ಶ್ರೀದೇವಿಯನ್ನು ‘ಇದು ಯಾರು’ ಎಂದು ಕೇಳಿದ ರಿಷಿ ಕಪೂರ್ ಗೆ ಬಿಸಿಮುಟ್ಟಿಸಿದ ನೆಟ್ಟಿಗರು

ಮುಂಬೈ, ಮಂಗಳವಾರ, 7 ಆಗಸ್ಟ್ 2018 (08:32 IST)

ಮುಂಬೈ: ನಟ ರಿಷಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದೆಲ್ಲಾ ಒಂದು ಹೇಳಿಕೆ ನೀಡಿ ಟ್ರೋಲ್‌ಗೊಳಗಾಗುತ್ತಿರುತ್ತಾರೆ. ಮನಸ್ಸಿಗೆ ಅನಿಸಿದ್ದನ್ನ ನೇರವಾಗಿ ಹೇಳುವ ಜಾಯಮಾನ ನಟ ರಿಶಿ ಕಪೂರ್ ರದ್ದು.  ರಿಷಿ ಕಪೂರ್‌ ಇದೀಗ ತನ್ನ ಚಿತ್ರದ ವೀಡಿಯೋ ತುಣುಕುವೊಂದರಲ್ಲಿ ನೃತ್ಯ ಮಾಡಿದ ಶ್ರೀದೇವಿಯನ್ನು ಗುರುತಿಸದೆ 'ಇದು ಯಾರು' ಎಂದು ಕೇಳುವ ಮೂಲಕ ಸಿಕ್ಕಾಪಟ್ಟೆ ಟ್ರೋಲ್‌ಗೊಳಗಾಗಿದ್ದಾರೆ.

 
ಅಭಿಮಾನಿಯೊಬ್ಬ ‘ಕೌನ್ ಸಾಚಾ ಕೌನ್ ಜೂಟಾ' ಚಿತ್ರದ ಹಾಡಿನ ವಿಡಿಯೋನ GIF ಇಮೇಜ್ ಮಾಡಿ ಟ್ವೀಟ್ ಮಾಡಿದ್ದರು. ಅದನ್ನ ನೋಡಿದ ರಿಶಿ ಕಪೂರ್, ''ಇದು ಯಾವ ಸಿನಿಮಾ.? ನನ್ನ ಜೊತೆ ಇರುವ ನಟಿಯನ್ನು ಗುರುತು ಹಿಡಿಯಲು ಆಗುತ್ತಿಲ್ಲ'' ಎಂದು ಟ್ವೀಟಿಸಿದ್ದಾರೆ.

ಶ್ರೀದೇವಿಯನ್ನ ಕಂಡು ಹಿಡಿಯದ ರಿಶಿ ಕಪೂರ್ ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಸಾಕಷ್ಟು ಟೀಕೆಗಳು ಬರುತ್ತಿವೆ.
'ನಿಮಗೆ ಶ್ರೀದೇವಿ ಗುರುತು ಸಿಗಲಿಲ್ವಾ.? 'ನಾಗಿನ' ಹಾಗೂ 'ಚಾಂದಿನಿ' ಚಿತ್ರದಲ್ಲಿ ನೀವು ಶ್ರೀದೇವಿ ಜೊತೆ ನಟಿಸಿರಲಿಲ್ಲ ಅಂದ್ರೆ, ನಿಮ್ಮನ್ನ ಯಾರೂ ಗುರುತು ಹಿಡಿಯುತ್ತಿರಲಿಲ್ಲ'' ಎಂದು ಟ್ವೀಟಿಗರು ಲೇವಡಿ ಮಾಡಿದ್ದಾರೆ.

ಜ್ಞಾಪಕ ಶಕ್ತಿಗೆ ಏನಾಗಿದೆ.? 'ನಿಮ್ಮ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಕೊಟ್ಟ ಸೂಪರ್ ಸ್ಟಾರ್ ಶ್ರೀದೇವಿಯನ್ನ ಕಂಡು ಹಿಡಿಯಲು ನಿಮಗೆ ಸಾಧ್ಯ ಆಗಿಲ್ಲ ಅಂದ್ರೆ ನೀವು ನಿಮ್ಮ ಜ್ಞಾಪಕ ಶಕ್ತಿಯನ್ನ ಕಳೆದುಕೊಂಡಿರಬೇಕು. ಇಲ್ಲಾಂದ್ರೆ, ಅತಿಯಾಗಿ ಡ್ರಗ್ಸ್ ಸೇವಿಸಿರಬೇಕು. ಹೇಗಿದ್ದರೂ, ಬೇಗ ಹುಷಾರಾಗಿ' ಅಂತೆಲ್ಲಾ ಜನ ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಾಸ್ಟಿಂಗ್ ಕೌಚ್ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಚರ್ಚೆಗೆ ಒಳಪಟ್ಟ ಸುದ್ದಿಯೆಂದರೆ ಅದು ಕಾಷ್ಟಿಂಗ್ ಕೌಚ್. ...

news

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸೋನಾಲಿ ಬೇಂದ್ರೆ ಗೆಳತಿಯರ ಜತೆ ಖುಷಿಯ ಕ್ಷಣಗಳನ್ನು ಕಳೆದು ಹೇಳಿದ್ದೇನು?

ಮುಂಬೈ: ಕ್ಯಾನ್ಸರ್ ಗೆ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ...

news

ಪ್ರಿಯಾಂಕಳ ನಿರ್ಧಾರದಿಂದ ಬೇಸರಗೊಂಡ ಬನ್ಸಾಲಿ

ಮುಂಬೈ: ಪ್ರಿಯಾಂಕ ಚೋಪ್ರಾಳ ನಿರ್ಧಾರ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಬಿಕ್ ಜತೆ ಮದುವೆ ...

news

ಶೂಟಿಂಗ್ ಬಿಟ್ಟು ತರಾತುರಿಯಲ್ಲಿ ಅಮಿತಾಭ್ ಬಚ್ಚನ್ ಭಾರತಕ್ಕೆ ಬಂದಿದ್ಯಾಕೆ….?

ಮುಂಬೈ: ಬಲ್ಗೇರಿಯಾದಲ್ಲಿ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಅಭಿನಯಿಸುತ್ತಿರುವ ಬ್ರಹ್ಮಾಸ್ತ್ರ ಚಿತ್ರದ ...

Widgets Magazine