ನೇಹಾ ಧುಪಿಗೆ ಇನ್ನಷ್ಟು ಅಂಗಾಂಗ ತೋರ್ಸಿ, ಸೆಕ್ಸಿಯಾಗಿ ವರ್ತಿಸಿ ಎಂದವನಿಗೆ ಏನ್ ಮಾಡಿದ್ಳು ಗೊತ್ತಾ?

ನಾಗಶ್ರೀ ಭಟ್ 

ಬೆಂಗಳೂರು, ಶನಿವಾರ, 3 ಫೆಬ್ರವರಿ 2018 (14:04 IST)

ನೇಹಾ ಧುಪಿಯಾ ಜೊತೆ ಯಾವುದೇ ಕಾರಣಕ್ಕೂ ಮೆಸ್ ಮಾಡಿಕೊಳ್ಳಬೇಡಿ. ಟ್ವಿಟ್ಟಿಗನೊಬ್ಬ "ಇನ್ನಷ್ಟು ಮತ್ತು ಸೆಕ್ಸ್ ಮಾಡಿ" ಎಂದು ಮಾಡಿದ ಟ್ವೀಟ್‌ ಅನ್ನು ಕಡೆಗಣಿಸದೇ ಆ ವ್ಯಕ್ತಿಗೆ ಸರಿಯಾದ ಪೆಟ್ಟು ನೀಡಿದ್ದಾರೆ.
ನೇಹಾ ಬುಧವಾರ, "ಜೀವನ ತುಂಬಾ ಚಿಕ್ಕದು... ನಾನು ಪ್ರಯಾಣಿಸಬೇಕಾದುದು ಇನ್ನೂ ತುಂಬಾ ಇದೆ...#notetoself." ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಆದಿತ್ಯಾ ಭಟ್‌ನಗರ್ ಎನ್ನುವವರು ಪ್ರತಿಕ್ರಿಯಿಸುತ್ತಾ "@ನೇಹಾ ಧುಪಿಯಾ ಮ್ಯಾಮ್ ಜೀವನ ತುಂಬಾ ಚಿಕ್ಕದು ಆದ್ದರಿಂದ ಇನ್ನಷ್ಟು ಅಂಗಾಂಗ ಪ್ರದರ್ಶನ ಮತ್ತು ಸೆಕ್ಸ್ ಮಾಡಿ" ಎಂದು ಪ್ರತಿಕ್ರಿಯಿಸಿದ್ದಾರೆ. ನೇಹಾ ಅವರ ಈ ಪ್ರತಿಕ್ರಿಯೆಯನ್ನು ಹಲವರು ಅಭಿನಂದಿಸಿದ್ದಾರೆ.
 
ನೇಹಾ ಈ ಟ್ರೋಲ್ ಅನ್ನು ನಿರ್ಲಕ್ಷಿಸದೇ ಆ ವ್ಯಕ್ತಿಗೆ ಅವನದೇ ರೀತಿಯಲ್ಲಿ ಉತ್ತರಿಸುತ್ತಾ "ಜೀವನ ತುಂಬಾ ಚಿಕ್ಕದಾಗಿದೆ. ಆದ್ದರಿಂದ ಕೆಟ್ಟದ್ದನ್ನು ಕಡಿಮೆ ಮಾತನಾಡಿ ಮತ್ತು ನಿಮ್ಮ ದುರುದ್ದೇಶಪೂರಿತ ಮನಸ್ಸನ್ನು ನೋಡಿಕೊಳ್ಳಿ. #FreeKaGyan(ಉಚಿತ ಬೋಧನೆ)" ಎಂದು ಪ್ರತಿಕ್ರಿಯಿಸಿದ್ದಾರೆ.
 
ನೇಹಾ ಧುಪಿಯಾ ಟ್ವಿಟ್ಟರ್‌ನಲ್ಲಿ ಟ್ರೋಲ್‌ಗೆ ಒಳಗಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರದ ಕುರಿತು ಟ್ವೀಟ್ ಮಾಡಿ ಟ್ವಿಟ್ಟಿಗರಿಂದ ಟ್ರೋಲ್‌ಗೊಳಗಾಗಿದ್ದರು. 'ಮೋದಿಯವರು #ಸೆಲ್ಫೀ ವಿತ್ ಡಾಟರ್ ಮತ್ತು ಯೋಗದ ದಿನಾಚರಣೆಯ ಅಭಿಯಾನವನ್ನು ಉತ್ತಮವಾಗಿ ನಡೆಸಿದ್ದಾರೆ ಆದರೆ ಉತ್ತಮ ಸರ್ಕಾರವೆಂದರೆ ಕೇವಲ ಸೆಲ್ಫೀ ತೆಗೆದುಕೊಳ್ಳುವುದು ಮತ್ತು ಯೋಗ ಮಾಡುವುದಲ್ಲ, ದೇಶದ ಪ್ರಜೆಗಳು ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದಾಗಿದೆ' ಎಂದು ಹೇಳಿದ್ದರು.
 
ಇನ್ನು ನೇಹಾ ಧುಪಿಯಾ ವೃತ್ತಿ ಜೀವನದ ಕಡೆ ಬಂದರೆ ಅವರು ಕೊನೆಯದಾಗಿ ವಿದ್ಯಾ ಬಾಲನ್ ಅವರು ನಟಿಸಿದ್ದ ತುಮ್ಹಾರಿ ಸುಲು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತವಾಗಿ ಅವರು ಬಿಎಫ್‌ಎಫ್‌ ವಿತ್ ವೋಗ್ ಎನ್ನುವ ಚಾಟ್ ಶೋ ಒಂದನ್ನು ಹೋಸ್ಟ್ ಮಾಡುವಲ್ಲಿ ನಿರತರಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕತ್ರಿನಾ ಕೈಫ್, ಸ್ನೇಹಿತೆ ಆಲಿಯಾ ಭಟ್ ವಿವಾಹಕ್ಕಾಗಿ ಕಾಯುತ್ತಿದ್ದಾರಾ?

ಎರಡು ಪ್ರಮುಖ ಮಹಿಳೆಯರ ಬಾಲಿವುಡ್‌ನಲ್ಲಿ ಕಣ್ಣಿಗೆ ಕಣ್ಣು ಹಾಕಿ ನೋಡಲು ಸಾಧ್ಯವಾಗದ ದಿನಗಳು ಹಳೆಯದಾಗಿವೆ. ...

news

ಥಗ್ಸ್ ಆಫ್ ಹಿಂದೂಸ್ಥಾನ್: ಕತ್ರಿನಾ ಕೈಫ್‌ಳ ವೀಡಿಯೋ ನೋಡಿದ್ರೆ ದಂಗಾಗುವಿರಿ

ಕತ್ರಿನಾ ಕೈಫ್ ಅವರ ಮುಂಬರುವ ಚಲನಚಿತ್ರ ಥಗ್ಸ್ ಆಫ್ ಹಿಂದೂಸ್ಥಾನ್‌‌ನಲ್ಲಿ ಅಮೀರ್ ಖಾನ್, ಅಮಿತಾಭ್ ಬಚ್ಚನ್ ...

news

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಡುವೆ ಕುಚ್‌ ಕುಚ್‌?

ಬೆಳ್ಳಿ ಪರದೆಗೆ ಪ್ರವೇಶಿಸುವ ಮೊದಲೇ ರಣಬೀರ್ ಕಪೂರ್ ತಮ್ಮ ಅಚ್ಚುಮೆಚ್ಚಿನ ನಾಯಕರಾಗಿದ್ದಾರೆ ಎಂದು ಆಲಿಯಾ ...

news

ಸ್ಯಾಂಡಲ್ ವುಡ್ ನ ಸ್ಟಾರ್ ಗಳು ಬೀದಿ ನಾಟಕವಾಡಲು ಮುಂದಾಗಿದ್ದು ಯಾಕೆ ಗೊತ್ತಾ...?

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ಸ್ಟಾರ್ಸ್ ಗಳೀಗ ಬೀದಿ ನಾಟಕ ಮಾಡಲು ಮುಂದಾಗಿದ್ದಾರೆ ಎಂಬ ...

Widgets Magazine
Widgets Magazine