ಶ್ರೀದೇವಿ ಅವರು ನಟಿಸಬೇಕಾಗಿದ್ದ ‘ಶಿದ್ದತ್’ ಚಿತ್ರಕ್ಕೆ ಈಗ ಈ ನಟಿ ಆಯ್ಕೆಯಾಗಿದ್ದಾರೆ!

ಮುಂಬೈ, ಬುಧವಾರ, 14 ಮಾರ್ಚ್ 2018 (07:11 IST)

ಮುಂಬೈ : ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿ ಅವರು ನಟಿಸಬೇಕಾಗಿದ್ದ ‘ಶಿದ್ದತ್’ ಚಿತ್ರದಲ್ಲಿ ಅವರ ಸ್ಥಾನಕ್ಕೆ ಬಾಲಿವುಡ್ ನ ಮತ್ತೊಬ್ಬ ಖ್ಯಾತ ನಟಿಯನ್ನು ಆಯ್ಕೆ ಮಾಡಲಾಗಿದೆ.


ಕರಣ್‌ ಜೋಹರ್‌ ಅವರ ನಿರ್ಮಾಣದಲ್ಲಿ ಮೂಡಿಬರಲಿರುವ ‘ಶಿದ್ದತ್’ ಚಿತ್ರದಲ್ಲಿ ನಟಿಸಬೇಕಾಗಿದ್ದ ಶ್ರೀದೇವಿ ಅವರು ನಿಧನರಾದ ಕಾರಣ ಆ ಸ್ಥಾನಕ್ಕೆ ಬಾಲಿವುಡ್ ನ ನಾಟ್ಯ ಮಯೂರಿ ಮಾಧುರಿ ದೀಕ್ಷಿತ್  ಅವರನ್ನು ಆರಿಸಲಾಗಿದೆ. ಈ ಬಗ್ಗೆ ಮಾಧುರಿ ಅವರ ಜೊತೆ ಚರ್ಚೆ ಕೂಡ ನಡೆಸಿದ್ದ ಚಿತ್ರತಂಡ ಶ್ರೀದೇವಿಯವರ ಅಕಾಲಿಕ ಮರಣದಿಂದ ಈ ಬದಲಾವಣೆ ಮಾಡಲಾಗಿದೆ.


ಶ್ರೀದೇವಿಯವರಿಗೆ ತುಂಬಾ ಆತ್ಮೀಯರಾಗಿದ್ದ ಮಾಧುರಿ ದೀಕ್ಷಿತ್‌ ಕೂಡಾ ಈ ಪಾತ್ರವನ್ನು ಚೆನ್ನಾಗಿ ಮಾಡಬಲ್ಲರು. ಇದು ಶ್ರೀದೇವಿಯವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಕೂಡಾ ಹೌದು ಎಂದು ತಿಳಿಸಿದೆ.


ಈ ಚಿತ್ರದಲ್ಲಿ ವರುಣ್‌ ಧವನ್‌, ಆಲಿಯಾ ಭಟ್‌, ಸಂಜಯ್‌ ದತ್‌, ಆದಿತ್ಯಾ ರಾಯ್‌ ಕಪೂರ್‌ ಮತ್ತು ಸೋನಾಕ್ಷಿ ಸಿನ್ಹಾ ಮುಂತಾದವರೂ ನಟಿಸಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಇಲಿಯಾನಾರಿಂದ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರ ಮೇಲೆ ಆರೋಪ; ಚಿಕ್ಕ ಚಿಕ್ಕ ಬಟ್ಟೆ ತೊಟ್ಟುಕೊಳ್ಳುವುದಕ್ಕೆ ಹೇಳಿದ್ದಕ್ಕೆ ನಟಿ ಪುಲ್ ಗರಂ!

ಮುಂಬೈ : ಸಿನಿಮಾ ರಂಗದಲ್ಲಿ ತಾರೆಯರು, ನಿರ್ದೇಶಕರ ಮೇಲೆ ಆರೋಪ ಮಾಡಿರುವುದನ್ನು ನಾವು ಅನೇಕ ಬಾರಿ ...

news

ನಟಿ ಶ್ರೀದೇವಿ ಸಾವನ್ನಪ್ಪಿದ ದುಬೈನ ಹೋಟೆಲ್ ರೂಂನಲ್ಲಿ ಇರುವುದಕ್ಕೆ ಯಾರೂ ಒಪ್ಪುತ್ತಿಲ್ಲವಂತೆ, ಇದಕ್ಕೆ ಕಾರಣವೇನು ಗೊತ್ತಾ…?

ಮುಂಬೈ : ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಅವರು ಮದುವೆಯ ನಿಮಿತ್ತ ದುಬೈಗೆ ತೆರಳಿ ಅಲ್ಲಿ ತಂಗಿದ್ದ ಹೋಟೆಲ್ ...

news

ಕೆ.ಮಂಜು ಅವರ 'ಪಡ್ಡೆ ಹುಲಿ' ಚಿತ್ರಕ್ಕೆ ಈ ನಟನೇ ಸ್ಪೂರ್ತಿಯಂತೆ!

ಬೆಂಗಳೂರು : ಇತ್ತಿಚೆಗಷ್ಟೇ ‘ಪಡ್ಡೆಹುಲಿ’ ಚಿತ್ರದ ಮುಹೂರ್ತ ಸಮಾರಂಭ ನೆರೆವೇರಿದ್ದು, ಈ ಸಂದರ್ಭದಲ್ಲಿ ...

news

ಜಾಹ್ನವಿ ಕಪೂರ್ ಅಭಿನಯದ ‘ಧಡಕ್’ ಚಿತ್ರದ ಶೂಟಿಂಗ್ ವೇಳೆ ಕರಣ್ ಜೋಹರ್ ಈ ನಿಯಮ ವಿಧಿಸಿದ್ದು ಯಾಕೆ?

ಮುಂಬೈ : ಬಾಲಿವುಡ್ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಅವರು ಮೊದಲ ಬಾರಿ ನಟಿಸುತ್ತಿರುವ ...

Widgets Magazine
Widgets Magazine