Widgets Magazine

ಮಣಿಕರ್ಣಿಕಾ ಚಿತ್ರತಂಡದಿಂದ ಹೊರನಡೆದ ನಟ ಸೋನು ಸೂದ್

ಮುಂಬೈ| pavithra| Last Modified ಸೋಮವಾರ, 3 ಸೆಪ್ಟಂಬರ್ 2018 (12:25 IST)
ಮುಂಬೈ : ನಟಿ ಕಂಗನಾ ರಾಣೌತ್ ನಟಿಸುತ್ತಿರುವ 'ಮಣಿಕರ್ಣಿಕಾ ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದ ಶೂಟಿಂಗ್ ಮುಗಿಯುವ ಮೊದಲೆ ಇದೀಗ ಈ ಚಿತ್ರತಂಡದಲ್ಲಿ ವಿವಾದವೊಂದು ಶುರುವಾಗಿದೆ.


ಹೌದು. ಮಣಿಕರ್ಣಿಕಾ ಚಿತ್ರವನ್ನು ಜನವರಿಯಲ್ಲಿ ಬಿಡುಗಡೆ ಮಾಡಬೇಕು ಅಂತ ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ. ಆದರೆ ಚಿತ್ರದ ನಿರ್ದೇಶಕ ಕ್ರಿಶ್ ಇದೀಗ ಈ ಚಿತ್ರ ಬಿಟ್ಟು 'ಎನ್.ಟಿ.ಆರ್' ಸಿನಿಮಾದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.


ಆದಕಾರಣ ನಿರ್ಮಾಪಕರು ಈ ಚಿತ್ರವನ್ನು ನಿರ್ದೇಶನ ಮಾಡಲು ನಟಿ ಕಂಗನಾ ರಣೌತ್ ಅವರಿಗೆ ಹೇಳಿದ್ದಾರೆ. ಈ ಜವಬ್ದಾರಿಯನ್ನು ತೆಗೆದುಕೊಂಡ ನಟಿ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡುವುದರ ಜೊತೆಗೆ ಕೆಲ ಸೀನ್ ಗಳನ್ನ ರೀ ಶೂಟ್ ಮಾಡಲು ನಿರ್ಧಾರ ಮಾಡಿದ್ದಾರೆ.


ನಟಿ ಕಂಗನಾ ಅವರ ಈ ನಿರ್ಧಾರದಿಂದ ಕೋಪಗೊಂಡ ನಟ ಸೋನು ಸೂದ್ ಚಿತ್ರತಂಡದಿಂದ
ಹೊರಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :