದ ಲೈವ್-ಇನ್-ರಿಲೇಶನ್‌‌ಶಿಪ್‌ನಲ್ಲಿ ಸಹಜೀವನ ಸಾಗಿಸಿದ ಸ್ವಾತಿ ನಾಯ್ಡು ಮತ್ತು ಅವಿನಾಶ್ ದಂಪತಿಗಳು ಕೊನೆಗೆ ವಿವಾಹವಾಗುವುದಕ್ಕೆ ನಿರ್ಧರಿಸಿದ್ದರಿಂದ ಇದೀಗ ದಂಪತಿಗಳಾಗಿದ್ದೇವೆ ಎಂದು ತಿಳಿಸಿದ್ದಾರೆ.
 
ಸಂದರ್ಶನದಲ್ಲಿ ನಿಮ್ಮ ಪತಿ ವರ್ಜಿನ್ ಆಗಿದ್ದಾರಾ? ನಿಮ್ಮೊಂದಿಗೆ ನಡೆಸಿದ ಮೊದಲ ರಾತ್ರಿ ಹೇಗಿತ್ತು? ಎನ್ನುವ ಪ್ರಶ್ನೆಗೆ ತಡಬಡಿಸಿದ ಸ್ವಾತಿ ನಾಯ್ಡು, ಅವರು ವರ್ಜಿನ್ ಅಲ್ಲ. ನನಗಿಂತ ಮೊದಲೇ ಅವರಿಗೆ ತುಂಬಾ ಗರ್ಲ್‌ಫ್ರೆಂಡ್ ಇದ್ದಾರೆ ಎಂದು ಹೇಳಿದ್ದಾರೆ.
 
ಈ ಕಾಲದಲ್ಲಿ ಯಾರು ವರ್ಜಿನ್ ಆಗಿರುತ್ತಾರೆ? ಒಂದು ವೇಳೆ ಯಾರಾದರೂ ನಾನು ವರ್ಜಿನ್ ಎಂದು ಹೇಳಿದರೆ ಅದು ಖಂಡಿತ ಸುಳ್ಳಾಗಿರುತ್ತದೆ ಎಂದು ತಿಳಿಸಿದ್ದಾರೆ.
 
ಪತ್ನಿ ಸ್ವಾತಿ ನಾಯ್ಡು ಧ್ವನಿಗೆ ಧ್ವನಿಗೂಡಿಸಿದ ಪತಿ ಅವಿನಾಶ್, ಸ್ವಾತಿ ಹೇಳಿದಂತೆ ನಾನು ಯಾವತ್ತೂ ವರ್ಜಿನ್ ಎಂದು ಹೇಳಿಲ್ಲ. ನನಗೆ ಹಲವಾರು ಜನ ಗರ್ಲ್‌ಫ್ರೆಂಡ್ ಇದ್ದಾರೆ. ಲೈಂಗಿಕ ಕ್ರಿಯೆ ಎನ್ನುವುದು ಮಾನವರ ಭಾವನಾತ್ಮಕ ಕ್ರಿಯೆ.ಕೆಲವು ಬಾರಿ ಕಾಮವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
 
ಪತಿಯ ನಂತರ ಹೇಳಿಕೆ ನೀಡಿದ ಸ್ವಾತಿ, ಕೆಲವರು ದುರ್ಬಲ ಸ್ಥಿತಿಯಲ್ಲಿ ಬೇರೆಯವೊರಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಅದಕ್ಕಾಗಿ ಪಶ್ಚಾತಾಪ ಪಡುತ್ತಾರೆ ಎಂದು ಸ್ವಾತಿ ನಾಯ್ಡು ಹಿತವಚನ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :