ಅನುಪಮ್ ಖೇರ್‌ರೊಂದಿಗೆ ನ್ಯೂಯಾರ್ಕ್ ಸುತ್ತಿದ ರಿಷಿ ಕಪೂರ್..

ಬೆಂಗಳೂರು, ಮಂಗಳವಾರ, 9 ಅಕ್ಟೋಬರ್ 2018 (15:45 IST)

ರಿಷಿ ಕಪೂರ್ ಸದ್ಯ ನ್ಯೂಯಾರ್ಕ್‌ನಲ್ಲಿದ್ದಾರೆ. ಬಿಡುವಿಲ್ಲದ ವೇಳಾಪಟ್ಟಿಯಿಂದ ಬಿಡುವು ಮಾಡಿಕೊಂಡಿರುವ ರಿಷಿ ಕಪೂರ್ ತಮ್ಮ ನಿಯಮಿತ್ ಚೆಕ್-ಅಪ್‌ಗಾಗಿ ನ್ಯೂಯಾರ್ಕ್‌ಗೆ ತೆರಳಿದ್ದಾರೆ. ಭಾನುವಾರ ಸಂಜೆ ಟ್ವಿಟ್ಟರ್‌ನಲ್ಲಿ ರಿಷಿ ಕಪೂರ್ ವೀಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಅದರಲ್ಲಿ ತಮ್ಮ ಆತ್ಮೀಯ ಸ್ನೇಹಿತ ಹಾಗೂ ಸಹ-ನಟರಾಗಿರುವ ಅನುಪಮ್ ಖೇರ್ ಅವರೊಂದಿಗೆ ನ್ಯೂಯಾರ್ಕ್ ಬೀದಿಗಳಲ್ಲಿ ನಡೆದಾಡುತ್ತಿರುವುದನ್ನು ನೋಡಬಹುದಾಗಿದೆ. "ನ್ಯೂಯಾರ್ಕ್, ಮ್ಯಾನ್ಹ್ಯಾಟನ್. ಮ್ಯಾಡಿಸನ್ ಅವೆನ್ಯೂದಲ್ಲಿ ಸಹೋದ್ಯೋಗಿ ಮತ್ತು ಹಳೆಯ ಸ್ನೇಹಿತ ಅನುಪಮ್ ಖೇರ್‌ ಜೊತೆಗೆ ಈ ಮಧ್ಯಾಹ್ನ ಇದು 'ಖೇರ್-ಫ್ರೀ' ಅಥವಾ 'ಕೇರ್-ಫ್ರೀ' " ಎನ್ನುವ ಶೀರ್ಷಿಕೆಯನ್ನು ಈ ವೀಡಿಯೊಗೆ ನೀಡಿದ್ದಾರೆ.
 
ಅನುಪಮ್ ಖೇರ್ ಸಹ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು ರಿಷಿ ಕಪೂರ್ ಅವರಿಗಾಗಿ ಟಿಪ್ಪಣಿಯೊಂದನ್ನು ಬರೆದಿದ್ದಾರೆ. ಅದರಲ್ಲಿ "ಆತ್ಮೀಯ #ರಿಷಿಕಪೂರ್!! ನಿಮ್ಮನ್ನು ಭೇಟಿ ಮಾಡಿರುವುದು ಮತ್ತು ಮ್ಯಾನ್ಹ್ಯಾಟನ್‌ನ ಬೀದಿಗಳಲ್ಲಿ ನಿಮ್ಮ ಜೊತೆ ಸಮಯವನ್ನು ಕಳೆದಿರುವುದು ತುಂಬಾ ಅದ್ಭುತವಾದುದು. ನೀವು ಅಂತಹ ದೊಡ್ಡ ಮತ್ತು ಮನೋರಂಜನಾ ಸಂಭಾಷಣಾವಾದಿ. ಭಾರತ, ನ್ಯೂಯಾರ್ಕ್, ಚಲನಚಿತ್ರಗಳ ಮ್ಯಾಜಿಕ್ ಮತ್ತು 'ವಿರಾಮದ' ಪ್ರಾಮುಖ್ಯತೆಯ ಕುರಿತು ನಿಮ್ಮೊಂದಿಗೆ ಮಾತನಾಡುವುದನ್ನು ಇಷ್ಟಪಡುತ್ತೇನೆ. ನಿಮ್ಮನ್ನು ಭೇಟಿಯಾಗಿ ತುಂಬಾ ಸಂತೋಷವಾಯಿತು." ಎಂದು ಬರೆದುಕೊಂಡಿದ್ದಾರೆ.
 
ಈ ಮೊದಲು ರಿಷಿ ಕಪೂರ್ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳುತ್ತಿದ್ದು ತಮ್ಮ ಅಭಿಮಾನಿಗಳು ಅನಗತ್ಯವಾಗಿ ಏನನ್ನಾದರೂ ಊಹಿಸಿಕೊಳ್ಳಬಾರದು ಎಂದು ಹಂಚಿಕೊಂಡಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟ ಸಲ್ಮಾನ್ ಖಾನ್ ಮೇಲೆ ಕಿಡಿಕಾರಿದ ಗಾಯಕ ಅಭಿಜಿತ್ ಭಟ್ಟಾಚಾರ್ಯ

ಮುಂಬೈ : ಪಾಕಿಸ್ತಾನದ ಗಾಯಕರನ್ನು ಪ್ರಮೋಟ್ ಮಾಡುತ್ತಿರುವುದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ...

news

ತನುಶ್ರೀ ದತ್ತಾ ಅವರ #ಮಿಟೂ ಚಳುವಳಿಯನ್ನು ಬೆಂಬಲಿಸಿದ ರಣವೀರ್ ಸಿಂಗ್...

ಚಿತ್ರರಂಗವು ಕೆಲಸ ಮಾಡಲು ಸುರಕ್ಷಿತವೇ ಅಥವಾ ಅಲ್ಲವೇ ಎಂಬುದರ ಕುರಿತು ನಡೆಯುತ್ತಿರುವ ಚರ್ಚೆಯ ಕುರಿತು ...

news

ನಟಿ ಕಂಗನಾರನ್ನು ಬಿಗಿದಪ್ಪಿಕೊಂಡು , ಅವರ ಕೇಶರಾಶಿಯ ಪರಿಮಳವನ್ನು ಆಘ್ರಾಣಿಸುತ್ತಿದ್ದ ಆ ನಿರ್ದೇಶಕ ಯಾರು ಗೊತ್ತಾ?

ಮುಂಬೈ : ಬಾಲಿವುಡ್ ನಟಿ ತನುಶ್ರೀ ದತ್ತ ಖ್ಯಾತ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ...

news

ಕಿರುತೆರೆ ನಟಿಯ ಮೇಲೆ ಸ್ನೇಹಿತನಿಂದ ಹಲ್ಲೆ

ಬೆಂಗಳೂರು : ಕಿರುತೆರೆ ನಟಿಯೊಬ್ಬಳ ಮೇಲೆ ಆಕೆಯ ಸ್ನೇಹಿತನೇ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಲ್ಲದೆ ...

Widgets Magazine