ಜೈಲು ವಾಸ ಅನುಭವಿಸುತ್ತಿರುವ ನಟ ಸಲ್ಮಾನ್ ಖಾನ್ !

ಜೋಧಪುರ, ಶುಕ್ರವಾರ, 6 ಏಪ್ರಿಲ್ 2018 (08:16 IST)

ಜೋಧಪುರ : ಕೃಷ್ಣ ಮೃಗ ಭೇಟೆಯಾಡಿದ ಪ್ರಕರಣದಡಿ ಅಪರಾಧಿ ಎಂದು ಸಾಬೀತಾದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಇದೀಗ ಸೆರೆಮನೆವಾಸ ಅನುಭವಿಸುತ್ತಿದ್ದಾರೆ.


ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧಪುರ್ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಅದರ ಪ್ರಕಾರ ಸಲ್ಮಾನ್ ಖಾನ್ ಅವರು ದೋಷಿ ಎಂದು ಅವರಿಗೆ 5 ವರ್ಷ ಜೈಲು ವಾಸ ಹಾಗೂ 10000 ರೂ. ದಂಡ ವಿಧಿಸಿ, ಈ ಪ್ರಕರಣಕ್ಕೆ ಸಂಬಂಧಿಸಿದ ಉಳಿದ ಆರೋಪಿಗಳನ್ನು  ಖುಲಾಸೆಗೊಳಿಸಿತ್ತು.


ಆದಕಾರಣ ಸಲ್ಮಾನ್ ಖಾನ್ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರ ಆರೋಗ್ಯ ತಪಾಸಣೆ ನಡೆಸಿ ಜೈಲಿಗೆ ಕರೆದೊಯ್ಯಲಾಗಿದೆ. ಇದೀಗ ಅವರನ್ನು ಜೈಲಿನಲ್ಲಿಯ ವಾರ್ಡ್‌ ನಂ. 2 ರಲ್ಲಿ ಇರಿಸಲಾಗಿದೆ. 106 ರನ್ನು ಕೈದಿ ನಂಬರ್‌ ಆಗಿ ನೀಡಲಾಗಿದೆ.


ಹಾಗೇ ಸಲ್ಮಾನ್ ಖಾನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿರುವ ಕಾರಣ ಅದರ ವಿಚಾರಣೆ ಶುಕ್ರವಾರ(ಇಂದು) ಬೆಳಿಗ್ಗೆ 10.30ಕ್ಕೆ ನಿಗದಿಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸೀಜರ್’ ಚಿತ್ರದ ಡೈಲಾಗ್ ಬಗ್ಗೆ ಜನರು ವಿರೋಧ ವ್ಯಕ್ತಪಡಿಸಿದ್ದು ಯಾಕೆ…?

ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸಿರುವ ‘ಸೀಜರ್’ ಚಿತ್ರದಲ್ಲಿ ಬರುವ ಡೈಲಾಗ್ ಒಂದರ ಬಗ್ಗೆ ...

news

ಮೂರು ವರ್ಷಗಳ ನಂತರ ಒಂದಾಗಲಿರುವ ಮಾಜಿ ಲವರ್ಸ್ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ

ಮುಂಬೈ : ಹಿಂದೊಮ್ಮೆ ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ದೀಪಿಕಾ ಪಡುಕೋಣೆ ಅವರು ಒಬ್ಬರನೊಬ್ಬರು ...

news

ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಗೆ ಒಲಿದು ಬಂದ ಬಂಫರ್ ಆಫರ್ ಏನು ಗೊತ್ತಾ …?

ಬೆಂಗಳೂರು : ಕನ್ನಡ ಬಿಗ್ ಬಾಸ್ ಸೀಸನ್ 5 ರ ರನ್ನರ್ ಅಪ್ ಆದ ದಿವಾಕರ್ ಅವರಿಗೆ ಇದೀಗ ಸ್ಯಾಂಡಲ್ ವುಡ್ ನ ...

news

ನಟಿ ರಾಧಿಕಾ ಪಂಡಿತ್ ಯಶ್ ರವರ ‘ಕೆಜಿಎಫ್’ ಚಿತ್ರದ ಶೂಟಿಂಗ್ ಸೆಟ್ ನಿಂದ ತೆಗೆದುಕೊಂಡು ಬಂದ ವಸ್ತು ಯಾವುದು..?

ಬೆಂಗಳೂರು : ನಟ ಯಶ್ ಅವರ ‘ಕೆಜಿಎಫ್’ ಚಿತ್ರದ ಶೂಟಿಂಗ್ ಸೆಟ್ ಗೆ ಅವರ ಪತ್ನಿ, ನಟಿ ರಾಧಿಕಾ ಪಂಡಿತ್ ಅವರು ...

Widgets Magazine
Widgets Magazine