ಶಾರುಖ್ ಖಾನ್ ಮೇಲೆ ಅಭಿಮಾನಿಗಳು ಕೋಪಗೊಂಡಿದ್ಯಾಕೆ?

ಮುಂಬೈ, ಬುಧವಾರ, 13 ಜೂನ್ 2018 (12:39 IST)

ಮುಂಬೈ : ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ನಟರಾದ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ಇದೀಗ ಒಂದು ವಿಚಾರಕ್ಕೆ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.


​ ನಟ ಶಾರೂಖ್​ ಖಾನ್​​ ಸಹೋದರಿ ನೂರ್​​ ಜಹಾನ್ ಅವರು ಜುಲೈ 25ರಂದು ನಡೆಯಲಿರುವ ಪಾಕಿಸ್ತಾನದ ಚುನಾವಣೆಯಲ್ಲಿ ಪೆಶಾವರ್​ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಕೇಳಿಬಂದಿತ್ತು. ಈ ಸುದ್ದಿ ಕೇಳಿದ ಶಾರುಖ್ ಖಾನ್ ಅವರ ಅಭಿಮಾನಿಗಳು ಕೋಪಗೊಂಡು,’ ಶಾರೂಖ್​ ಖಾನ್​​ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದಾರೆ, ಅಲ್ಲೇ ಹೋಗಿ ಸೆಟಲ್​ ಆಗಿಬಿಡಲಿ. ಹಣ ಭಾರತದ್ದು, ಅಧಿಕಾರ ಪಾಕಿಸ್ತಾನದ್ದು. ಶಾರೂಖ್​ ಖಾನ್ ​ ಪಾಕಿಸ್ತಾನಕ್ಕೆ ಸಲಾಮ್ ಹೊಡೆದು ಸಿನಿಮಾಗಳನ್ನ ನೋಡಲು ಹೇಳ್ತಾರೆ. ಪಾಕಿಸ್ತಾನಕ್ಕೆ ಹಣ ದೇಣಿಗೆ ನೀಡ್ತಾರೆ. ದಾಳಿ ನಡೆದ ಬೆನ್ನಲ್ಲೇ ಪಾಕಿಸ್ತಾನಿ ನಟಿಯನ್ನ ಲಾಂಚ್​ ಮಾಡಿದ್ರು. ಹಫೀಜ್​ ಸಯೀದ್​​ ಜೊತೆ ಶಾರೂಖ್​ ​ಗೆ ನಂಟಿದೆ. ಐಪಿಎಲ್ ​ನಲ್ಲಿ ಯಾವಾಗ್ಲೂ ಪಾಕಿಸ್ತಾನಿ ಆಟಗಾರರು ಇರಬೇಕು ಅಂತಾರೆ, ಅವರಿಗೆ ಬೆಂಬಲ ನೀಡ್ತಾರೆ. ಆದ್ರೂ ಭಾರತ ಅಸಹಿಷ್ಣುತೆಯ ದೇಶ ಅಂತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮತ್ತೆ ಮದುವೆಯಾಗುತ್ತಾರಾ ಕರೀಷ್ಮಾ ಕಪೂರ್. ಈ ಬಗ್ಗೆ ಕರೀಷ್ಮಾ ತಂದೆ ಹೇಳಿದ್ದೇನು?

ಮುಂಬೈ : ಪತಿಯಿಂದ ವಿಚ್ಚೇದನ ಪಡೆದ ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರು ಮುಂಬೈ ಮೂಲದ ಉದ್ಯಮಿ ಸಂದೀಪ್ ...

news

ನಟ ದರ್ಶನ್ ಹೆಸರಿನ ನಕಲಿ ಫೇಸ್ ಬುಕ್ ಖಾತೆಯಲ್ಲಿ ಸಿಎಂಗೆ ಅವಮಾನ ಮಾಡಿದ ಕಿಡಿಗೇಡಿಗಳು

ಬೆಂಗಳೂರು : ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಸ್ಯಾಂಡಲ್ ...

news

ಸ್ಟಂಟ್ ಮಾಡಲು ಹೋಗಿ ಕಣ್ಣಿಗೆ ಶಾಶ್ವತ ಗಾಯಮಾಡಿಕೊಂಡ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಮುಂಬೈ : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ರೇಸ್-3 ಚಿತ್ರದ ಶೂಟಿಂಗ್ ವೇಳೆ ಸ್ಟಂಟ್ ಮಾಡಲು ...

news

ಭಾರತೀಯ ಸಿನಿಮಾ ಡ್ಯಾನ್ಸ್‌ ಬಗ್ಗೆ ಮಾತನಾಡಿ ಟ್ರೋಲ್ ಆದ ನಟಿ ಪ್ರಿಯಾಂಕ ಚೋಪ್ರ

ಮುಂಬೈ : ಇತ್ತೀಚೆಗಷ್ಟೇ ಅಮೇರಿಕಾದ ಕ್ವಾಂಟಿಕೋ ಶೋ ಕುರಿತು ವಿವಾದಕ್ಕೀಡಾಗಿ ನಂತರ ಕ್ಷಮೆ ಕೇಳಿ ಸಮಸ್ಯೆ ...

Widgets Magazine