Widgets Magazine
Widgets Magazine

'ಪದ್ಮಾವತಿ' ಇಂದ 'ಪದ್ಮಾವತ್' ಆದರೂ ಬಿಡುಗಡೆ ಭಾಗ್ಯವಿಲ್ಲ...!?

ನಾಗಶ್ರೀ ಭಟ್ 

ಬೆಂಗಳೂರು, ಮಂಗಳವಾರ, 9 ಜನವರಿ 2018 (18:49 IST)

Widgets Magazine

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಚಿತ್ರವನ್ನು ರಾಜಸ್ಥಾನದಲ್ಲಿ ಬಿಡುಗಡೆ ಮಾಡುವಂತಿಲ್ಲ ಎಂದು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಹೇಳಿದ್ದಾರೆ.

ಈ ಹಿಂದೆ ಪದ್ಮಾವತಿ ಎಂಬ ಹೆಸರಿನ ಮೂಲಕ ಬಾರಿ ಈ ಚಿತ್ರ ಬಾರಿ ವಿವಾದಕ್ಕೆ ಕಾರಣವಾಗಿತ್ತು. ನಂತರ ಅದನ್ನು  ಪದ್ಮಾವತಿಯಿಂದ ಪದ್ಮಾವತ್ ಎಂದು ಮರುನಾಮಕರಣ ಮಾಡಿ ಬಿಡುಗಡೆಗೆ ಸಿದ್ಧಗೊಳಿಸಿದರೂ ಈ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.
 
ಹೌದು ಇದೇ ಜನೇವರಿ 25 ರಂದು ಪದ್ಮಾವತ್ ಚಿತ್ರ ಬಿಡುಗಡೆಯಾಗುತ್ತಿದೆ. ಈ ಕುರಿತಂತೆ ಹೇಳಿಕೆ ನೀಡಿರುವ ಗುಜರಾತ್ ಮುಖ್ಯಮಂತ್ರಿ ವಸುಂಧರಾ ರಾಜೆ, ರಾಣಿ ಪದ್ಮಿನಿಯ ತ್ಯಾಗವು ರಾಜ್ಯದ ಗೌರವ ಮತ್ತು ಘನತೆಯ ಪ್ರತೀಕವಾಗಿದೆ. ಆದ್ದರಿಂದ ರಾಣಿ ಪದ್ಮಿನಿ ಇತಿಹಾಸದಲ್ಲಿ ಒಂದು ಅಧ್ಯಾಯ ಮಾತ್ರವಲ್ಲ ಅದು ನಮ್ಮ ರಾಜ್ಯದ ಘನತೆಯಾಗಿದ್ದು ಅದಕ್ಕೆ ದಕ್ಕೆ ಆಗದಂತೆ ನೆಡೆದುಕೊಳ್ಳುವುದು ನಮ್ಮೆಲ್ಲರ ಹೊಣೆ ಹಾಗಾಗೀ ಈ ಚಿತ್ರವು ಅವರ ಕುರಿತಾಗಿದ್ದು, ಅವರಿಗೆ ಅಪಮಾನವಾಗುವುದಕ್ಕೆ ನಾವು ಆಸ್ಪತ ಕೊಡುವುದಿಲ್ಲ ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ಪದ್ಮಾವತ್ ಚಿತ್ರವು ಹಿಂದಿನ ಕಾಲದ ರಜಪೂತ ಸಂಸ್ಥಾನಕ್ಕೆ ಸೇರಿದ ಕಥೆಯಾಗಿದ್ದು, ರಾಜ್ಯದ ಜನರ ಭಾವನೆಗಳನ್ನು ಗಮನದಲ್ಲಿರಿಸಿಕೊಂಡು ಈ ಚಿತ್ರವನ್ನು ರಾಜಸ್ಥಾನದಲ್ಲಿ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
 
ಹಲವಾರು ರಜಪೂತ ಸಂಸ್ಥೆಗಳು ಸೇರಿಕೊಂಡು 'ಪದ್ಮಾವತ್' ಬಿಡುಗಡೆಯನ್ನು ವಿರೋಧಿಸಿ ಪ್ರತಿಭಟಿಸಿರುವುದು ಮಾತ್ರವಲ್ಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಿದಲ್ಲಿ ಪೆಟ್ರೋಲ್‌ ಸುರಿದು ಬಂದು ಬೆಂಕಿ ಹಾಕುವುದಾಗಿ ಬೆದರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ರಾಷ್ಟ್ರೀಯ ರಜಪೂತರ ಕರ್ಣಿ ಸೇನಾ ಅಧ್ಯಕ್ಷರಾದ ಸುಖದೇವ್ ಸಿಂಗ್ ಗೋಗೆಮಿಡಿ ಅವರು ನಮ್ಮ ತಾಯಿ ರಾಣಿ ಪದ್ಮಾವತಿಯ ಘನತೆಗೆ ದಕ್ಕೆ ಬರುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದಷ್ಟೇ ಅಲ್ಲ ಒಂದು ವೇಳೆ ಈ ಚಿತ್ರವನ್ನು ಜ. 25ಕ್ಕೆ ಪ್ರದರ್ಶಿಸಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಸಂಸ್ಥೆ ಅನುವು ಮಾಡಿದಲ್ಲಿ ಭಾರತವೇ ಹೊತ್ತಿ ಉರಿಯಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.
 
ಚಿತ್ರ ನಿರ್ಮಾಣ ಹಂತದಿಂದ ಒಂದಲ್ಲಾ ಒಂದು ರೀತಿಯ ವಿವಾದಗಳಿಂದ ಸಾಕಷ್ಟು ಸಂಕಷ್ಟ ಎದುರಿಸಿದ್ದ ಈ ಚಿತ್ರಕ್ಕೆ ಬಿಡುಗಡೆ ಸಮಯದಲ್ಲಿ ಈ ಹೇಳಿಕೆಯು ದೊಡ್ಡ ಸವಾಲಾಗಿ ಪರಿಣಿಮಿಸಿದೆ. ಒಟ್ಟಿನಲ್ಲಿ ಚಿತ್ರವನ್ನು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳ ಪಾಲಿಗೆ ಮಾತ್ರ ಈ ವಿವಾದವು ನಿರಾಸೆ ಮಾಡಿರುವುದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಟಿಸರ್‌ನಲ್ಲಿ ಧೂಳೆಬ್ಬಿಸಿರುವ ಪ್ರಣಾಮ್ ದೇವರಾಜ್...!

ಸ್ಯಾಂಡಲ್‌ವುಡ್‌ನಲ್ಲಿ ದಿನದಿಂದ ದಿನಕ್ಕೆ ಹೊಸ ಪ್ರತಿಭೆಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಡೈನಾಮಿಕ್ ...

news

ಎಂಗೇಜ್ ಆದ ಅನಿಕಾ-ಸಚಿನ್ ಜೋಡಿ ಮದುವೆ ಮುರಿದುಬಿದ್ದಿದ್ದಕ್ಕೆ ಕಾರಣ ಯಾರು ಗೊತ್ತಾ...?

ಬೆಂಗಳೂರು : ಕಿರುತೆರೆ ನಟಿ ಅನಿಕಾ ಹಾಗು ಸಚಿನ್ ಅವರ ನಡುವೆ ಮದುವೆ ನಿಶ್ಚಯವಾಗಿದ್ದು, ಈಗ ಅದು ಕಾರುಣ್ಯ ...

news

ಬಲು ಜೋರಾಗಿತ್ತು ಯಶ್ ಬರ್ತ್ ಡೇ! ಯಶ್-ರಾಧಿಕಾ ಪಾರ್ಟಿಗೆ ಯಾರೆಲ್ಲಾ ಬಂದಿದ್ದರು ಗೊತ್ತಾ? (ಫೋಟೋ ಗ್ಯಾಲರಿ)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಿನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಖುಷಿಗೆ ಸ್ಯಾಂಡಲ್ ...

news

ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ

ಬೆಂಗಳೂರು : ಇತ್ತೀಚೆಗೆ ಸ್ಯಾಂಡಲ್ ವುಡ್ ನಟ-ನಟಿಯರು ರಾಜಕೀಯಕ್ಕೆ ಇಳಿಯುತ್ತಿರುವುದರ ಬಗ್ಗೆ ...

Widgets Magazine Widgets Magazine Widgets Magazine